ಮುಂಬಯಿ: ಟೀಮ್ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ಎಂದರೆ, ಅದೆಷ್ಟೂ ಯುವಕರ ಕ್ರಶ್. ಇಂದು ಅವರು 29ನೇ ವಸಂತಕ್ಕೆ(Smriti Mandhana birthday) ಕಾಲಿಟ್ಟಿದ್ದಾರೆ. ಮುಂಬೈ ಮೂಲದ ಸ್ಮೃತಿ ಮಂಧನಾ ಜುಲೈ 18, 1996ರಲ್ಲಿ ಜನಿಸಿದ್ದರು. ಮಂಧನಾ ಪೂರ್ಣ ಹೆಸರು ಸ್ಮೃತಿ ಶ್ರೀನಿವಾಸ್ ಮಂಧನಾ. ಎಡಗೈ ಆರಂಭಿಕ ಬ್ಯಾಟರ್ ಆಗಿರುವ ಮಂಧನಾ, ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
2013 ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪಾದರ್ಪಣೆ ಮಾಡಿದಾಗಿನಿಂದ, ಮಂಧಾನ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಜತೆಗೆ ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಜನಪ್ರಿಯತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸೇನಾ ರಾಷ್ಟ್ರಗಳ ಎದುರು 50+ ರನ್ ಬಾರಿಸಿದ ಆಟಗಾರ್ತಿ ಎನ್ನುವ ಹಿರಿಮೆ ಮಂಧನಾಗಿದೆ.
ಅಂಡರ್ 19 ಪಂದ್ಯಾವಳಿಯಲ್ಲಿ ಪಶ್ಚಿಮ ವಲಯವನ್ನು ಪ್ರತಿನಿಧಿಸಿದ್ದ ಸ್ಮೃತಿ ಮಂಧನಾ, ದೇಶಿಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ದಾಖಲೆಯನ್ನು ನಿರ್ಮಿಸಿದ್ದರು. ಗುಜರಾತ್ ವಿರುದ್ದದ ಏಕದಿನ ಪಂದ್ಯದಲ್ಲಿ ಮಂಧನಾ 150 ಎಸೆತಗಳನ್ನು ಎದುರಿಸಿ 224 ರನ್ ಚಚ್ಚಿದ್ದರು.
2⃣6⃣3⃣ intl. matches
— BCCI Women (@BCCIWomen) July 18, 2025
9⃣1⃣1⃣2⃣ intl. runs
1⃣4⃣ intl. centuries
Most hundreds by an Indian in Women's ODIs 🫡
Here's wishing #TeamIndia vice-captain and one of the finest modern day batters - Smriti Mandhana, a very Happy Birthday 🎂👏@mandhana_smriti pic.twitter.com/OZqYCFzCmK
ಮಂಧಾನ ಪ್ರಮುಖ ದಾಖಲೆಗಳು
ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ದಾಖಲೆಯನ್ನು ಸ್ಮೃತಿ ಮಂಧಾನ ಹೊಂದಿದ್ದಾರೆ. 10 ಶತಕ ಬಾರಿಸಿದ್ದಾರೆ. ಮಂಧಾನ ಒಟ್ಟಾರೆ ಶತಕ ಪಟ್ಟಿಯಲ್ಲಿ ಮೇಗ್ ಲ್ಯಾನಿಂಗ್ (15), ಸುಜೀ ಬೇಟ್ಸ್ (13) ಮತ್ತು ಟ್ಯಾಮಿ ಬ್ಯೂಮಾಂಟ್ (11) ನಂತರ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಮಹಿಳಾ ಟಿ20ಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಸ್ಮೃತಿ ಮಂಧಾನ. 2013 ರಲ್ಲಿ ಪಾದರ್ಪಣೆ ಮಾಡಿದ ನಂತರ 153 ಟಿ20ಗಳಲ್ಲಿ, ಎಡಗೈ ಆಟಗಾರ್ತಿ 29.93 ಸರಾಸರಿಯಲ್ಲಿ 3982 ರನ್ ಗಳಿಸಿದ್ದಾರೆ.
ಮಂಧಾನಾ ಅವರು ಟಿ20ಯಲ್ಲಿ ಭಾರತೀಯ ಮಹಿಳಾ ಆಟಗಾರ್ತಿಯೊಬ್ಬರ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಹೊಂದಿದ್ದಾರೆ. ಜೂನ್ 2025 ರಲ್ಲಿ ನಾಟಿಂಗ್ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಯನಲ್ಲಿ 112 ರನ್ ಗಳಿಸಿದಾಗ ಅವರು ಈ ಸಾಧನೆ ಮಾಡಿದರು.
ಸ್ಮೃತಿ ಮಂಧಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಬಾರಿಸಿದ ಏಕೈಕ ಭಾರತೀಯ ಮಹಿಳಾ ಬ್ಯಾಟ್ಸ್‌ಮನ್ ಕೂಡ ಹೌದು.
ದ್ವಿಪಕ್ಷೀಯ ಟಿ20 ಸರಣಿಯಲ್ಲಿ 200 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎಂಬ ಖ್ಯಾತಿಯೂ ಅವರದ್ದಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ, ಅವರು ಐದು ಪಂದ್ಯಗಳಿಂದ 44.20 ಸರಾಸರಿಯಲ್ಲಿ 221 ರನ್ ಗಳಿಸಿದ್ದರು.
ಮಹಿಳಾ ಏಕದಿನ ಪಂದ್ಯಗಳಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಸ್ಮೃತಿ ಮಂಧಾನ ಹೊಂದಿದ್ದಾರೆ. ಕಳೆದ ವರ್ಷ, ಅವರು ನಾಲ್ಕು ಶತಕಗಳನ್ನು ಗಳಿಸಿದ್ದರು.
ಮಹಿಳಾ ಟಿ20ಗಳಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಬೌಂಡರಿಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ. ಕಳೆದ ವರ್ಷ, ಮಂಧಾನ 23 ಪಂದ್ಯಗಳಿಂದ 104 ಬೌಂಡರಿಗಳನ್ನು ಬಾರಿಸಿದ್ದರು.
ಮಹಿಳಾ ಟಿ20ಯಲ್ಲಿ ಅತಿ ಹೆಚ್ಚು 50 ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ದಾಖಲೆಯನ್ನು ಸ್ಮೃತಿ ಮಂಧಾನ ಹೊಂದಿದ್ದಾರೆ. ಅವರು ಟಿ20ಯಲ್ಲಿ 32 ಬಾರಿ 50 ಅಥವಾ ಅದಕ್ಕಿಂತ ಹೆಚ್ಚು ಸ್ಕೋರ್‌ಗಳನ್ನು ಗಳಿಸಿದ್ದಾರೆ.
ಮಹಿಳಾ ಟಿ20ಯಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸ್ಮೃತಿ ಮಂಧಾನ ಹೊಂದಿದ್ದಾರೆ. ಈ ವರ್ಷ 23 ಪಂದ್ಯಗಳಲ್ಲಿ, ಮಂಧಾನ 42.38 ಸರಾಸರಿಯಲ್ಲಿ 763 ರನ್ ಗಳಿಸಿದ್ದಾರೆ.
ಇದನ್ನೂ ಓದಿ IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಆಘಾತ!
ಮಹಿಳಾ ಟಿ20ಯಲ್ಲಿ ಅತ್ಯಂತ ವೇಗವಾಗಿ 4000 ರನ್ ಗಳಿಸಿದ ಭಾರತೀಯ ಆಟಗಾರ್ತಿ ಎಂಬ ದಾಖಲೆಯನ್ನು ಕೂಡ ಹೊಂದಿದ್ದಾರೆ. 94 ಪಂದ್ಯಗಳಿಂದ ಈ ಮೈಲುಗಲ್ಲು ನೆಟ್ಟಿದ್ದಾರೆ.