ರಿಕರ್ವ್ ಅರ್ಚರಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಧೀರಜ್ ಬೊಮ್ಮದೇವರ!
ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಧೀರಜ್ ಬೊಮ್ಮದೇವರ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಆ ಮೂಲಕ ರಿಕರ್ವ್ ಅರ್ಚರಿ ವಿಶ್ವಕಪ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಪುರುಷರ ರಿಕರ್ವ್ ಅಚ್ಚರಿ ಪಟು ಎಂಬ ಖ್ಯಾತಿಗೆ ಧೀರಜ್ ಭಾಜನರಾಗಿದ್ದಾರೆ. ಇವರು ಜಪಾನ್‌ನ ನಕನಿಶಿ ಅವರ ಎದುರು ಪ್ರಾಬಲ್ಯ ಸಾಧಿಸುವ ಮೂಲಕ ಚಾಂಪಿಯನ್ ಆಗಿದ್ದಾರೆ.