ಗಯಾನಾ: ವೆಸ್ಟ್ ಇಂಡೀಸ್‌ನ ಬ್ಯಾಟರ್ ಶಿಮ್ರನ್ ಹೆಟ್‌ಮೈರ್ ಅವರು ಒಂದೇ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಗ್ಲೋಬಲ್ ಸೂಪರ್ ಲೀಗ್ ಟಿ20 ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ ತಂಡವನ್ನು ಪ್ರತಿನಿಧಿಸಿದ್ದ ಹೆಟ್‌ಮೈರ್, ಹೋಬರ್ಟ್ ಹರಿಕೇನ್ಸ್ ವಿರುದ್ಧ ಈ ಸಾಧನೆ ಮಾಡಿದರು. ಇವರ ಈ ಬ್ಯಾಟಿಂಗ್ ಪ್ರತಾಪದಿಂದ ಗಯಾನಾ ತಂಡ ಪಂದ್ಯವನ್ನು 4 ವಿಕೆಟ್‌ನಿಂದ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟಿತು.
ಗಯಾನಾ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಫ್ಯಾಬಿಯನ್ ಅಲೆನ್ ಎಸೆದ ಓವರಿನ ಆರಂಭದ ನಾಲ್ಕು ಮತ್ತು ಆರನೇ ಎಸೆತದಲ್ಲಿ ಹೆಟ್‌ಮೈರ್ ಸಿಕ್ಸರ್ ಬಾರಿಸಿದರು. ಐದನೇ ಎಸೆತಕ್ಕೆ ಮಾತ್ರ 2 ರನ್ ಬಂತು. ಒಟ್ಟು ಈ ಓವರ್‌ನಲ್ಲಿ ಹೆಟ್‌ಮೈರ್ 32 ರನ್ ಕಲೆಹಾಕಿದ್ದರು. ಪಂದ್ಯದಲ್ಲಿ10 ಎಸೆತಗಳಲ್ಲಿ ಹೆಟ್‌ಮೈರ್ 6 ಸಿಕ್ಸರ್ ಸೇರಿ ಒಟ್ಟು 39 ರನ್ ಗಳಿಸಿದರು. ಫೈನಲ್‌ನಲ್ಲಿ ಗಯಾನಾ -ರಂಗ್ಪುರ್ ರೈಡರ್ ಕಾದಾಡಲಿವೆ.
ICYMI: Shimron Hetmyer went BEAST MODE!🔥
— Global Super League (@gslt20) July 17, 2025
5️⃣ maximums in an over! 🇬🇾 x 🇦🇺#GSLT20 #GlobalSuperLeague #GAWvHH #BetCabana pic.twitter.com/B38wWaKg9k
ವಿಂಡೀಸ್ ಮಂಡಳಿಯನ್ನು ಟೀಕಿಸಿದ ಲಾರಾ
ರಾಷ್ಟ್ರೀಯ ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳಲು ವಿಫಲವಾಗುತ್ತಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಮಾಜಿ ಆಟಗಾರ ಬ್ರಿಯಾನ್ ಲಾರ ಆಕ್ರೋಶ ವ್ಯಕ್ತಪಡಿಸಿದಾರೆ. ಹೌದು ಕಳೆದೊಂದು ತಿಂಗಳಿಂದ ತಂಡದ ಯುವ ಆಟಗಾರರು ದಿಢೀರ್ ನಿವೃತ್ತಿ ಘೋಷಿಸುತ್ತಿದ್ದಾರೆ. ನಿಕೋಲಸ್ ಪೂರನ್, ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು.
ಟಿ20 ಲೀಗ್‌ಗಳನ್ನು ಆಡುವ ಸಲುವಾಗಿ ಆಟಗಾರರು ತಮ್ಮ ರಾಷ್ಟ್ರೀಯ ತಂಡದ ಗುತ್ತಿಗೆಯನ್ನು ತ್ಯಜಿಸುತ್ತಿದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಇಂಗ್ಲೆಂಡ್, ಆಸ್ಟ್ರೇಲಿಯಾ ಅಥವಾ ಭಾರತದಂತಹ ದೇಶಗಳ ಮಂಡಳಿಗಳು ಮಾಡಿದಂತೆ, ವಿಂಡೀಸ್ ಕೂಡ ಕಠಿಣ ನಿಯಮ ಜಾರಿಗೆ ತರಬೇಕು. ಆಗ ಆಟಗಾರರು ತಂಡದ ಪರ ಆಡಿಯೇ ಆಡುತ್ತಾರೆ ಎಂದು ಹೇಳಿದ್ದಾರೆ.