ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishabh Pant bakes Pizza: ಕುಂಟುತ್ತಲೇ ಬಂದು ಪಿಜ್ಜಾ ತಯಾರಿಸಿದ ರಿಷಭ್‌ ಪಂತ್‌; ವಿಡಿಯೊ ವೈರಲ್‌

Rishabh Pant: ನಾಲ್ಕನೇ ಟೆಸ್ಟ್‌ ಪಂದ್ಯದ ಮೊದಲ ದಿನ ಪಾದದ ಗಾಯಕ್ಕೆ ತುತ್ತಾಗಿದ್ದ ರಿಷಭ್‌ ಪಂತ್‌ ಅಚ್ಚರಿ ಎಂಬಂತೆ 2ನೇ ದಿನ ಬ್ಯಾಟಿಂಗ್‌ಗೆ ಆಗಮಿಸಿದ್ದರು. 6ನೇ ವಿಕೆಟ್‌ ರೂಪದಲ್ಲಿ ಶಾರ್ದೂಲ್‌ ಔಟಾದಾಗ ರಿಷಭ್‌ ಡ್ರೆಸ್ಸಿಂಗ್‌ ರೂಮ್‌ನಿಂದ ಕುಂಟುತ್ತಲೇ ಕ್ರೀಸ್‌ಗೆ ಬಂದ ಅವರ ಹೋರಾಟದ ಮನೋಭಾವಕ್ಕೆ ತಲೆದೂಗಿದ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ಬಾರಿಸಿದ್ದರು.

ನವದೆಹಲಿ: ಕಾಲಿನ ಗಾಯವನ್ನು ಲೆಕ್ಕಿಸದೆ ಇತ್ತೀಚೆಗೆ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಕ್ರಿಕೆಟಿಗ ರಿಷಭ್ ಪಂತ್(Rishabh Pant), ಇದೀಗ ಕಾಲಿಗೆ ಬ್ಯಾಂಡೆಜ್‌ ಸುತ್ತಿಕೊಂಡೆ ಪಿಜ್ಜಾ(Rishabh Pant bakes Pizza) ತಯಾರಿಸಿದ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌(video goes viral) ಆಗಿದ್ದು ಪಂತ್‌ ಸಾಹಸಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

"ಇವತ್ತು ನಾನು ನಿಮಗೆ ಪಿಜ್ಜಾ ಮಾಡುವುದು ಹೇಗೆಂದು ತೋರಿಸುತ್ತೇನೆ. ಹುಡುಗರೇ, ನನ್ನ ಮಾತು ಕೇಳಿ. ನಾನು ಸಸ್ಯಾಹಾರಿ ಪಿಜ್ಜಾ ಮಾಡುತ್ತೇನೆ ಅಂತ ಅನಿಸುತ್ತಿದೆ. ನನಗೆ ಸಸ್ಯಾಹಾರ ತುಂಬಾ ಇಷ್ಟ. ಹೌದು, ಟ್ರಫಲ್(ಬಾಣಸಿಗ) ಜತೆ. ಬಿಸಿಯಾಗಿದೆ! ಪಿಜ್ಜಾ ಸಿದ್ಧವಾಗುತ್ತಿದೆ ಮತ್ತು ನಾನು ಅದಕ್ಕಾಗಿ ಕಾಯುತ್ತೇನೆ. ಕಾಲು ಮುರಿದುಕೊಂಡರೆ ನಾನು ಮಾಡಬಹುದಾದ ಏಕೈಕ ಕೆಲಸ ಅದು. ಪಿಜ್ಜಾ ಬೇಯಿಸುವುದು. ಅಮ್ಮ 'ಘರ್ ಪೆ ತೋ ಕುಚ್ ಬನಾಯಾ ನಹಿ ಹೈ, ಯಹ ಪಿಜ್ಜಾ ಬನಾ ರಹಾ ಹೈ (ನಾನು ಅಡುಗೆ ಮಾಡುತ್ತಿರುವುದನ್ನು ನೋಡಿ ನನ್ನ ತಾಯಿ, ಮನೆಯಲ್ಲಿ ಏನೂ ಬೇಯಿಸಿಲ್ಲ ಆದರೆ ಅಲ್ಲಿ ಅವನು ಪಿಜ್ಜಾ ಬೇಯಿಸುತ್ತಿದ್ದಾನೆ!) ಎಂದು ಯೋಚಿಸುತ್ತಿರಬೇಕು" ಎಂದು ಪಂತ್‌ ಹೇಳಿದರು. ಪಂತ್‌ ಮಾತು ಕೇಳಿ ಬಾಣಸಿಗ ಜೋರಾಗಿ ನಕ್ಕಿದ್ದಾರೆ.

ನಾಲ್ಕನೇ ಟೆಸ್ಟ್‌ ಪಂದ್ಯದ ಮೊದಲ ದಿನ ಪಾದದ ಗಾಯಕ್ಕೆ ತುತ್ತಾಗಿದ್ದ ರಿಷಭ್‌ ಪಂತ್‌ ಅಚ್ಚರಿ ಎಂಬಂತೆ 2ನೇ ದಿನ ಬ್ಯಾಟಿಂಗ್‌ಗೆ ಆಗಮಿಸಿದ್ದರು. 6ನೇ ವಿಕೆಟ್‌ ರೂಪದಲ್ಲಿ ಶಾರ್ದೂಲ್‌ ಔಟಾದಾಗ ರಿಷಭ್‌ ಡ್ರೆಸ್ಸಿಂಗ್‌ ರೂಮ್‌ನಿಂದ ಕುಂಟುತ್ತಲೇ ಕ್ರೀಸ್‌ಗೆ ಬಂದ ಅವರ ಹೋರಾಟದ ಮನೋಭಾವಕ್ಕೆ ತಲೆದೂಗಿದ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ಬಾರಿಸಿದ್ದರು.

ಕ್ರೀಸ್‌ನ ಮಧ್ಯೆ ಓಡುವಾಗಲೂ ರಿಷಭ್‌ ಕುಂಟುತ್ತಲೇ ಇದ್ದರು. ಆದರೂ ಹೋರಾಟ ಬಿಡಲಿಲ್ಲ. ಮೊದಲ ದಿನ 48 ಎಸೆತಕ್ಕೆ 37 ರನ್‌ ಗಳಿಸಿದ್ದ ಪಂತ್, 2ನೇ ದಿನ ನೋವಿನ ನಡುವೆಯೂ 27 ಎಸೆತಗಳನ್ನು ಎದುರಿಸಿ 17 ರನ್‌ ಬಾರಿಸಿ ಒಟ್ಟು 54 ರನ್‌ ಗಳಿಸಿದ್ದರು. ಚೇತರಿಕೆಯ ಹಾದಿಯಲ್ಲಿರುವ ಅವರು ಏಷ್ಯಾ ಕಪ್‌ ಸೇರಿ ವಿಂಡೀಸ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿಗೂ ಅಲಭ್ಯರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ Rishabh Pant: ಬಾಗಲಕೋಟೆಯ ಪ್ರತಿಭಾವಂತ ಬಡ ವಿದ್ಯಾರ್ಥಿನಿಗೆ ನೆರವಾದ ಕ್ರಿಕೆಟಿಗ ಪಂತ್‌