ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್(IND vs ENG) ಸರಣಿಯಲ್ಲಿ ಈಗಾಗಲೇ ಸರಣಿ ದಾಖಲೆ ನಿರ್ಮಿಸಿರುವ ಭಾರತ ತಂಡದ ನಾಯಕ ಶುಭಮನ್ ಗಿಲ್(Shubman Gill) ಅಂತಿಮ ಟೆಸ್ಟ್ ಪಂದ್ಯದಲ್ಲಿಯೂ ಹಲವು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. 5ನೇ ಹಾಗೂ ಸರಣಿ ನಿರ್ಣಾಯಕ ಟೆಸ್ಟ್ ಇಲ್ಲಿನ 'ಕೆನ್ನಿಂಗ್ಟನ್ ಓವಲ್'ನಲ್ಲಿ ಗುರುವಾರ ಮೊದಲ್ಗೊಳ್ಳಲಿದೆ. ಟೆಸ್ಟ್
53 ರನ್
ಇದುವರೆಗೆ ನಾಲ್ಕು ಪಂದ್ಯಗಳಿಂದ 90.25 ರ ಸರಾಸರಿಯಲ್ಲಿ 722 ರನ್ ಗಳಿಸಿರುವ ಗಿಲ್ ಇದೀಗ ಓವಲ್ ಟೆಸ್ಟ್‌ನಲ್ಲಿ 53 ರನ್ ಗಳಿಸಿದರೆ ಒಂದೇ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದಾರೆ. ಪ್ರಸ್ತುತ ದಾಖಲೆ ಸುನಿಲ್ ಗವಾಸ್ಕರ್ ಹೆಸರಲ್ಲಿದೆ. ಅವರು 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 154.80 ರ ಸರಾಸರಿಯಲ್ಲಿ 774 ರನ್ ಗಳಿಸಿದ್ದರು.
53 ರನ್ ಬಾರಿಸಿದರೆ ಸ್ಟೀವ್ ಸ್ಮಿತ್ ದಾಖಲೆಯೊಂದು ಪತನಗೊಳ್ಳಲಿದೆ. ಒಂದೇ ಟೆಸ್ಟ್ ಸರಣಿಯಲ್ಲಿ 4 ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ನಿಂದ ಅತಿ ಹೆಚ್ಚು ರನ್ ಗಳಿದ ದಾಖಲೆ ಸದ್ಯ ಸ್ಮಿತ್ ಹೆಸರಿನಲ್ಲಿದೆ ಅವರು 2019 ರ ಆಶಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ ನಾಲ್ಕು ಪಂದ್ಯಗಳಲ್ಲಿ 774 ರನ್ ಗಳಿಸಿದ್ದರು. ಇದರಲ್ಲಿ ಮೂರು ಶತಕಗಳು ಮತ್ತು ಮೂರು ಅರ್ಧಶತಕಗಳು ಸೇರಿವೆ.
89 ರನ್
ಶುಭ್‌ಮನ್ ಗಿಲ್ 89 ರನ್ ಗಳಿಸಿದರೆ, ಟೆಸ್ಟ್ ಸರಣಿಯಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಲಿದ್ದಾರೆ. ಪ್ರಸ್ತುತ ಈ ದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಅವರು 1936-37ರಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳಿಂದ ಮೂರು ಶತಕ ಮತ್ತು ಒಂದು ಅರ್ಧಶತಕದೊಂದಿಗೆ 810 ರನ್ ಗಳಿಸಿದ್ದರು.
1 ಶತಕ
ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಸರಿಗಟ್ಟಲು ಶುಭಮನ್ ಗಿಲ್‌ಗೆ ಕೇವಲ ಒಂದು ಶತಕದ ಅಗತ್ಯವಿದೆ. ವೆಸ್ಟ್ ಇಂಡೀಸ್‌ನ ಕ್ಲೈಡ್ ವಾಲ್ಕಾಟ್ ಮಾತ್ರ ಟೆಸ್ಟ್ ಸರಣಿಯೊಂದರಲ್ಲಿ ಐದು ಶತಕಗಳನ್ನು ಗಳಿಸಿದ್ದಾರೆ. ಈ ದಾಖಲೆಯನ್ನು ಅವರು 1955 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಾಧಿಸಿದ್ದರು.
ಇನ್ನೊಂದು ಶತಕ ಬಾರಿಸಿದರೆ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ನಾಯಕ ಎನಿಸಿಕೊಳ್ಳಲಿದ್ದಾರೆ. ಅವರು ಪ್ರಸ್ತುತ ಡಾನ್ ಬ್ರಾಡ್ಮನ್ (1947 ಇಂಗ್ಲೆಂಡ್ ವಿರುದ್ಧ) ಮತ್ತು ಸುನಿಲ್ ಗವಾಸ್ಕರ್ (1978 ವೆಸ್ಟ್ ಇಂಡೀಸ್ ವಿರುದ್ಧ) ಅವರೊಂದಿಗೆ ನಾಲ್ಕು ಶತಕಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ IND vs ENG 5th Test: ಅಂತಿಮ ಟೆಸ್ಟ್‌ನ ಪಿಚ್ ರಿಪೋರ್ಟ್, ಹವಾಮಾನ ವರದಿ ಹೀಗಿದೆ