ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾಘ್ವಿ ಬಿಸ್ಟ್ ಅವಳಿ ಅರ್ಧಶತಕ ವ್ಯರ್ಥ: ಆಸೀಸ್‌ ಮಹಿಳಾ ಎ ತಂಡದ ವಿರುದ್ಧ ಭಾರತಕ್ಕೆ ಸೋಲು

ಚೇಸಿಂಗ್‌ ವೇಳೆ ಆಸೀಸ್‌ ಪರ ಆರಂಭಿಕ ಆಟಗಾರ್ತಿ ರಾಚೆಲ್ ಟ್ರೆನಾಮನ್(64) ವಿಲ್ಸನ್ ಅವರನ್ನು (46) ರನ್‌ ಗಳಿಸಿ ಉತ್ತಮ ಆರಂಭ ಒದಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅನಿಕಾ ಲಿಯರಾಯ್ಡ್(72), ಮ್ಯಾಡಿ ಡಾರ್ಕೆ(68)ರನ್‌ ಗಳಿಸಿದರು. ಭಾರತ ಪರ ಸೈಮಾ ಠಾಕೋರ್ 2 ವಿಕೆಟ್‌ ಉರುಳಿಸಿದರು.

ಬ್ರಿಸ್ಬೇನ್‌: ಇಲ್ಲಿ ನಡೆದ ಅನಧಿಕೃತ ಟೆಸ್ಟ್‌ನ ನಾಲ್ಕನೇ ಮತ್ತು ಅಂತಿಮ ದಿನದಂದು ಭಾರತ ಎ ಮಹಿಳಾ(India A Women) ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಎ ಮಹಿಳಾ(INDWA vs AUSWA) ತಂಡವು ಜಯಭೇರಿ ಬಾರಿಸಿದೆ. ಭಾರತ ಸೋಲಿನಿಂದ ರಾಘ್ವಿ ಬಿಸ್ಟ್(Raghvi Bist ) ಅವರ ಅವಳಿ ಅರ್ಧಶತಕ ವ್ಯರ್ಥವಾಯಿತು.

ಗೆಲುವಿಗಾಗಿ 281 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸೀಸ್‌ ತಂಡ ತಮ್ಮ ಇನ್ನಿಂಗ್ಸ್ ಅನ್ನು ಅದ್ಭುತವಾಗಿ ಆಡಿದರು. 85.3 ಓವರ್‌ಗಳಲ್ಲಿ 4 ವಿಕೆಟ್‌ಗೆ 283 ರನ್‌ ಬಾರಿಸಿ ಗುರಿ ತಲುಪಿದರು. ದಿನದಾಟ ಆರಂಭವಾದಾಗ ಆಸ್ಟ್ರೇಲಿಯಾ ಎ ತಂಡ ಭಾರತ ಎ ತಂಡವನ್ನು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 286 ರನ್‌ಗಳಿಗೆ ಆಲೌಟ್ ಮಾಡಿತು.

ಚೇಸಿಂಗ್‌ ವೇಳೆ ಆಸೀಸ್‌ ಪರ ಆರಂಭಿಕ ಆಟಗಾರ್ತಿ ರಾಚೆಲ್ ಟ್ರೆನಾಮನ್(64) ವಿಲ್ಸನ್ ಅವರನ್ನು (46) ರನ್‌ ಗಳಿಸಿ ಉತ್ತಮ ಆರಂಭ ಒದಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅನಿಕಾ ಲಿಯರಾಯ್ಡ್(72), ಮ್ಯಾಡಿ ಡಾರ್ಕೆ(68)ರನ್‌ ಗಳಿಸಿದರು. ಭಾರತ ಪರ ಸೈಮಾ ಠಾಕೋರ್ 2 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌

ಮೊದಲ ಇನಿಂಗ್ಸ್‌: ಭಾರತ 'ಎ' ತಂಡ: 89.1 ಓವರ್‌ಗಳಲ್ಲಿ 299 ಆಲೌಟ್. ರಾಘ್ವಿ ಬಿಸ್ಟ್ (93), ವಿಜೆ ಜೋಶಿತಾ (51); ಜಾರ್ಜಿಯಾ ಪ್ರೆಸ್ಟ್‌ವಿಡ್ಜ್ (3/37); ಮೈಟ್ಲಾನ್ ಬ್ರೌನ್ (3/65).

ಆಸ್ಟ್ರೇಲಿಯಾ 'ಎ' ತಂಡ: 76.2 ಓವರ್‌ಗಳಲ್ಲಿ 305 ಆಲೌಟ್. ಸಿಯಾನಾ ಜಿಂಜರ್ (103), ನಿಕೋಲ್ ಫಾಲ್ಟಮ್ (54); ಸೈಮಾ ಠಾಕೋರ್ (3/21), ರಾಧಾ ಯಾದವ್ (2/68)

ದ್ವಿತೀಯ ಇನಿಂಗ್ಸ್‌: ಭಾರತ 'ಎ': 81.4 ಓವರ್‌ಗಳಲ್ಲಿ 286 ಆಲೌಟ್. ರಾಘ್ವಿ ಬಿಸ್ಟ್ (86), ಶಫಾಲಿ ವರ್ಮಾ (52); ಆಮಿ ಎಡ್ಗರ್ (5/57), ಜಾರ್ಜಿಯಾ ಪ್ರೆಸ್ಟ್‌ವಿಡ್ಜ್ (3/47).

ಆಸ್ಟ್ರೇಲಿಯಾ 'ಎ': 85.3 ಓವರ್‌ಗಳಲ್ಲಿ 283/4. ಅನಿಕಾ ಲಿರಾಯ್ಡ್ (72), ಮ್ಯಾಡಿ ಡಾರ್ಕೆ (68); ಸೈಮಾ ಠಾಕೋರ್ (2/63).

ಫಲಿತಾಂಶ: ಆಸ್ಟ್ರೇಲಿಯಾ ಎ ತಂಡಕ್ಕೆ 6 ವಿಕೆಟ್‌ ಜಯ.