ಚಿಕ್ಕಬಳ್ಳಾಪುರ: ತಾಲೂಕಿನ ಆವಲಗುರ್ಕಿ ಸಮೀಪ ಸ್ಥಾಪನೆಯಾಗಿರುವ ಈಶಾ ಸಂಸ್ಥೆಯಿಂದ ಪ್ರಸ್ತುತ ಗ್ರಾಮೀಣ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ಗ್ರಾಮೋತ್ಸವ ಆಯೋಜಿ ಸಿದ್ದು, ಈ ಗ್ರಾಮೋತ್ಸವದಲ್ಲಿ ವಾಲೀಬಾಲ್, ಥ್ರೋಬಾಲ್ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಈಶಾ ಸಂಸ್ಥೆಯ ಸ್ವಯಂಸೇವಕರು, ಗ್ರಾಮೀಣ ಮಹಿಳೆಯರಿಗೆ ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮೋತ್ಸವ ಸಹಕಾರಿಯಾಗಲಿದೆ.
ಗ್ರಾಮೀಣ ಕ್ರೀಡೋತ್ಸವದ ಹೆಸರಿನಲ್ಲಿ ನಡೆಯಲಿರುವ ವಾಲೀಬಾಲ್ ಮತ್ತು ಥ್ರೋಬಾಲ್ ಪಂದ್ಯಾ ವಳಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಕ್ಲಸ್ಟರ್, ಡಿವಿಜಿನಲ್ ಮತ್ತು ಫೈನಲ್ ಪಂದ್ಯಗಳಾಗಿ ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಪ್ರತಿ ವಿಭಾಗದಲ್ಲಿ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ ಎಂದರು.
ಇದನ್ನೂ ಓದಿ: Asia Cup 2025: ಸಂಜು ಸ್ಯಾಮ್ಸನ್‌ಗೆ ಎದುರಾಗಿರುವ ಅಪಾಯವನ್ನು ತಿಳಿಸಿದ ಮೊಹಮ್ಮದ್ ಕೈಫ್!
ವಾಲೀಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಕ್ಲಸ್ಟರ್ ಮಟ್ಟದಲ್ಲಿ ಗೆಲ್ಲುವ ತಂಡಗಳಿಗೆ ೧೦ ಸಾವಿರ ಬಹುಮಾನ, ಡಿವಿಜನಲ್ ಮಟ್ಟದಲ್ಲಿ ಗೆಲ್ಲುವ ತಂಡಕ್ಕೆ ೧೨ ಸಾವಿರ ಬಹುಮಾನ ಮತ್ತು ಫೈನಲ್ ಪಂದ್ಯದಲ್ಲಿ ವಿಜೇತರಾಗುವ ತಂಡಕ್ಕೆ ೫ ಲಕ್ಷ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಗ್ರಾಮೀಣ ಮಹಿಳೆಯರು ಟಿವಿ ಮೊಬೈಲ್‌ನಂತಹ ಯಾಂತ್ರಿಕ ಜೀವನದಿಂದ ಹೊರ ಬಂದು, ಕ್ರೀಡೆಗಳಲ್ಲಿ ಭಾಗವಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕ್ರೀಡೆಗಳು ಸಹಕಾರಿಯಾಗಲಿವೆ. ಈಗಾಗಲೇ ವಾಲೀಬಾಲ್ ಪಂದ್ಯಾವಳಿಗೆ ೬೦ಕ್ಕೂ ಹೆಚ್ಚು ತಂಡಗಳು ನೋಂದಣಿ ಮಾಡಿ ಕೊಂಡಿದ್ದು, ಥ್ರೋಬಾಲ್ ಪಂದ್ಯಾವಳಿಗೆ ೧೪ ತಂಡಗಳು ನೋಂದಣಿಯಾಗಿವೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದ್ದು, ಇದು ಸ್ಪರ್ಧೆ ಅಲ್ಲ, ಉತ್ಸವ ಎಂದು ಭಾಗವಹಿಸಲು ಸೂಚಿಸ ಲಾಗಿದೆ ಎಂದರು.
ರಾಜ್ಯದ ೧೮ ಜಿಲ್ಲೆಗಳಲ್ಲಿ ಈ ಗ್ರಾಮೋತ್ಸವ ನಡೆಯುತ್ತಿದ್ದು, ಫೈನಲ್ ಪಂದ್ಯ ತಮಿಳುನಾಡಿನ ಕೊಯಂಬತ್ತೂರಿನ ಆದಿಯೋಗಿ ಎದುರಿನಲ್ಲಿ ನಡೆಯಲಿದೆ. ಸೆ.21ರಂದು ಕೊಯಂಬತ್ತೂರಿನ ಈಶ ಆದಿಯೋಗ ಕೇಂದ್ರದಲ್ಲಿ ನಡೆಯುವ ಪಂದ್ಯದಲ್ಲಿ ವಿಜೇತ ತಂಡಕ್ಕೆ ೫ ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದರು. ಸುದ್ದಿಗೋಷ್ಟಿಯಲ್ಲಿ ರಾಧಿಕ, ರಾಘವೇಂದ್ರ, ಹರ್ಷ, ಶರತ್ ಇದ್ದರು.