ಮುಂಬಯಿ: ಹನ್ನೆರಡು ವರ್ಷಗಳ ನಂತರ ಭಾರತವು ಐಸಿಸಿ ಏಕದಿನ ಕ್ರಿಕೆಟ್ ಮಹಿಳಾ ವಿಶ್ವಕಪ್ ಟೂರ್ನಿಯನ್ನು(Women’s ODI World Cup) ಆಯೋಜಿಸುತ್ತಿದೆ. ಗುವಾಹಟಿಯಲ್ಲಿ ಸೆ. 30ರಂದು ಆರಂಭವಾಗುವ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ಎದುರು ಕಣಕ್ಕಿಳಿಯಲಿದೆ. ಲಂಕಾ ಕ್ರಿಕೆಟ್ ಮಂಡಳಿಯು ಟೂರ್ನಿಯ ಜಂಟಿ ಆತಿಥ್ಯ ವಹಿಸಿದೆ. ಪಂದ್ಯಾವಳಿ ಆರಂಭಕ್ಕೂ ಮುನ್ನ ಇದುವರೆಗಿನ ಆವೃತ್ತಿಯ ದಾಖಲೆಗಳ ಹಿನ್ನೋ ನೋಟ ಇಲ್ಲಿದೆ.
2000ನೇ ಇಸವಿಯಿಂದ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ನ್ಯೂಜಿಲೆಂಡ್‌ನ ದಿಗ್ಗಜ ಬ್ಯಾಟರ್ ಡೆಬ್ಬಿ ಹಾಕ್ಲಿ ಹೊಂದಿದ್ದಾರೆ. ಈಗ, ಮತ್ತೊಬ್ಬ ಕಿವೀಸ್ ದಂತಕಥೆ ಸೂಜಿ ಬೇಟ್ಸ್ ಅವರನ್ನು ಹಿಂದಿಕ್ಕುವ ಸಾಧ್ಯತೆ ಇದೆ. ದಾಖಲೆ ಮುರಿಯಲು ಸೂಜಿ 322 ರನ್ ಬಾರಿಸಬೇಕಿದೆ.
ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್
ಡೆಬ್ಬಿ ಹಾಕ್ಲೆ- 1501 ರನ್
ಮಿಥಾಲಿ ರಾಜ್- 1321 ರನ್
ಜಾನ್ ಬ್ರಿಟಿನ್- 1299 ರನ್
ಷಾರ್ಲೆಟ್ ಎಡ್ವರ್ಡ್ಸ್- 1231 ರನ್
ಸುಜಿ ಬೇಟ್ಸ್ - 1179 ರನ್
ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳು
ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ರನ್‌ಗಳ ಗಡಿ ದಾಟಿದ ದಾಖಲೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ನಾಯಕಿ ಅಲಿಸಾ ಹೀಲಿ ಹೆಸರಿನಲ್ಲಿದೆ. ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ಅವರು ಈ ಮೈಲುಗಲ್ಲು ನೆಟ್ಟಿದ್ದರು.
ಅಲಿಸ್ಸಾ ಹೀಲಿ- 509 ರನ್ (2022)
ರಾಚೆಲ್ ಹೇನ್ಸ್- 497 ರನ್ (2022)
ಡೆಬ್ಬಿ ಹಾಕ್ಲೆ- 456 ರನ್ (1997/98)
ಲಿಂಡ್ಸೆ ರೀಲರ್ - 448 ರನ್ (1988/89)
ಡೆಬ್ಬಿ ಹಾಕಿ - 446 ರನ್ (1988/89)
ಅತ್ಯಧಿಕ ಸ್ಕೋರ್
ಬೆಲಿಂಡಾ ಕ್ಲಾರ್ಕ್- 229* (1997)
ಚಾಮರಿ ಅಥಾಪತ್ತು- 178* (2017)
ಷಾರ್ಲೆಟ್ ಎಡ್ವರ್ಡ್ಸ್- 173* (1997)
ಹರ್ಮನ್‌ಪ್ರೀತ್ ಕೌರ್- 171*(2017)
ಸ್ಟಾಫಾನಿ ಟೇಲರ್- 171(2013)
ಅತ್ಯಧಿಕ ಶತಕ
ನ್ಯಾಟ್ ಸ್ಕಿವರ್-ಬ್ರಂಟ್- 4*
ಸುಜಿ ಬೇಟ್ಸ್- 4*
ಷಾರ್ಲೆಟ್ ಎಡ್ವರ್ಡ್ಸ್- 4
ಜಾನ್ ಬ್ರಿಟಿನ್ - 4
ಅತ್ಯಧಿಕ ವಿಕೆಟ್
ಜೂಲನ್ ಗೋಸ್ವಾಮಿ- 43 ವಿಕೆಟ್
ಲಿನ್ ಫುಲ್‌ಸ್ಟನ್- 39 ವಿಕೆಟ್
ಕರೋಲ್ ಹಾಡ್ಜಸ್- 37 ವಿಕೆಟ್
ಕ್ಲೇರ್ ಟೇಲರ್ - 36 ವಿಕೆಟ್
ಶಬ್ನಿಮ್ ಇಸ್ಮಾಯಿಲ್- 36
ಮೇಗನ್ ಶುಟ್ (AUS) - 34 ವಿಕೆಟ್
ಅನ್ಯಾ ಶ್ರಬ್ಸೋಲ್- 34 ವಿಕೆಟ್
ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳು
ಲಿನ್ ಫುಲ್‌ಸ್ಟನ್- 23 ವಿಕೆಟ್‌ಗಳು (1981/82)
ಜಾಕಿ ಲಾರ್ಡ್- 22 ವಿಕೆಟ್ (1981/82)
ಸೋಫಿ ಎಕ್ಲೆಸ್ಟೋ - 21 ವಿಕೆಟ್ (2022)
ನೀತು ಡೇವಿಡ್ - 20 ವಿಕೆಟ್ (2005)
ಶುಭಾಂಗಿ ಕುಲಕರ್ಣಿ - 20 ವಿಕೆಟ್‌ಗಳು (1981/82)