ನವದೆಹಲಿ: ಕೃಷ್ಣನ ವಿಗ್ರಹದಿಂದ ಹೃದಯ ಬಡಿತ ಕೇಳುತ್ತಿರುವುದಾಗಿ ಭಕ್ತನೊಬ್ಬ ಹೇಳಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿರುವ ವಿಡಿಯೊ ನೋಡಿದ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ದೇವಾಲಯದೊಳಗೆ ವೈದ್ಯರೊಬ್ಬರು ದೇವರ ವಿಗ್ರಹದಲ್ಲಿ ಹೃದಯ ಬಡಿತವನ್ನು ಪರಿಶೀಲಿಸುತ್ತಿರುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ(Viral Video). ಇದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ.
ವರದಿಗಳ ಪ್ರಕಾರ, ಧಾರ್ಮಿಕ ಆಚರಣೆಯ ಸಮಯದಲ್ಲಿ ಹಾಜರಿದ್ದ ಭಕ್ತರೊಬ್ಬರು ವಿಗ್ರಹದಿಂದ ಹೃದಯ ಬಡಿತ ಕೇಳಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ದೇವಾಲಯದ ಶ್ರೀಕೃಷ್ಣನ ಪ್ರಾಣ ಪ್ರತಿಷ್ಠೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬರು ಹೃದಯ ಬಡಿತ ಕೇಳಿಸುತ್ತಿರುವುದಾಗಿ ಹೇಳಿದ್ದಾರೆ. ಇದು ನಿಜವೇ ಎಂದು ಪರಿಶೀಲಿಸಲು ವೈದ್ಯರನ್ನು ಕರೆಯಲಾಯಿತು ಎಂದು ವರದಿಯಾಗಿದೆ.
ವಿಡಿಯೊದಲ್ಲಿ, ವೈದ್ಯರೊಬ್ಬರು ಸ್ಟೆತಸ್ಕೋಪ್ ಹಿಡಿದು ವಿಗ್ರಹದ ಎದೆಬಡಿತ ಪರಿಶೀಲಿಸುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ, ಇನ್ನೊಬ್ಬ ವ್ಯಕ್ತಿ ಅದೇ ಕ್ರಿಯೆಯನ್ನು ಪುನರಾವರ್ತಿಸಲು ಮುಂದೆ ಬರುತ್ತಾನೆ. ಈ ಘಟನೆ ನಿಖರವಾಗಿ ಎಲ್ಲಿ ನಡೆಯಿತು ಅಥವಾ ವಿಡಿಯೊವನ್ನು ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂಬುದು ಮಾತ್ರ ತಿಳಿದಿಲ್ಲ.
ವಿಡಿಯೊ ವೀಕ್ಷಿಸಿ:
ಈ ದೃಶ್ಯಾವಳಿಯ ವಿಡಿಯೊ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಗಮನ ಸೆಳೆಯುತ್ತಿದ್ದು, ಭಾರಿ ವೈರಲ್ ಆಗಿದೆ. ವಿಡಿಯೊ ನೋಡಿದ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಆಘಾತಕ್ಕೊಳಗಾಗಿದ್ದರೆ, ಇನ್ನು ಕೆಲವರು ವ್ಯಂಗ್ಯ ಅಥವಾ ತಮಾಷೆಯ ಹೇಳಿಕೆಗಳನ್ನು ನೀಡಿದ್ದಾರೆ.
ಒಬ್ಬ ಬಳಕೆದಾರರು, ವೈದ್ಯರು ಭಕ್ತನನ್ನೂ ಪರೀಕ್ಷಿಸಿದ್ದಾರೆಂದು ಭಾವಿಸುತ್ತೇನೆ ಎಂದು ತಮಾಷೆ ಮಾಡಿದರೆ, ಇನ್ನೊಬ್ಬರು, ಪ್ರಸಾದದ ರೂಪದಲ್ಲಿ ಏನನ್ನಾದರೂ ನೀಡುತ್ತಾರೆಯೇ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಮ್ಮ ದೇಶವಾಸಿಗಳಿಗೆ ಏನಾಗುತ್ತಿದೆ. ನಮ್ಮನ್ನು ಅಷ್ಟೊಂದು ಬ್ರೈನ್‌ವಾಶ್ ಮಾಡಲಾಗಿದೆಯೇ? ಧರ್ಮದ ಹೆಸರಿನಲ್ಲಿ ಮೂರ್ಖತನ, ಅದು ಯಾವುದೇ ಧರ್ಮವಾಗಿರಬಹುದು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಮೊಬೈಲ್ ಕದ್ದಿದ್ದಕ್ಕೆ ಧರ್ಮದೇಟು- ಚಲಿಸುತ್ತಿದ್ದ ರೈಲಿನಿಂದ ಹಾರಿದ ಕಳ್ಳ; ವಿಡಿಯೊ ಫುಲ್ ವೈರಲ್
ಜ್ವರ ಅಥವಾ ಸ್ವಲ್ಪ ಕೆಮ್ಮು ಇದ್ದರೆ, ದಯವಿಟ್ಟು ಅದನ್ನೂ ಪರೀಕ್ಷಿಸಿ, ವೈದ್ಯರೇ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರೊಬ್ಬರು ಟೀಕೆ ವ್ಯಕ್ತಪಡಿಸಿದ್ದಾರೆ. ವೈದ್ಯರು ಏನು ಹೇಳಿದರು, ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಎಂದೂ ಪ್ರಶ್ನಿಸಿದರು. ಇನ್ನೂ ಕೆಲವರು ಭಾರತವು ಆರಂಭಿಕರಿಗಾಗಿ ಅಲ್ಲ ಎಂದು ಲೇವಡಿ ಮಾಡಿದ್ದಾರೆ.
2021 ರಲ್ಲಿ ಆಗ್ರಾದ ಜಿಲ್ಲಾ ಆಸ್ಪತ್ರೆಯಲ್ಲಿ ಇದೇ ರೀತಿಯ ದೃಶ್ಯ ಕಂಡುಬಂದಿತು. ಅರ್ಚಕರೊಬ್ಬರು ತೋಳು ಮುರಿದಿದ್ದ ಶ್ರೀಕೃಷ್ಣನ ವಿಗ್ರಹವನ್ನು ಹೊತ್ತುಕೊಂಡು ಅಳುತ್ತಾ ಆಸ್ಪತ್ರೆಗೆ ಬಂದಿದ್ದರು. ಇದು ಆಸ್ಪತ್ರೆ ಸಿಬ್ಬಂದಿಯನ್ನು ಆಶ್ಚರ್ಯಗೊಳಿಸಿತು. ಆಸ್ಪತ್ರೆಯ ವಿಗ್ರಹಕ್ಕೆ ಚಿಕಿತ್ಸೆ ನೀಡಬೇಕೆಂದು ಅರ್ಚಕರು ವಿನಂತಿಸಿದರು. ಕೊನೆಗೆ ಸಿಬ್ಬಂದಿ ಶ್ರೀ ಕೃಷ್ಣನ ವಿಗ್ರಹದ ತೋಳಿಗೆ ಬ್ಯಾಂಡೇಜ್ ಹಾಕಿದರು.