ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬುಚಿಬಾಬು ಟ್ರೋಫಿ: ಮಹಾರಾಷ್ಟ್ರ ಪರ ಪದಾರ್ಪಣ ಪಂದ್ಯದಲ್ಲೇ ಶತಕ ಬಾರಿಸಿದ ಪೃಥ್ವಿ ಶಾ

ಕಳೆದ ಋತುವಿನ ಕೊನೆಯಲ್ಲಿ ಪೃಥ್ವಿ ಶಾ ಮುಂಬೈ ತೊರೆದು ಮಹಾರಾಷ್ಟ್ರ ಸೇರಿದ್ದರು. 25 ವರ್ಷದ ಶಾ ರಣಜಿ ಟ್ರೋಫಿ ತಂಡದಿಂದ ಕೈಬಿಟ್ಟ ನಂತರ ಈ ಕ್ರಮ ಕೈಗೊಂಡರು. ಕೊನೆಯ ಬಾರಿಗೆ 2024 ರ ಡಿಸೆಂಬರ್‌ನಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್‌ನಲ್ಲಿ ಮುಂಬೈಯನ್ನು ಪ್ರತಿನಿಧಿಸಿದ್ದರು.

ಚೆನ್ನೈ: ಫಿಟ್‌ನೆಸ್ ಕೊರತೆ ಮತ್ತು ಅಶಿಸ್ತಿನ ಕಾರಣಕ್ಕಾಗಿ ಭಾರೀ ಟೀಕೆ ಎದುರಿಸಿದ್ದ ಕ್ರಿಕೆಟಿಗ ಪೃಥ್ವಿ ಶಾ(Prithvi Shaw) ಬುಚ್ಚಿಬಾಬು ಟ್ರೋಫಿ(Buchi Babu Tournament 2025) ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅಮೋಘ ಶತಕ ಬಾರಿಸಿ ಮಿಂಚಿದ್ದಾರೆ. ಮಂಗಳವಾರ ಚೆನ್ನೈನ ಗುರುನಾನಕ್ ಕಾಲೇಜಿನಲ್ಲಿ ನಡೆದ ಪಂದ್ಯದಲ್ಲಿ ಛತ್ತೀಸ್‌ಗಢ ವಿರುದ್ಧ ಶತಕ ಗಳಿಸಿದರು. ಮುಂಬೈ ತಂಡ ತೊರೆದು ಮಹಾರಾಷ್ಟ್ರ ತಂಡವನ್ನು ಸೇರಿರುವ ಪೃಥ್ವಿ ಶಾ ತಂಡದ ಪರ ತಮ್ಮ ಮೊದಲ ಪಂದ್ಯದಲ್ಲಿಯೇ ಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದಾರೆ.

ಮಹಾರಾಷ್ಟ್ರ ಪರ ಏಕಾಂಗಿ ಹೋರಾಟ ನಡೆಸಿದ ಪೃಥ್ವಿ ಶಾ 122 ಎಸೆತಗಳಲ್ಲಿ ಶತಕ ಗಳಿಸಿದರು. ಇದರಲ್ಲಿ 14 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. ಶಾ ಮತ್ತು ಸಚಿನ್ ದಾಸ್ ನಡುವಿನ 71 ರನ್‌ಗಳ ಆರಂಭಿಕ ಪಾಲುದಾರಿಕೆಯ ಹೊರತಾಗಿಯೂ ಆ ಬಳಿಕ ತಂಡವು ಕೇವಲ 15 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಷ್ಟಕ್ಕೆ ಸಿಲುಕಿದಾಗ ಶಾ ಬಾರಿಸಿದ ಈ ಶತಕ ತಂಡಕ್ಕೆ ನೆರವಾಯಿತು.

ಕಳೆದ ಋತುವಿನ ಕೊನೆಯಲ್ಲಿ ಪೃಥ್ವಿ ಶಾ ಮುಂಬೈ ತೊರೆದು ಮಹಾರಾಷ್ಟ್ರ ಸೇರಿದ್ದರು. 25 ವರ್ಷದ ಶಾ ರಣಜಿ ಟ್ರೋಫಿ ತಂಡದಿಂದ ಕೈಬಿಟ್ಟ ನಂತರ ಈ ಕ್ರಮ ಕೈಗೊಂಡರು. ಕೊನೆಯ ಬಾರಿಗೆ 2024 ರ ಡಿಸೆಂಬರ್‌ನಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್‌ನಲ್ಲಿ ಮುಂಬೈಯನ್ನು ಪ್ರತಿನಿಧಿಸಿದ್ದರು.

ಐಪಿಎಲ್ 2025 ರ ಹರಾಜಿನಲ್ಲಿ ಮಾರಾಟವಾಗದೆ ನಿರಾಶೆಗೊಂಡ ನಂತರ, ಜೂನ್ ಆರಂಭದಲ್ಲಿ ನಡೆದ ಟಿ 20 ಮುಂಬೈ ಲೀಗ್‌ನಲ್ಲೂ ಜನಪ್ರಿಯತೆ ಗಳಿಸದ ಪೃಥ್ವಿ ಶಾ ಇದೀಗ ಮತ್ತೆ ಬ್ಯಾಟಿಂಗ್‌ ಟ್ರ್ಯಾಕ್‌ಗೆ ಮರಳಿದಂತಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಛತ್ತೀಸ್‌ಗಢ ಮೊದಲ ದಿನದಲ್ಲಿ 252 ರನ್ ಗಳಿಸಿತು. ಸಂಜೀತ್ ದೇಸಾಯಿ (93) ಮತ್ತು ಅವ್ನಿಶ್ ಸಿಂಗ್ ಧಲಿವಾಲ್ (52) ಅವರ ಅರ್ಧಶತಕ ಬಾರಿಸಿದ್ದರು.