ನವದೆಹಲಿ: ಮುಂದಿನ ತಿಂಗಳು ಭಾರತದ ಆತಿಥ್ಯದಲ್ಲಿ ನಡೆಯುವ ಏಷ್ಯಾ ಕಪ್ ಹಾಕಿ(Asia Cup 2025 hockey) ಪಂದ್ಯಾವಳಿಯಿಂದ ಪಾಕಿಸ್ತಾನ ತಂಡ(Pakistan hockey Team) ಹಿಂದೆ ಸರಿದಿದೆ. ಭದ್ರತಾ ಕಾಳಜಿಯಿಂದಾಗಿ ತಮ್ಮ ತಂಡವನ್ನು ಭಾರತಕ್ಕೆ ಕಳುಹಿಸುವುದು ಕಷ್ಟ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್ (PHF) ತಿಳಿಸಿದೆ.
ಕಳೆದ ಭಾನುವಾರ ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಲು ಭಾರತೀಯ ಆಟಗಾರರು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಈ ಘಟನೆ ನಡೆದ ಬೆನ್ನಲ್ಲೇ ಪಾಕಿಸ್ತಾನ ತನ್ನ ಹಾಕಿ ತಂಡವನ್ನು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿದೆ.
ಉಭಯ ದೇಶಗಳ ನಡುವಿನ ಹಾಲಿ ಸನ್ನಿವೇಶದಲ್ಲಿ ನಮ್ಮ ತಂಡಕ್ಕೆ ಭಾರತದಲ್ಲಿ ಆಡಲು ಭದ್ರತಾ ಅಪಾಯ ಎದುರಾಗಿದೆ. ಜತೆಗೆ ಆಟಗಾರರು ಕೂಡ ಭಾರತಕ್ಕೆ ಪ್ರಯಾಣಿಸಲು ಸಿದ್ಧವಿಲ್ಲ. ಹೀಗಾಗಿ ನಾವು ಟೂರ್ನಿಯಿಂದ ಹಿಂದೆ ಸರಿಯುತ್ತೇವೆ ಎಂದು ಪಿಎಚ್‌ಎಫ್ ಮುಖ್ಯಸ್ಥ ರಾರಿಕ್ ಬುಗ್ತಿ ತಿಳಿಸಿದಾರೆ.
ಪಂದ್ಯಾವಳಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 7 ರವರೆಗೆ ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ವಿಜೇತರಾದ ತಂಡ ಮುಂದಿನ ವರ್ಷದ ಹಾಕಿ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿದೆ. ಆತಿಥೇಯ ಭಾರತ, ಜಪಾನ್, ಕೊರಿಯಾ, ಚೀನಾ, ಮಲೇಷ್ಯಾ, ಓಮನ್ ಮತ್ತು ಚೈನೀಸ್ ತೈಪೆ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ.
ಇದನ್ನೂ ಓದಿ ENG vs IND: 4ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ; 8 ವರ್ಷದ ಬಳಿಕ ಮರಳಿದ ಸ್ಪಿನ್ನರ್