ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Quinton de Kock: ನಿವೃತ್ತಿ ನಿರ್ಧಾರ ಹಿಂತೆಗೆದುಕೊಂಡ ಡಿ ಕಾಕ್; ಪಾಕ್‌ ಸರಣಿಯಲ್ಲಿ ಕಣಕ್ಕೆ

32 ವರ್ಷದ ಡಿ ಕಾಕ್‌ 2024ರ ಟಿ 20 ವಿಶ್ವಕಪ್ ತಂಡದ ಭಾಗವಾಗಿದ್ದ ಅವರು ಆ ಬಳಿಕ ಯಾವುದೇ ರಾಷ್ಟ್ರೀಯ ಪಂದ್ಯವನ್ನು ಆಡಿರಲಿಲ್ಲ. ಕೇವಲ ಫ್ರಾಂಚೈಸಿ ಕ್ರಿಕೆಟ್‌ನತ್ತ ಮಾತ್ರ ಗಮನಹರಿಸಿದ್ದರು. ಇದೀಗ ತಮ್ಮ ನಿವೃತ್ತಿ ನಿರ್ಧಾರವನ್ನು ವಾಪಸ್‌ ಪಡೆದು ಮತ್ತೆ ತಂಡದ ಪರ ಆಡಲು ನಿರ್ಧರಿಸಿದ್ದಾರೆ.

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ತಂಡದ ಎಡಗೈ ಆರಂಭಿಕ ಬ್ಯಾಟರ್‌ ಕ್ವಿಂಟನ್ ಡಿ ಕಾಕ್(Quinton de Kock) ತಮ್ಮ ಏಕದಿನ ನಿವೃತ್ತಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಮತ್ತು ಮುಂಬರುವ ಪಾಕಿಸ್ತಾನ(Pakistan series) ಪ್ರವಾಸಕ್ಕಾಗಿ ವೈಟ್-ಬಾಲ್ ತಂಡಗಳ ಭಾಗವಾಗಿ ಆಯ್ಕೆಯಾಗಿದ್ದಾರೆ ಎಂದು ಕ್ರಿಕ್ಇನ್ಫೋ ವರದಿ ಮಾಡಿದೆ. ಭಾರತದಲ್ಲಿ ನಡೆದ 2023 ರ ವಿಶ್ವಕಪ್ ಸೆಮಿ ಫೈನಲ್‌ ಸೋಲಿನ ಬಳಿಕ ಕುಟುಂಬದೊಂದಿಗೆ ಕಾಲ ಕಳೆಯಲು ನಿರ್ಧರಿಸಿ ಡಿ ಕಾಕ್ ತಮ್ಮ ಏಕದಿನ ವೃತ್ತಿಜೀವನಕ್ಕೆ ನವೃತ್ತಿ ಪ್ರಕಟಿಸಿದ್ದರು.

32 ವರ್ಷದ ಡಿ ಕಾಕ್‌ 2024ರ ಟಿ 20 ವಿಶ್ವಕಪ್ ತಂಡದ ಭಾಗವಾಗಿದ್ದ ಅವರು ಆ ಬಳಿಕ ಯಾವುದೇ ರಾಷ್ಟ್ರೀಯ ಪಂದ್ಯವನ್ನು ಆಡಿರಲಿಲ್ಲ. ಕೇವಲ ಫ್ರಾಂಚೈಸಿ ಕ್ರಿಕೆಟ್‌ನತ್ತ ಮಾತ್ರ ಗಮನಹರಿಸಿದ್ದರು. ಇದೀಗ ತಮ್ಮ ನಿವೃತ್ತಿ ನಿರ್ಧಾರವನ್ನು ವಾಪಸ್‌ ಪಡೆದು ಮತ್ತೆ ತಂಡದ ಪರ ಆಡಲು ನಿರ್ಧರಿಸಿದ್ದಾರೆ.

ಡಿ ಕಾಕ್ ಅವರ ಮರಳುವಿಕೆಯ ಬಗ್ಗೆ ಮಾತನಾಡಿದ ದಕ್ಷಿಣ ಆಫ್ರಿಕಾ ಕೋಚ್ ಶುಕ್ರಿ ಕಾನ್ರಾಡ್, "ಕ್ವಿಂಟನ್ ವೈಟ್-ಬಾಲ್ ಕ್ರಿಕೆಟ್‌ಗೆ ಮರಳಿರುವುದು ನಮಗೆ ಪ್ರಮುಖ ಉತ್ತೇಜನ ನೀಡಿದೆ. ಕಳೆದ ತಿಂಗಳು ನಾವು ಅವರ ಭವಿಷ್ಯದ ಬಗ್ಗೆ ಮಾತನಾಡಿದಾಗ, ಅವರು ಇನ್ನೂ ತಮ್ಮ ದೇಶವನ್ನು ಪ್ರತಿನಿಧಿಸುವ ಬಲವಾದ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಅವರ ಆಟದ ಗುಣಮಟ್ಟ ಎಲ್ಲರಿಗೂ ತಿಳಿದಿದೆ. ಮತ್ತು ಅವರು ತಂಡಕ್ಕೆ ಮರಳುವುದರಿಂದ ತಂಡಕ್ಕೆ ಪ್ರಯೋಜನವಾಗುತ್ತದೆ" ಎಂದು ಕಾನ್ರಾಡ್ ತಿಳಿಸಿದ್ದಾರೆ.

ಇದನ್ನೂ ಓದಿ Asia Cup 2025: ಕೆಣಕಿದ ರೌಫ್‌ಗೆ ಚಳಿ ಬಿಡಿಸಿದ ಅಭಿಷೇಕ್‌, ಗಿಲ್‌; ವಿಡಿಯೊ ವೈರಲ್‌