Tilak Varma: ಕೌಂಟಿ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ ತಿಲಕ್ ವರ್ಮಾ
ತಿಲಕ್ ವರ್ಮಾ ಭಾರತ ಪರ 25 ಟಿ20, 4 ಏಕದಿನ ಸೇರಿ ಒಟು 29 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ವೇಳೆ ಎರಡು ಶತಕ ಕೂಡ ಬಾರಿಸಿದ್ದಾರೆ. ಒಟ್ಟಾರೆ 749 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಿಲಕ್ ವರ್ಮ 18 ಪಂದ್ಯಗಳಿಂದ 1204 ರನ್ ಗಳಿಸಿದ್ದಾರೆ. ಇದೇ ವೇಳೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 36 ಪಂದ್ಯವಾಡಿ 1494 ರನ್ ಗಳಿಸಿದ್ದಾರೆ.

ಲಂಡನ್: ಕೌಂಟಿ ಚಾಂಪಿಯನ್‌ಶಿಪ್‌ನ(County Championship) ಡಿವಿಷನ್ ಒನ್ ಪಂದ್ಯದಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧ ಹ್ಯಾಂಪ್‌ಶೈರ್(Hampshire) ಪರ, ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ತಿಲಕ್ ವರ್ಮಾ(Tilak Varma) ಶತಕ ಸಿಡಿಸಿ ಮಿಂಚಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ 13 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ 112 ರನ್‌ಗಳಿಗೆ ಔಟಾದರು. ಅವರ ಈ ಬ್ಯಾಟಿಂಗ್ ನೆರವಿನಿಂದ ತಂಡ 578 ರನ್ ದಾಖಲಿಸಿತು.
ಕಳೆದ ಋತುವಿನಲ್ಲಿ ರನ್ನರ್-ಅಪ್ ಸ್ಥಾನ ಪಡೆದ ಹ್ಯಾಂಪ್‌ಶೈರ್ ಪ್ರಸ್ತುತ ಡಿವಿಷನ್ ಒನ್‌ನಲ್ಲಿ ಏಳನೇ ಸ್ಥಾನದಲ್ಲಿದೆ. ತಿಲಕ್ ತಂಡದ ಪರ ನಾಲ್ಕು ಪಂದ್ಯಗಳನ್ನು ಆಡಲಿದ್ದಾರೆ. ತಿಲಕ್ ಈಗಾಗಲೇ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತು ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ದೊಡ್ಡ ಪ್ರಭಾವ ಬೀರಿರುವ ಅತ್ಯಾಕರ್ಷಕ ಪ್ರತಿಭೆ. ಇದೀಗ ಕೌಂಟಿ ಕ್ರಿಕೆಟ್‌ನಲ್ಲೂ ಸದ್ದು ಮಾಡಲಾರಂಭಿಸಿದ್ದಾರೆ.
ತಿಲಕ್ ವರ್ಮಾ ಭಾರತ ಪರ 25 ಟಿ20, 4 ಏಕದಿನ ಸೇರಿ ಒಟು 29 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ವೇಳೆ ಎರಡು ಶತಕ ಕೂಡ ಬಾರಿಸಿದ್ದಾರೆ. ಒಟ್ಟಾರೆ 749 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಿಲಕ್ ವರ್ಮ 18 ಪಂದ್ಯಗಳಿಂದ 1204 ರನ್ ಗಳಿಸಿದ್ದಾರೆ. ಇದೇ ವೇಳೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 36 ಪಂದ್ಯವಾಡಿ 1494 ರನ್ ಗಳಿಸಿದ್ದಾರೆ.
ಸರ್ರೆ ತಂಡವನ್ನು ಪ್ರತಿನಿಧಿಸುವ ಎಡಗೈ ಸ್ಪಿನ್ನರ್ ಸಾಯಿ ಕಿಶೋರ್, ಯಾರ್ಕ್‌ಷೈರ್ ವಿರುದ್ಧ 119 ರನ್‌ಗಳಿಗೆ ಎರಡು ವಿಕೆಟ್ ಪಡೆದರು. ಸಸೆಕ್ಸ್ ವಿರುದ್ಧ ಎಡಗೈ ವೇಗಿ ಖಲೀಲ್ ಅಹ್ಮದ್ ಒಂದು ವಿಕೆಟ್ ಪಡೆದಿದ್ದು, ಅವರ ತಂಡ ಎಸೆಕ್ಸ್ ಗೆಲುವಿನತ್ತ ದಾಪುಗಾಲು ಹಾಕಿದೆ.