ಪತಿಯನ್ನು ಕೊಂದು ಬೈಕ್‌ನಲ್ಲಿ ಹೆಣ ಸಾಗಿಸಿದ ಪಾತಕಿ
ಅನೈತಿಕ ಸಂಬಂಧದ ಬಗ್ಗೆ ಪತಿ ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು (Murder Case) ಗೋಣಿಚೀಲದಲ್ಲಿ ಶವವನ್ನು ಕಟ್ಟಿಕೊಂಡು ಬೈಕಿನಲ್ಲಿ ಸಾಗಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಪರಾರಿಯಾದ ಪ್ರಿಯಕರನಿಗಾಗಿ ಹುಡುಕಾಟ ಶುರುಮಾಡಿದ್ದಾರೆ.