ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ‘ಎ’ ತಂಡದಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕ

India A tour of Australia: ಯಸ್ತಿಕಾ ಭಾಟಿಯಾ ಅವರನ್ನು ಏಕದಿನ ತಂಡಕ್ಕೆ ಮಾತ್ರ ಸೇರಿಸಿಕೊಳ್ಳಲಾಗಿದ್ದು, ಗಾಯಗೊಂಡ ಸ್ಪಿನ್ನರ್‌ಗಳ ಬದಲಿಗೆ ಧರಾ ಗುಜ್ಜರ್ ಮತ್ತು ಪ್ರೇಮಾ ರಾವತ್ ಅವರನ್ನು ಕ್ರಮವಾಗಿ ಎಲ್ಲಾ ಸ್ವರೂಪಗಳಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಗುಜ್ಜರ್ ಮತ್ತು ರಾವತ್ ಇಬ್ಬರೂ ಈ ಹಿಂದೆ ಆಯ್ದ ತಂಡಗಳಲ್ಲಿ ಸ್ಥಾನ ಪಡೆದಿದ್ದರು.

ಭಾರತ ‘ಎ’ ತಂಡದಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕ

Profile Abhilash BC Jul 25, 2025 9:40 AM

ಮುಂಬಯಿ: ಆಸ್ಟ್ರೇಲೀಯಾ 'ಎ' ತಂಡದ(India A tour of Australia) ವಿರುದ್ಧದ ಸರಣಿಯ ಪ್ರವಾಸದ ನಿರೀಕ್ಷೆಯಲ್ಲಿದ್ದ ಕನ್ನಡಿತಿ ಶ್ರೇಯಾಂಕ ಪಾಟೀಲ್‌(Shreyanka Patil)ಗೆ ನಿರಾಸೆಯಾಗಿದೆ. ಆಯ್ಕೆ ಮಾಡಲಾದ ತಂಡದಿಂದ ಅವರನ್ನು ಕೈಬಿಡಲಾಗಿದೆ. ಪ್ರಿಯಾ ಮಿಶ್ರಾ(Priya Mishra)ಗೂ ಅವಕಾಶ ಸಿಕ್ಕಿಲ್ಲ. ಭಾರತೀಯ ʼಎʼ ತಂಡವು ಆಸ್ಟ್ರೇಲಿಯ ʼಎʼ ತಂಡದ ವಿರುದ್ಧ ಮೂರು ಟಿ20, ಮೂರು ಏಕದಿನ ಮತ್ತು ಒಂದು ನಾಲ್ಕು ದಿನಗಳ ರೆಡ್‌ ಬಾಲ್‌ ಪಂದ್ಯವನ್ನು ಆಡಲಿದೆ. ಈ ಪ್ರವಾಸವು ಆ. 7ರಂದು ಮಕಾಯ್‌ನಲ್ಲಿ ನಡೆಯುವ ಮೊದಲ ಟಿ20 ಪಂದ್ಯದ ಮೂಲಕ ಆರಂಭಗೊಳ್ಳಲಿದೆ. ಇನ್ನೆರಡು ಟಿ20 ಪಂದ್ಯಗಳು ಆ. 9 ಮತ್ತು 10ರಂದು ನಡೆಯಲಿದೆ.

ತಂಡವನ್ನು ರಾಧಾ ಯಾದವ್‌ ಮುನ್ನಡೆಸಲಿದ್ದಾರೆ. ಗಾಯದಿಂದ ಚೇತರಿಕೆ ಕಾಣುತ್ತಿರುವ ಶ್ರೇಯಾಂಕ ಮತ್ತು ಪ್ರಿಯಾಗೆ ಎನ್‌ಸಿಎಯಿಂದ ಫಿಟ್‌ನೆಸ್ ಕ್ಲಿಯರೆನ್ಸ್‌ ಸಿಗದ ಕಾರಣ ಅವರನ್ನು ಈ ಸರಣಿಯಿಂದ ಕೈಬಿಡಲಾಯಿತು. ಫಿಟ್ನೆಸ್‌ ಪಡೆದಲ್ಲಿ ಮಾತ್ರ ಅವರು ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಬಿಸಿಸಿಐ ಜುಲೈ 10ರಂದು ತಂಡ ಪ್ರಕಟಿಸುವ ಸಂದರ್ಭದಲ್ಲಿ ತಿಳಿಸಿತ್ತು. ಆದರೆ ಇಬ್ಬರೂ ಶ್ರೇಷ್ಠತಾ ಕೇಂದ್ರದಲ್ಲಿ ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿ ಇದ್ದಾರೆ.

ಯಸ್ತಿಕಾ ಭಾಟಿಯಾ ಅವರನ್ನು ಏಕದಿನ ತಂಡಕ್ಕೆ ಮಾತ್ರ ಸೇರಿಸಿಕೊಳ್ಳಲಾಗಿದ್ದು, ಗಾಯಗೊಂಡ ಸ್ಪಿನ್ನರ್‌ಗಳ ಬದಲಿಗೆ ಧರಾ ಗುಜ್ಜರ್ ಮತ್ತು ಪ್ರೇಮಾ ರಾವತ್ ಅವರನ್ನು ಕ್ರಮವಾಗಿ ಎಲ್ಲಾ ಸ್ವರೂಪಗಳಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಗುಜ್ಜರ್ ಮತ್ತು ರಾವತ್ ಇಬ್ಬರೂ ಈ ಹಿಂದೆ ಆಯ್ದ ತಂಡಗಳಲ್ಲಿ ಸ್ಥಾನ ಪಡೆದಿದ್ದರು.

ಭಾರತ ಎ ಟಿ20 ತಂಡ: ರಾಧಾ ಯಾದವ್ (ನಾಯಕಿ), ಮಿನ್ನು ಮಣಿ (ಉಪನಾಯಕಿ), ಶಫಾಲಿ ವರ್ಮಾ, ಡಿ. ವೃಂದಾ, ಸಜನಾ ಸಜೀವನ್, ಉಮಾ ಚೆಟ್ರಿ (ವಿ.ಕೀ.), ರಾಘ್ವಿ ಬಿಸ್ಟ್, ಪ್ರೇಮಾ ರಾವತ್, ನಂದಿನಿ ಕಶ್ಯಪ್, ತನುಜಾ ಕನ್ವರ್, ಜೋಶಿತಾ ವಿಜೆ, ಶಬ್ನಮ್ ಶಕೀಲ್, ಸೈಮಾ ಠಾಕೋರ್, ಟಿಟಾಸ್ ಸಾಧು, ಧಾರಾ ಗುಜ್ಜರ್.

ಭಾರತ ಎ ಏಕದಿನ ತಂಡ: ರಾಧಾ ಯಾದವ್ (ನಾಯಕಿ), ಮಿನ್ನು ಮಣಿ (ಉಪನಾಯಕಿ), ಶಫಾಲಿ ವರ್ಮಾ, ತೇಜಲ್ ಹಸಬ್ನಿಸ್, ರಾಘ್ವಿ ಬಿಸ್ತ್, ತನುಶ್ರೀ ಸರ್ಕಾರ್, ಉಮಾ ಚೆಟ್ರಿ (ಡಬ್ಲ್ಯುಕೆ), ತನುಜಾ ಕನ್ವರ್, ನಂದಿನಿ ಕಶ್ಯಪ್ (ವಿ.ಕೀ.), ಧಾರಾ ಗುಜ್ಜರ್, ಜೋಶಿತಾ ವಿಜೆ, ಶಬ್ನಮ್ ಶಕೀಲ್, ಸೈಮಾ ರಾ ಠಾಕೂರ್, ಪ್ರೇಮ ರಾ ಠಾಕೂರ್,