ದುಬೈ: ಐಸಿಸಿ ನೂತನ ಟಿ20 ಶ್ರೇಯಾಂಕ(ICC T20I Rankings) ಪ್ರಕಟಿಸಿದ್ದು, ಕಳೆದ 359ಗಳಿಂದ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡದಿದ ಟೀಮ್ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಒಂದು ಸ್ಥಾನದ ಪ್ರಗತಿ ಸಾಧಿಸಿ ಟಾಪ್ 10ನಲ್ಲಿ ಸ್ಥಾನ ಉಳಿಸಿಕೊಂಡಿದಾರೆ. ಜೈಸ್ವಾಲ್ ಮಾತ್ರವಲ್ಲದೆ ಋತುರಾಜ್ ಗಾಯಕ್ವಾಡ್ ಕೂಡ 2 ಸ್ಥಾನಗಳ ಜಿಗತ ಕಂಡಿದಾರೆ.
ಜೈಸ್ವಾಲ್ ಕೊನೆಯ ಬಾರಿಗೆ ಭಾರತ ತಂಡದ ಪರ ಟಿ20 ಆಡಿದ್ದು 2024 ಜುಲೈ 30 ರಂದು. ಇದಾದ ಬಳಿಕ ಅವರು ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆದರೂ ಕೂಡ ಅವರು ಒಂದು ಸ್ಥಾನದ ಜಿಗಿತ ಕಂಡು ಸದ್ಯ 673 ರೇಟಿಂಗ್ ಅಂಕದೊಂದಿಗೆ 9ನೇ ಸ್ಥಾನ ಪಡೆದಿದ್ದಾರೆ. ಇನ್ನೊಂದೆಡೆ ಗಾಯಕ್ವಾಡ್ 589 ರೇಟಿಂಗ್ ಅಂಕ ಗಳಿಸಿ 25ನೇ ಸ್ಥಾನಿಯಾಗಿದಾರೆ.
ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅಗ್ರಸ್ಥಾನ ಉಳಿಸಿಕೊಂಡಿದರೆ, ಭಾರತೀಯ ಯುವ ಎಡಗೈ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮ(829) ಮತ್ತು ತಿಲಕ್ ವರ್ಮ(804) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಿಯಾಗಿದ್ದಾರೆ.
ಟಾಪ್-5 ಬ್ಯಾಟರ್‌ಗಳು
ಟ್ರಾವಿಸ್ ಹೆಡ್-847
ಅಭಿಷೇಕ್ ಶರ್ಮ- 829
ತಿಲಕ್ ವರ್ಮ-804
ಫಿಲ್ ಸಾಲ್ಟ್- 791
ಜಾಸ್ ಬಟ್ಲರ್-772