ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam terror attack: ಹೈದರಾಬಾದ್‌-ಮುಂಬೈ ಪಂದ್ಯದ ವೇಳೆ ಹುತಾತ್ಮರಿಗೆ ಗೌರವ ಸಲ್ಲಿಕೆ

ಬಿಸಿಸಿಐ ಪರವಾಗಿ, ಈ ಘೋರ ಮತ್ತು ಹೇಡಿತನದ ಕೃತ್ಯವನ್ನು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸುತ್ತಾ, ಮೃತರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಅಗಲಿದ ಆತ್ಮಗಳಿಗೆ ಪ್ರಾರ್ಥಿಸುತ್ತೇನೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸಂತಾಪ ಸೂಚಿಸಿ ಈ ಕೃತ್ಯವನ್ನು ಖಂಡಿಸಿದ್ದಾರೆ.

ಹೈದರಾಬಾದ್‌: ಕಾಶ್ಮೀರದ ಪಹಲ್ಗಾವ್‌ನಲ್ಲಿ ನಡೆದ ಭಯೋತ್ಪಾದಕರ(Pahalgam terror attack) ಭೀಕರ ದಾಳಿಯಲ್ಲಿ ಮಡಿದವರಿಗೆ ಸಂತಾಪ ಸೂಚಿಸುವ ಭಾಗವಾಗಿ ಬುಧವಾರ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್‌ನ(IPL 2025) ಮುಂಬೈ ಮತ್ತು ಹೈದರಾಬಾದ್‌ ನಡುವಣ ಪಂದ್ಯದಲ್ಲಿ ಆಟಗಾರರು, ಅಂಪೈರ್‌ಗಳು ಮತ್ತು ಪಂದ್ಯದ ಅಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಪಂದ್ಯ ಆರಂಭವಾಗುವ ಮೊದಲು ಒಂದು ನಿಮಿಷ ಮೌನ ಆಚರಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಜತೆಗೆ ಇಂದಿನ ಪಂದ್ಯದಲ್ಲಿ ಚಿಯರ್‌ಲೀಡರ್‌ಗಳು ಮತ್ತು ಪಟಾಕಿಗಳು ಇರುವುದಿಲ್ಲ ಎಂದು ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

'ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಅಮಾಯಕ ಜೀವಗಳ ದುರಂತ ನಷ್ಟದಿಂದ ಕ್ರಿಕೆಟ್ ಸಮುದಾಯ ತೀವ್ರ ಆಘಾತ ಮತ್ತು ದುಃಖಿತವಾಗಿದೆ' ಎಂದು ಬಿಸಿಸಿಐ ಗೌರವ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.

'ಬಿಸಿಸಿಐ ಪರವಾಗಿ, ಈ ಘೋರ ಮತ್ತು ಹೇಡಿತನದ ಕೃತ್ಯವನ್ನು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸುತ್ತಾ, ಮೃತರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಅಗಲಿದ ಆತ್ಮಗಳಿಗೆ ಪ್ರಾರ್ಥಿಸುತ್ತೇನೆ' ಎಂದು ದೇವಜಿತ್ ಸೈಕಿಯಾ ಸಂತಾಪ ಸೂಚಿಸಿ ಈ ಕೃತ್ಯವನ್ನು ಖಂಡಿಸಿದ್ದಾರೆ.



ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ತಂಡವು ಸನ್‌ರೈಸರ್ಸ್‌ ಎದುರು ಮೊದಲ ಮುಖಾಮುಖಿಯಲ್ಲಿ ಗೆದ್ದು ಬೀಗಿತ್ತು. ಇದೀಗ ಈ ಸೋಲಿಗೆ ಕಮಿನ್ಸ್ ಬಳಗವು ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ. ಸನ್‌ರೈಸರ್ಸ್ ತಂಡವು ಮೊದಲ ಸುತ್ತಿನಲ್ಲಿ ಐದು ಸೋತು, ಎರಡರಲ್ಲಿ ಜಯಿಸಿದೆ. ಇನ್ನುಳಿದಿರುವ ಟೂರ್ನಿಯ ಅರ್ಧಭಾಗದಲ್ಲಿ ಹೆಚ್ಚು ಗೆಲುವು ಸಾಧಿಸಿ ಪ್ಲೇಆಫ್‌ಗೆ ಸಾಗಬೇಕಾದ ಒತ್ತಡದಲ್ಲಿದೆ.

ಮುಂಬೈ ತಂಡವು ಕಳೆದ ಮೂರು ಪಂದ್ಯಗಳಲ್ಲಿ ಸತತ ಜಯಸಾಧಿಸಿದೆ. ಇದರಿಂದಾಗಿ ಭರ್ತಿ ಆತ್ಮವಿಶ್ವಾಸದಲ್ಲಿದೆ. ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅಜೇಯ 76 ರನ್‌ ಹೊಡೆದು ಲಯಕ್ಕೆ ಮರಳಿದ್ದಾರೆ. ರೋಹಿತ್ ಲಯಕ್ಕೆ ಮರಳಿರುವುದು ತಂಡದ ಶಕ್ತಿಯನ್ನು ವೃದ್ಧಿಸಿದೆ.