ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

3 ಮೂಳೆ ಮುರಿತಗೊಂಡಿದ್ದರೂ ಐಪಿಎಲ್‌ ಆಡಿದ್ದ ಚಹಲ್‌; ವಿಚಾರ ಬಹಿರಂಗಪಡಿಸಿದ ಪ್ರೇಯಸಿ

ಮಹ್ವಾಶ್ ಪಂಜಾಬ್‌ ತಂಡದ ಪ್ರತಿ ಪಂದ್ಯದಲ್ಲೂ ಪಾಲ್ಗೊಳ್ಳುವ ಮೂಲಕ ಚಹಲ್‌ ಮತ್ತು ತಂಡಕ್ಕೆ ಬೆಂಬಲ ಸೂಚಿಸುತ್ತಿದ್ದರು. ಚಹಲ್‌ ಜತೆಗಿನ ಸಂಬಂಧದ ಬಗ್ಗೆ ಯಾವುದೇ ಕ್ಲ್ಯಾರಿಟಿ ನೀಡದಿದ್ದರೂ ಕೂಡ ಚಹಲ್‌ ಜತೆ ಡೇಟಿಂಗ್‌ ಮಾಡುತ್ತಿರುವುದಂತು ನಿಜ. ಇಲ್ಲವಾದಲ್ಲಿ ಚಹಲ್‌ ಎಲ್ಲೇ ಹೋದರೂ ಅವರ ಜತೆ ಕಾಣಿಸಿಕೊಳ್ಳಲು ಸಾಧ್ಯವಿಲ್ಲ.

ಮುಂಬಯಿ: ಯುಜುವೇಂದ್ರ ಚಹಲ್ ಜತೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿರುವ ಆರ್‌.ಜೆ.ಮಹ್ವಾಶ್‌ ಅವರು ಐಪಿಎಲ್ 2025 ರ ಸೀಸನ್‌ನಲ್ಲಿ ಚಹಲ್‌ ಗಾಯದ ನಡುವೆಯೂ ಆಡಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಪೋಸ್ಟ್‌ ಮಾಡಿ ಮಹ್ವಾಶ್‌ ಈ ವಿಚಾರ ತಿಳಿಸಿದ್ದಾರೆ. ಮಣಿಕಟ್ಟಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣ ಆರ್‌ಸಿಬಿ ವಿರುದ್ಧದ ಕ್ವಾಲಿಫೈಯರ್ 1 ಸೇರಿದಂತೆ ಟೂರ್ನಿಯಲ್ಲಿ ಚಾಹಲ್ ಒಟ್ಟು ಮೂರು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸುದೀರ್ಘ ಬರಹದೊಂದಿಗೆ ಪೋಸ್ಟ್‌ ಮಾಡಿರುವ ಮಹ್ವಾಶ್‌, "ವಿಶೇಷ ಪೋಸ್ಟ್ ಚಹಲ್‌ ಅವರಿಗಾಗಿ. ಏಕೆಂದರೆ ಜನರಿಗೆ ತಿಳಿದಿಲ್ಲದ ಸಂಗತಿಯೊಂದಿದೆ. ಚಹಲ್‌ ಚಹಲ್‌ ಗಾಯದ ಮಧ್ಯೆಯೂ ತಂಡಕ್ಕಾಗಿ ಕೊನೆಯ ಪಂದ್ಯದವರೆಗೂ ಹೋರಾಡಿದ್ದರು. ಅವರ ಪಕ್ಕೆಲುಬುಗಳು ಕೆಲವು ಪಂದ್ಯಗಳ ನಂತರ ಮುರಿದವು. ಇದಾಗಿ ಅವರ ಬೌಲಿಂಗ್ ಬೆರಳು ಕೂಡ ಮುರಿತಗೊಂಡಿತ್ತು. ಆದರೂ ಈ ವ್ಯಕ್ತಿ ಇಡೀ ಋತುವಿನಲ್ಲಿ 3 ಮೂಳೆ ಮುರಿತಗಳೊಂದಿಗೆ ಆಡಿದರು! ನಾವೆಲ್ಲರೂ ಅವರು ನೋವಿನಿಂದ ಕಿರುಚುತ್ತಾ ಅಳುವುದನ್ನು ನೋಡಿದ್ದೇವೆ ಆದರೆ ಅವರು ಎಂದಿಗೂ ಪಂದ್ಯದಿಂದ ಹಿಂದೆ ಸರಿಯಲಿಲ್ಲ. ಅವರಲ್ಲಿ ಯೋಧನ ಮನೋಭಾವವಿದೆ ಎಂದು" ಎಂದು ಮಹ್ವಾಶ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.