ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮೊಮ್ಮಗಳನ್ನೇ ಮದುವೆಯಾದ್ನಾ ಈ ಹಣ್ಣು ಹಣ್ಣು ಮುದುಕ? ವೈರಲ್ ವಿಡಿಯೊದ ಅಸಲಿಯತ್ತೇನು?

Grandfather married granddaughter: 70 ವರ್ಷದ ವೃದ್ಧನೊಬ್ಬ ತನ್ನ 25 ವರ್ಷದ ಮೊಮ್ಮಗಳನ್ನು ಮದುವೆಯಾಗಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ನೋಡಿದ ನೆಟ್ಟಿಗರನ್ನು ಆಘಾತಕ್ಕೆ ದೂಡಿದೆ. 25 ವರ್ಷದ ಮಹಿಳೆಯು, ತಾತನ ಜೊತೆಗಿನ ಮದುವೆಯಿಂದ ತುಂಬಾ ಸಂತೋಷವಾಗಿರುವುದಾಗಿ ಹೇಳಿದ್ದಾಳೆ.

ನವದೆಹಲಿ: 70 ವರ್ಷದ ವೃದ್ಧನೊಬ್ಬ ತನ್ನ 25 ವರ್ಷದ ಮೊಮ್ಮಗಳನ್ನು ಮದುವೆಯಾಗಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ನೋಡಿದ ನೆಟ್ಟಿಗರನ್ನು ಆಘಾತಕ್ಕೆ ದೂಡಿದೆ. ವೈರಲ್ ಆಗಿರುವ ವಿಡಿಯೊದಲ್ಲಿ(Viral Video), ಇಬ್ಬರೂ ವ್ಯಕ್ತಿಗಳು ತಮ್ಮ ಮದುವೆಯಲ್ಲಿ ತೃಪ್ತರಾಗಿರುವಂತೆ ಕಾಣುತ್ತಿದ್ದು, ಭಾರಿ ವಿವಾದವನ್ನು ಹುಟ್ಟುಹಾಕಿದೆ.

ಮೊದಲಿಗೆ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಲಾದ ಈ ವಿಡಿಯೊವನ್ನು ನಂತರ ಇನ್‌ಸ್ಟಾಗ್ರಾಮ್, ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಹರಡಿತು. ಈ ವಿಡಿಯೊದಲ್ಲಿ, ಸಂದರ್ಶಕರೊಬ್ಬರು ವೃದ್ಧ ಪುರುಷ ಮತ್ತು ಯುವತಿಯನ್ನೂ ಪ್ರಶ್ನಿಸಿದ್ದಾರೆ. “ಅವಳು ಹುಟ್ಟಿದಾಗ, ನಾನು ಅವಳನ್ನು ಪ್ರೀತಿಸುತ್ತಿದ್ದೆ. ಅವಳು ವಯಸ್ಕಳಾಗುವವರೆಗೂ ನಾನು ಕಾಯುತ್ತಿದ್ದೆ, ಮತ್ತು ಈಗ ನಾವು ಮದುವೆಯಾಗಿದ್ದೇವೆ” ಎಂದು ಆ ವ್ಯಕ್ತಿ ವಿವರಿಸಿದ್ದಾರೆ.

25 ವರ್ಷದ ಮಹಿಳೆಯು ತಾತನ ಜೊತೆಗಿನ ಮದುವೆಯಿಂದ ತುಂಬಾ ಸಂತೋಷವಾಗಿರುವುದಾಗಿ ವ್ಯಕ್ತಪಡಿಸುತ್ತಾ, ತನ್ನ ಅಜ್ಜ ಯಾವಾಗಲೂ ತನಗೆ ಪ್ರೀತಿ ಮತ್ತು ಗೌರವವನ್ನು ನೀಡುತ್ತಾರೆ ಎಂದು ಹೇಳಿದ್ದಾರೆ. ಇಬ್ಬರೂ ಸಂತೋಷ ಮತ್ತು ಆತ್ಮವಿಶ್ವಾಸ ತೋರುತ್ತಿದ್ದರೂ, ಈ ಸಂಬಂಧವು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಡಿಯೊ ವೀಕ್ಷಿಸಿ:

ಈ ವಿಡಿಯೊ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಸುನಾಮಿಯಂತೆ ಕಾಮೆಂಟ್‍ಗಳು ಹರಿದುಬಂದಿವೆ. ಕೆಲವು ಬಳಕೆದಾರರು ಇದನ್ನು ಪ್ರೀತಿಯ ವಿಶಿಷ್ಟ ಉದಾಹರಣೆ ಎಂದು ಕರೆದರೆ, ಇನ್ನು ಕೆಲವರು ಇದನ್ನು ಅನೈತಿಕ ಎಂದು ಖಂಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Digital Arrest: ಅಶ್ಲೀಲ ಫೋಟೋ ವೈರಲ್‌ ಮಾಡುವ ಬೆದರಿಕೆ; 3 ತಿಂಗಳಲ್ಲಿ 19 ಕೋಟಿ ರೂ ಕಳೆದುಕೊಂಡ ವೈದ್ಯೆ

ಇನ್ನು ವಿಡಿಯೊದ ಸತ್ಯಾಸತ್ಯತೆಯ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿವೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಸತ್ಯ-ಪರಿಶೀಲನಾ ವೆಬ್‌ಸೈಟ್‌ಗಳು ವಿಡಿಯೊವನ್ನು ಸ್ಕ್ರಿಪ್ಟ್ ಮಾಡಿರಬಹುದು ಎಂದು ಹೇಳಿವೆ. ಇದೇ ರೀತಿಯ ವಿಡಿಯೊಗಳನ್ನು ಹಿಂದೆಯೂ ರಚಿಸಲಾಗಿದೆ. ಮನರಂಜನಾ ಉದ್ದೇಶಗಳಿಗಾಗಿ, ಆದರೆ ನಿಜ ಜೀವನದ ಘಟನೆಗಳಂತೆ ವಿಡಿಯೊವನ್ನು ಪ್ರಸ್ತುತಪಡಿಸಲಾಗುತ್ತದೆ. ಸತ್ಯ-ಪರಿಶೀಲನಾ ವರದಿಯ ಪ್ರಕಾರ, ಇಂತಹ ವಿಡಿಯೊಗಳನ್ನು ಸಾಮಾನ್ಯವಾಗಿ ವೀವ್ಸ್, ಲೈಕ್ಸ್, ಕಾಮೆಂಟ್ ಬರಲು ಮಾಡಲಾಗುತ್ತದೆ. ಇದೆಲ್ಲದರ ಹೊರತಾಗಿಯೂ, ಈ ನಿರ್ದಿಷ್ಟ ವಿಡಿಯೊದ ಸತ್ಯಾಸತ್ಯತೆಯನ್ನು ಮಾತ್ರ ಪರಿಶೀಲಿಸಲಾಗಿಲ್ಲ. ಇದು ನಿಜವೇ ಅಥವಾ ಸುಳ್ಳೇ ಎಂಬುದು ತಿಳಿಯಲಾಗಿಲ್ಲ.