ನೋಯ್ಡಾ: ಡೇಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು 15 ತಿಂಗಳ ಮಗುವನ್ನು ಥಳಿಸಿ ಕಚ್ಚಿದ ಆರೋಪದ ಮೇಲೆ ಬಂಧಿಸಲಾಗಿದೆ. ಬ್ಲಿಪ್ಪಿ ಡೇಕೇರ್‌ನಲ್ಲಿ ನಡೆದ ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲು ಭಾರೀ ವೈರಲ್(Viral Video) ಆಗುತ್ತಿದೆ. ವಿಡಿಯೊದಲ್ಲಿ, ಮಹಿಳೆ ಮಗುವನ್ನು ಹಿಡಿದುಕೊಂಡು ಓಡಾಡುವುದನ್ನು ನೋಡಬಹುದು. ಆಕೆ ಮಗುವನ್ನು ಎರಡರಿಂದ ಮೂರು ಬಾರಿ ನೆಲದ ಮೇಲೆ ಬೀಳಿಸಿದ್ದಾಳೆ. ಮಗುವಿನ ಬೆನ್ನಿಗೂ ಹೊಡೆದು ರಾಕ್ಷಸಿತನ ಮೆರೆದಿದ್ದಾಳೆ. ಅಷ್ಟೇ ಅಲ್ಲ ಆಕೆ, ಮಗುವಿನ ಕಾಲನ್ನು ಕಚ್ಚಿ ನೋಯಿಸಿದ್ದಾಳೆ. ಮಗುವಿನ ದೇಹದಲ್ಲಿ ಕಚ್ಚಿದ ಹಾಗೂ ಇನ್ನಿತರೆ ಗಾಯದ ಗುರುತುಗಳು ಕಂಡುಬಂದಿವೆ.
ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಸೆಕ್ಟರ್ 142 ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ದೂರು ದಾಖಲಾಗಿದ್ದು, ನಂತರ ಆಕೆಯನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಡೇಕೇರ್ ಕೇಂದ್ರದ ಮುಖ್ಯಸ್ಥರನ್ನೂ ವಶಕ್ಕೆ ಪಡೆಯಲಾಗಿದೆ.
ವಿಡಿಯೊ ವೀಕ್ಷಿಸಿ:
Shocking! At "Blippi" Daycare in Paras Tierea, Sector 137 Noida, a nanny brutally assaulted a 15-month-old—beating, smashing head on wall, dropping on floor & even biting.
— Greater Noida West (@GreaterNoidaW) August 11, 2025
CCTV exposed the crime; nanny arrested. pic.twitter.com/46WNU45zEK
16 ವರ್ಷದ ಬಾಲಕಿ ಮೇಲೆ ತಂದೆಯಿಂದಲೇ ಅತ್ಯಾಚಾರ
ಪ್ರತ್ಯೇಕ ಘಟನೆಯೊಂದರಲ್ಲಿ, 16 ವರ್ಷದ ಬಾಲಕಿ ಮೇಲೆ ತಂದೆಯೇ ಅತ್ಯಾಚಾರ ಎಸಗಿ, ಗರ್ಭಿಣಿಯನ್ನಾಗಿಸಿದ ಆರೋಪ ಕೇಳಿಬಂದಿದ್ದು, ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ. ನಂತರ ನವಜಾತ ಶಿಶುವನ್ನು ಪೊದೆಯಲ್ಲಿ ಬಿಟ್ಟು ಹೋಗಲಾಗಿದೆ. ಮಹೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯ ಪೊದೆಗಳಲ್ಲಿ ಇರುವೆ ಕಡಿತದಿಂದ ಸುತ್ತುವರಿದ ನವಜಾತ ಶಿಶು ಪತ್ತೆಯಾಗಿತ್ತು. ಆ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಈ ಸುದ್ದಿಯನ್ನೂ ಓದಿ: Allu Arjun: ಏರ್‌ಪೋರ್ಟ್‌ನಲ್ಲಿ ಮಾಸ್ಕ್ ತೆಗೆಯಲು ಒಪ್ಪದ ನಟ ಅಲ್ಲು ಅರ್ಜುನ್; ವಿಡಿಯೊ ವೈರಲ್
ನವಜಾತ ಶಿಶುವನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು ನಂತರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 93 (ಹನ್ನೆರಡು ವರ್ಷದೊಳಗಿನ ಮಗುವನ್ನು ತ್ಯಜಿಸುವುದು) ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ
ಪೊಲೀಸ್ ವರಿಷ್ಠಾಧಿಕಾರಿ ಧರ್ಮರಾಜ್ ಮೀನಾ ಮಾತನಾಡಿ, ತನಿಖೆಯಲ್ಲಿ ಮಗುವಿನ ತಾಯಿ 16 ವರ್ಷದ ಬಾಲಕಿ ಎಂದು ತಿಳಿದುಬಂದಿದೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ತನ್ನ ತಂದೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದರಿಂದ ತಾನು ಗರ್ಭಿಣಿಯಾದೆ ಎಂದು ಹದಿಹರೆಯದ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಆರೋಪಿಯು ಬಾಲಕಿಯನ್ನು ಮನೆಯಲ್ಲೇ ಹೆರಿಗೆ ಮಾಡಿಸಿದನೆಂದು ಹೇಳಲಾಗಿದ್ದು, ಆಕೆ ಪ್ರಜ್ಞೆ ತಪ್ಪಿದಾಗ, ಮಗುವನ್ನು ಪೊದೆಯಲ್ಲಿ ಎಸೆದು ಪರಾರಿಯಾಗಿದ್ದಾನೆ.