MS Dhoni: 12 ವರ್ಷಗಳ ಹಿಂದೆ ಚಾಂಪಿಯನ್ಸ್ ಲೀಗ್‌ನಲ್ಲಿ ಧೋನಿ ಬಾರಿಸಿದ್ದ ಸತತ 5 ಸಿಕ್ಸರ್‌ನ ವಿಡಿಯೊ ವೈರಲ್
Dhoni smashing five sixes: ಇನಿಂಗ್ಸ್‌ನ 18ನೇ ಓವರ್ ಎಸೆಯಲು ಬಂದ ತಿಸರ ಪೆರೆರಗೆ ಸತತವಾಗಿ 5 ಸಿಕ್ಸರ್ ಬಾರಿಸಿ ಧೋನಿ ಅಂತಿಮ ಎಸೆತವನ್ನು ಕೂಡ ಸಿಕ್ಸರ್‌ಗೆ ಬಡಿದಟ್ಟಲು ಮುಂದಾದರು. ಆದರೆ ಕೂದಲೆಳೆ ಅಂತರದಲ್ಲಿ ಸಿಕ್ಸರ್ ತಪ್ಪಿಹೋಗಿ ಬೌಂಡರಿ ದಾಖಲಾಯಿತು. ಒಟ್ಟು ಈ ಓವರ್‌ನಲ್ಲಿ ಧೋನಿ 34 ರನ್ ಕಸಿದರು. ಇದರಲ್ಲೊಂದು ಸಿಕ್ಸ್ 101 ಮೀಟರ್ ಚಿಮ್ಮಿತು.


ಮುಂಬಯಿ: 2014ರಲ್ಲಿ ಸ್ಥಗಿತಗೊಂಡಿದ್ದ ಚಾಂಪಿಯನ್ಸ್ ಲೀಗ್ ಟಿ20(CLT20) ಟೂರ್ನಿ ಮತ್ತೆ ಆರಂಭಗೊಳ್ಳುವ ನಿರೀಕ್ಷೆಯಿದೆ. 2026ರ ಸೆಪ್ಟೆಂಬರ್ ತಿಂಗಳಲ್ಲಿ ಲೀಗ್ ನಡೆಯಬಹುದು ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ 2013ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಬಾರಿಸಿ ಸತತ 5 ಸಿಕ್ಸರ್‌ನ ವಿಡಿಯೊ ವೈರಲ್(viral video) ಆಗಿದೆ.
2013ರಲ್ಲಿ ರಾಂಚಿಯಲ್ಲಿ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವಿನ ಚಾಂಪಿಯನ್ಸ್ ಲೀಗ್‌ನ 10 ನೇ ಪಂದ್ಯದಲ್ಲಿ ಧೋನಿ ಕೇವಲ 19 ಎಸೆತಗಳಲ್ಲಿ 63 ರನ್ ಗಳಿಸಿದ್ದರು. ಇದರಲ್ಲಿ ತಿಸರ ಪೆರೆರ ಬೌಲಿಂಗ್ ಮಾಡಿದ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳು ಸೇರಿತ್ತು.
ಇನಿಂಗ್ಸ್‌ನ 18ನೇ ಓವರ್ ಎಸೆಯಲು ಬಂದ ತಿಸರ ಪೆರೆರಗೆ ಸತತವಾಗಿ 5 ಸಿಕ್ಸರ್ ಬಾರಿಸಿ ಧೋನಿ ಅಂತಿಮ ಎಸೆತವನ್ನು ಕೂಡ ಸಿಕ್ಸರ್‌ಗೆ ಬಡಿದಟ್ಟಲು ಮುಂದಾದರು. ಆದರೆ ಕೂದಲೆಳೆ ಅಂತರದಲ್ಲಿ ಸಿಕ್ಸರ್ ತಪ್ಪಿಹೋಗಿ ಬೌಂಡರಿ ದಾಖಲಾಯಿತು. ಒಟ್ಟು ಈ ಓವರ್‌ನಲ್ಲಿ ಧೋನಿ 34 ರನ್ ಕಸಿದರು. ಇದರಲ್ಲೊಂದು ಸಿಕ್ಸ್ 101 ಮೀಟರ್ ಚಿಮ್ಮಿತು.
The god of cricket MS Dhoni's 5 sixes in an over in CLt20 🥵💛pic.twitter.com/ski5IoCLNz
— 𝙼𝚛.𝚅𝚒𝚕𝚕𝚊™ (@Shivayaaah) July 22, 2025
ಸಿಂಗಾಪುರದಲ್ಲಿ ಇತ್ತೀಚೆಗೆ ನಡೆದ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚಾಂಪಿಯನ್ಸ್ ಲೀಗ್ ಅನ್ನು ಮತ್ತೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಐಪಿಎಲ್, ಬಿಗ್‌ಬ್ಯಾಶ್ ಸೇರಿ ವಿವಿಧ ಲೀಗ್‌ಗಳ ಅಗ್ರ ತಂಡಗಳ ನಡುವಿನ ಟೂರ್ನಿ 2009ರಲ್ಲಿ ಆರಂಭಗೊಂಡಿತ್ತು. ಆದರೆ ವಿವಿಧ ಕಾರಣಗಳಿಂದಾಗಿ 2014ರಲ್ಲಿ ಸ್ಥಗಿತಗೊಂಡಿತ್ತು. ಈಗ ಹಲವು ದೇಶಗಳಲ್ಲಿ ಟಿ20 ಲೀಗ್ ನಡೆಯುತ್ತಿದ್ದು, ಅದರ ಜನಪ್ರಿಯತೆ ಕೂಡಾ ಹೆಚ್ಚಾಗಿವೆ. ಹೀಗಾಗಿ ಮತ್ತೆ ಚಾಂಪಿಯನ್ಸ್ ಲೀಗ್ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಟೂರ್ನಿಯಲ್ಲಿ ನ್ಯೂ ಸೌತ್ ವೇಲ್ಸ್(2009), ಚೆನ್ನೈ ಸೂಪರ್ ಕಿಂಗ್ಸ್(2010), ಮುಂಬೈ ಇಂಡಿಯನ್ಸ್(2011), ಸಿಡ್ನಿ ಸಿಕ್ಸರ್ಸ್(2012), ಮುಂಬೈ ಇಂಡಿಯನ್ಸ್(2013), ಚೆನ್ನೈ ಸೂಪರ್ ಕಿಂಗ್ಸ್(2014) ಚಾಂಪಿಯನ್ ಆಗಿವೆ.
ಇದನ್ನೂ ಓದಿ IND vs ENG: 4ನೇ ಪಂದ್ಯದ ಪಿಚ್ ರಿಪೋರ್ಟ್; ಹವಾಮಾನ ವರದಿ ಹೀಗಿದೆ