ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hong Kong Open: ಸೆ,ಮಿಫೈನಲ್‌ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟ ಸಾತ್ವಿಕ್‌-ಚಿರಾಗ್‌ ಜೋಡಿ!

Satwik-Chirag: ಪ್ರಸ್ತುತ ನಡೆಯುತ್ತಿರುವ ಹಾಂಕಾಂಗ್‌ ಓಪನ್‌ ಬಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ ಫೈನಲ್‌ಗೆ ಪ್ರವೇಶ ಮಾಡಿದೆ. ಶನಿವಾರ ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ಈ ಜೋಡಿ ತೈವಾನ್‌ ಜೋಡಿಯನ್ನು ಮಣಿಸಿತ್ತು.

ಹಾಂಕಾಂಗ್‌ ಓಪನ್‌ ಫೈನಲ್‌ಗೇರಿದ ಸಾತ್ವಿಕ್‌-ಚಿರಾಗ್‌.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಹಾಂಕಾಂಗ್‌ ಓಪನ್‌ (Hong Kong Open) ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ (Satwik-Chirag) ಫೈನಲ್‌ಗೆ ಪ್ರವೇಶ ಮಾಡಿದೆ. ಶನಿವಾರ ನಡೆದಿದ್ದ ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಏಷ್ಯನ್‌ ಗೇಮ್ಸ್‌ (Asia Games) ಚಿನ್ನದ ಪದಕ ವಿಜೇತ ಜೋಡಿ, ತೈವಾನ್‌ನ ಚೆನ್‌ ಚೆಂಗ್‌ ಕ್ಯೂನ್‌ ಮತ್ತು ಲಿನ್‌ ಬಿಂಗ್‌ ವೀ ಜೋಡಿಯನ್ನು 21-17, 21-15ರ ನೇರ ಗೇಮ್‌ಗಳಲ್ಲಿ ಮಣಿಸಿತು. ಆ ಮೂಲಕ 38 ನಿಮಿಷಗಳ ಕಾಲ ನಡೆದಿದ್ದ ಈ ಪಂದ್ಯದಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿ ಪ್ರಾಬಲ್ಯ ಸಾಧಿಸಿತು. ಪ್ರಸಕ್ತ ವರ್ಷದಲ್ಲಿ ಈ ಜೋಡಿ ಮೊದಲ ಬಾರಿ ಫೈನಲ್‌ಗೆ ಪ್ರವೇಶ ಮಾಡಿದಂತಾಗಿದೆ.

2024ರ ಥಾಯ್ಲೆಂಡ್‌ ಓಪನ್‌ ಬಳಿಕ ಇದೇ ಮೊದಲ ಬಾರಿ ಸಾತ್ವಿಕ್‌-ಚಿರಾಗ್‌ ಫೈನಲ್‌ಗೆ ಪ್ರವೇಶ ಮಾಡಿದಂತಾಗಿದೆ. ಈ ವರ್ಷದ ಆರಂಭದಲ್ಲಿ ಐದು ಸೆಮಿಫೈನಲ್ಸ್‌ ಹಣಾಹಣಿಗಳಲ್ಲಿ ಭಾರತದ ಜೋಡಿ ಸೋಲು ಅನುಭವಿಸಿತ್ತು. ಇದೀಗ ತಮ್ಮ ಆರನೇ ಪ್ರಯತ್ನದಲ್ಲಿ ಸಾತ್ವಿಕ್‌-ಚಿರಾಗ್‌ ಪ್ರಶಸ್ತಿ ಸುತ್ತಿಗೆ ಪ್ರವೇಶ ಮಾಡಿದಂತಾಗಿದೆ. ಕಳೆದ ಕೆಲ ತಿಂಗಳುಗಳಲ್ಲಿ ಪ್ರಶಸ್ತಿ ಗೆಲುವಿನ ಹಾದಿಯನ್ನು ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡಿದ್ದ ಭಾರತದ ಜೋಡಿ, ಇದೀಗ ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಮೂಡಿಸಿದೆ.

ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಾತ್ವಿಕ್‌–ಚಿರಾಗ್‌ ಜೋಡಿ

ಸೆಮಿಫೈನಲ್‌ ಪಂದ್ಯದ ಮೊದಲನೇ ಗೇಮ್‌ನಲ್ಲಿ ಭಾರತ ಹಾಗೂ ತೈವಾನ್‌ ಜೋಡಿಗಳ ನಡುವೆ ಭಾರಿ ಪೈಪೋಟಿ ನಡೆದಿತ್ತು. ಆದರೆ, ಸಾತ್ವಿಕ್‌ ಮತ್ತು ಚಿರಾಗ್‌ ಜೋಡಿ ಕೊನೆಯವರೆಗೂ ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ಈದರ ಫಲವಾಗಿ ಭಾರತದ ಜೋಡಿ 21-17ರ ಅಂತರದಲ್ಲಿ ಚೆನ್‌ ಚೆಂಗ್‌ ಮತ್ತು ಲಿನ್‌ ಬಿಂಗ್‌ ಜೋಡಿಯ ಅಧಿಕಾರಯುತ ಗೆಲುವನ್ನು ತನ್ನದಾಗಿಸಿಕೊಂಡಿತು. ನಂತರ ಎರಡನೇ ಗೇಮ್‌ನಲ್ಲಿಯೂ ಅದೇ ಲಯವನ್ನು ಮುಂದುವರಿಸಿದ ಭಾರತದ ಜೋಡಿ 21-15 ಅಂತರದಲ್ಲಿ ಗೆಲುವು ಪಡೆಯಿತು. ಆ ಮೂಲಕ ಫೈನಲ್‌ಗೆ ಪ್ರವೇಶ ಮಾಡಿದೆ.



ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿಯು ಫೈನಲ್‌ ಹಣಾಹಣಿಯಲ್ಲಿ ಆರನೇ ಶ್ರೇಯಾಂಕದ ಚಿನಾದ ಲಿಯಾಂಗ್‌ ವೀ ಕೆಂಗ್‌ ಮತ್ತು ವಾಂಗ್‌ ಚಾಂಗ್‌ ಜೋಡಿ ಅಥವಾ ತೈವಾನ್‌ನ ಲೀ ಫಂಗ್‌ ಚಿನ್ಹ್‌ ಮತ್ತು ಲೀ ಫಂಗ್‌ ಜೋಡಿಯ ವಿರುದ್ದ ಕಾದಾಟ ನಡೆಸಲಿದೆ.

ಫೈನಲ್‌ಗೆ ಲಕ್ಷ್ಯಸೇನ್‌ ಕಣ್ಣು

ಹಾಂಕಾಂಗ್‌ ಓಪನ್‌ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಲಕ್ಷ್ಯಸೇನ್‌ ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ. ಶನಿವಾರ ನಡೆಯುವ ಸೆಮಿಫೈನಲ್‌ನಲ್ಲಿ ಚೈನೀಸ್‌ ತೈಪೆ ಚೌ ಟೀಮ್‌ ಚೆನ್‌ ವಿರುದ್ಧ ಭಾರತದ ಆಟಗಾರ ಕಾದಾಟ ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಅವರು ಫೈನಲ್‌ಗೆ ಪ್ರವೇಶ ಮಾಡಲಿದ್ದಾರೆ.

ಲಕ್ಷ್ಯಸೇನ್‌ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಕಠಿಣ ಹೋರಾಟ ನಡೆಸಿ 22-20, 16-21, 21-15 ಅಂತರದಲ್ಲಿ ತೈವಾನ್‌ನ ವಾಂಗ್‌ ಟಿಝು ವೀ ವಿರುದ್ದ ಗೆದ್ದು ಅಂತಿಮ ನಾಲ್ಕರ ಸುತ್ತಿಗೆ ಪ್ರವೇಶ ಮಾಡಿದ್ದರು. ಇದಕ್ಕೂ ಮುನ್ನ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ತಮ್ಮದೇ ದೇಶದ ಆಟಗಾರ ಎಚ್‌ಎಸ್‌ ಪ್ರಣಯ್‌ ವಿರುದ್ದ 15-21, 21-18, 21-10 ಅಂತರದಲ್ಲಿ ಲಕ್ಷ್ಯಸೇನ್‌ ಗೆದ್ದಿದ್ದರು.