ನವದೆಹಲಿ: ಹಾಳಾದ ವಸ್ತುಗಳಿಂದ ಏನು ಮಾಡಲು ಸಾಧ್ಯವಿದೆ ಎಂದುಕೊಂಡು ನಾವು ಕೆಲವೊಮ್ಮೆ ಅದನ್ನು ಗುಜುರಿಗೆ ಹಾಕುತ್ತೇವೆ. ಆದರೆ ಇವುಗಳಿಂದ ಮನೆಯನ್ನೂ ಅಲಂಕರಿಸಬಹುದು, ಅಗತ್ಯದ ಒಂದು ವಸ್ತುವಾಗಿಯೂ ಬಳಸಬಹುದು. ಅಪರಶಕ್ತಿ ಖುರಾನಾ ಎಂಬವರು ತಮ್ಮ ಹಳೆಯ ರೆಫ್ರಿಜರೇಟರ್ (Refrigerator), ಲ್ಯಾಂಡ್ ಲೈನ್ (Land phone) ಫೋನ್ ಸೇರಿದಂತೆ ಹಾಳಾದ ವಸ್ತುಗಳನ್ನು ಬಳಸಿ ಅದಕ್ಕೆ ಮರು ಜೀವ ನೀಡಿದ್ದಾರೆ. ಇದನ್ನು ಅವರು ಹೇಗೆ ಮಾಡಿದರು ಎನ್ನುವ ಕುರಿತು ವಿಡಿಯೊ (Viral Video) ಸಹಿತ ಇನ್ ಸ್ಟಾಗ್ರಾಮ್ ನಲ್ಲಿ (Instagram) ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.
ಗುಜುರಿಗ ಹಾಕಲಾದ ರೆಫ್ರಿಜರೇಟರ್ ಅನ್ನು ನೋಡಿದ ಅಪರಶಕ್ತಿ ಖುರಾನಾ ಅವರು ಅದಕ್ಕೆ ಮರುಜೀವ ಕೊಡಲು ನಿರ್ಧರಿಸಿದರು. ಅದನ್ನು ತಮ್ಮ ಬೂಟುಗಳನ್ನು ಇರಿಸಲು ಸೂಕ್ತ ಸ್ಥಳವಾಗಿ ಪರಿವರ್ತಿಸಿದರು. ನೋಡಲು ಆಕರ್ಷಕವಾಗಿ ಕಾಣುವ ಅದನ್ನು ಅವರು ಮಾಡಿದ್ದು ಹೇಗೆ ಎಂಬುದನ್ನು ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ಎಲ್ಲರ ಮನೆ ಮುಂದೆಯೂ ಚಪ್ಪಲಿಗಳನ್ನು ಅಸ್ತವ್ಯಸ್ತವಾಗಿ ಇಡಲಾಗುತ್ತದೆ. ಇದು ಕೆಲವೊಮ್ಮೆ ಅಸಹ್ಯ ಎನಿಸುವಂತೆ ಮಾಡುತ್ತದೆ. ಅದಕ್ಕಾಗಿ ಮನೆಯಲ್ಲೇ ಇರುವ ಹಾಳಾದ ರೆಫ್ರಿಜರೇಟರ್ ಅನ್ನು ಬಳಸಿ ಸ್ಟ್ಯಾಂಡ್ ಮಾಡಿಕೊಳ್ಳಬಹುದು. ಇದರಿಂದ ಮನೆಯ ಎದುರು ಹೆಚ್ಚು ಸ್ವಚ್ಛ, ಸುಂದರವಾದ ಪರಿಸರ ನಿರ್ಮಾಣವಾಗುವುದು ಮಾತ್ರವಲ್ಲ ಚಪ್ಪಲಿಗಳನ್ನು ಎಲ್ಲಿಡಬೇಕು ಎನ್ನುವ ಸಮಸ್ಯೆಗೂ ಪರಿಹಾರ ಸಿಗುತ್ತದೆ.
ಇನ್ ಸ್ಟಾಗ್ರಾಮ್ ಬಳಕೆದಾರ ಅಪರಶಕ್ತಿ ಖುರಾನಾ ಅವರು ತಮ್ಮ ಕೌಶಲವನ್ನು ಬಳಸಿ ಹಳೆಯ ರೆಫ್ರಿಜರೇಟರ್ ಅನ್ನು ಮರು ಬಳಕೆ ಮಾಡಿಕೊಂಡಿರುವ ರೀತಿ ಹಲವಾರು ಮಂದಿ ಬೆರಗುಗೊಳ್ಳುವಂತೆ ಮಾಡಿದೆ. ಇನ್ ಸ್ಟಾಗ್ರಾಮ್ ನಲ್ಲಿ ಅವರು ಹಳೆಯ ರೆಫ್ರಿಜರೇಟರ್ ಅನ್ನು ಚಪ್ಪಲಿ ಸ್ಟ್ಯಾಂಡ್ ಆಗಿ ಪರಿವರ್ತಿಸುವ ಹಂತಹಂತದ ಪ್ರಕ್ರಿಯೆಯನ್ನು ವರ್ಣಿಸಿದ್ದಾರೆ.
ಮೊದಲು ಅವರು ರೆಫ್ರಿಜರೇಟರ್ ಅನ್ನು ಸ್ವಚ್ಛಗೊಳಿಸಿ ಫ್ರಿಡ್ಜ್ ಶೆಲ್ಫ್‌ಗಳನ್ನು ಕಸ್ಟಮೈಸ್ ಮಾಡಿಕೊಂಡರು. ಬಳಿಕ ಅದರ ತುಕ್ಕು ಹಿಡಿದ ಭಾಗಗಳನ್ನು ಬದಲಾಯಿಸಿ ಅದರ ಮೇಲ್ಮೈ, ಒಳಮೈಗೆ ಬಣ್ಣಗಳನ್ನು ಹಚ್ಚಿ ಸಾಂಪ್ರದಾಯಿಕ ಭಾರತೀಯ ಜಾನಪದ ಕಲಾ ಶೈಲಿಯ ವರ್ಣರಂಜಿತ ಮಧುಬನಿ ಕಲಾ ವಿನ್ಯಾಸವನ್ನು ರಚಿಸಿದರು. ಅದಕ್ಕೆ ಮರದ ಕಾಲುಗಳನ್ನು ನೀಡಿ ಕಪಾಟಿನ ರೂಪವನ್ನು ಕೊಟ್ಟರು. ಇದು ಸಂಪೂರ್ಣಗೊಂಡ ಮೇಲೆ ಅದು ಒಂದು ಸುಂದರವಾದ, ಆಕರ್ಷಕವಾದ ಕಪಾಟಿನಂತೆ ಕಂಗೊಳಿಸುತ್ತಿತ್ತು.
ವೈರಲಾಗುತ್ತಿರುವ ವಿಡಿಯೊ ಇಲ್ಲಿದೆ
ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಅನೇಕರು ಅದ್ಭುತ ಎಂದು ಶ್ಲಾಘಿಸಿದ್ದಾರೆ. ಅಪರಾಶಕ್ತಿ ಖುರಾನಾ ಅವರ ಈ ವಿಡಿಯೊ 20.3 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, 1.5 ಮಿಲಿಯನ್‌ಗಿಂತಲೂ ಹೆಚ್ಚು ಮೆಚ್ಚುಗೆಗಳನ್ನು ಗಳಿಸಿದೆ. ಒಬ್ಬರು ಕಾಮೆಂಟ್ ನಲ್ಲಿ ಕೆಲವೊಮ್ಮೆ ಸೌಂದರ್ಯವು ವೆಚ್ಚಕ್ಕಿಂತ ಹೆಚ್ಚು ಮೌಲ್ಯಯುತವಾಗಿರುತ್ತದೆ. ನಿಸ್ಸಂದೇಹವಾಗಿ ಅಗ್ಗದ ಶೂ ರಾಕ್ ಖರೀದಿಸುವುದು ಸುಲಭ. ಆದರೆ ಈ ರಾಕ್ ಮಾಡಲಾದ ಕಲೆ ಮತ್ತು ಪ್ರಯತ್ನಗಳು ಮಾರುಕಟ್ಟೆಯಲ್ಲಿನ ಎಲ್ಲಕ್ಕಿಂತ ಹೆಚ್ಚು ಮೌಲ್ಯಯುತವನ್ನಾಗಿಸಿದೆ ಎಂದು ಹೇಳಿದ್ದಾರೆ.
ಈ ಸುದಿಯನ್ನೂ ಓದಿ: KSRTC Strike: ನಾಳೆಯಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಅನಿರ್ದಿಷ್ಟಾವಧಿ ಮುಷ್ಕರ, ಇಂದು ಸಿಎಂ ಸಭೆ
ಇನ್ನೊಬ್ಬರು ಇದು ಅಸಾಧಾರಣವಾದದ್ದು ಎಂದಿದ್ದರೆ ಮತ್ತೊಬ್ಬರು ಯಾರಾದರೂ ಹೇಗೆ ಇಷ್ಟೊಂದು ಸೃಜನಶೀಲರಾಗಬಹುದೇ ? ಎಂದು ಪ್ರಶ್ನಿಸಿದ್ದಾರೆ.
ಅಪರಶಕ್ತಿ ಅವರು ಹಳೆಯ ವಸ್ತುವಿಗೆ ಮರುಜೀವ ನೀಡುವುದು ಇದೇ ಮೊದಲೇನಲ್ಲ. ಅವರು ತಮ್ಮ ಹಿಂದಿನ ಪೋಸ್ಟ್‌ನಲ್ಲಿ ವಿಂಟೇಜ್ ಶೈಲಿಯ 90 ರ ದಶಕದ ದೂರವಾಣಿಯನ್ನು ಆಕರ್ಷಕ ಟೇಬಲ್ ದೀಪವಾಗಿ ಪರಿವರ್ತನೆ ಮಾಡಿದ್ದರು.