ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Domestic Dispute: ಅಳಿಯನನ್ನು ಮರಕ್ಕೆ ಕಟ್ಟಿ ಥಳಿಸಿದ ಅತ್ತೆ ಮಾವ; ಕಾರಣವೇನು?

ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಜಲಂತ ಬಲಿಯಾರ ಸಿಂಗ್ ಎಂಬಾತನ ಮೇಲೆ ಪತ್ನಿಯ ಪೋಷಕರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಒಂದು ವರ್ಷಗಳಿಂದ ಪತ್ನಿಯಿಂದ ದೂರವಿದ್ದ ಜಲಂತ ಬಲಿಯಾರ ಸಿಂಗ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ.

ಭುವನೇಶ್ವರ: ಅಳಿಯನನ್ನು ಮರಕ್ಕೆ ಕಟ್ಟಿ ಥಳಿಸಿ ರಾತ್ರಿ ಪೂರ್ತಿ ಹೊರಗೆ ಬಿಟ್ಟಿರುವ ಘಟನೆ ಒಡಿಶಾದ (Odisha) ಗಜಪತಿ (Gajapati) ಜಿಲ್ಲೆಯಲ್ಲಿ ನಡೆದಿದೆ. ಕೌಟುಂಬಿಕ ಕಲಹದ (Domestic Dispute) ಕಾರಣದಿಂದ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಕಾಯುತ್ತಿದ್ದ ವ್ಯಕ್ತಿಗೆ ಅತ್ತೆ ಮಾವನೇ ಥಳಿಸಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಇಡೀ ರಾತ್ರಿ ಆತನನ್ನು ಕಂಬಕ್ಕೆ ಕಟ್ಟಿ ಹಾಕಿರುವುದಾಗಿ ಹೇಳಲಾಗಿದೆ. ಜಲಂತ ಬಲಿಯಾರ ಸಿಂಗ್ ಎಂಬ ವ್ಯಕ್ತಿ ಹಲ್ಲೆಗೆ ಒಳಗಾಗಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜಲಂತ ಬಲಿಯಾರ ಸಿಂಗ್ ತನ್ನ ಪತ್ನಿ ಸುಭದ್ರಾ ಮಾಲ್ಬಿಸೋಯೆಗೆ ಥಳಿಸಿದ್ದ. ಈ ಕುರಿತು ಗ್ರಾಮ ಪಂಚಾಯತ್ ಜಲಂತ ಬಲಿಯಾರ ಸಿಂಗ್‌ನನ್ನು ಪ್ರಶ್ನಿಸಿದೆ. ಆತನಿಗೆ ನೊಟೀಸ್ ನೀಡಿ ಪತ್ನಿ ಕೆಲವು ತಿಂಗಳ ಕಾಲ ತನ್ನ ಹೆತ್ತವರ ಮನೆಯಲ್ಲಿಯೇ ಇರಬೇಕೆಂದು ತೀರ್ಪು ನೀಡಿತ್ತು. ಪತ್ನಿಯಿಂದ ಸುಮಾರು ಒಂದು ವರ್ಷಗಳ ಕಾಲ ದೂರವಿದ್ದ ಬಲಿಯಾರ ಸಿಂಗ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾನೆ ಎನ್ನಲಾಗಿದೆ.

ಆಗಸ್ಟ್‌ 7ರ ರಾತ್ರಿ ಆತ ದಿನಸಿ ವಸ್ತುಗಳನ್ನು ಖರೀದಿಸಲು ಪತ್ನಿಯ ಹಳ್ಳಿಗೆ ಹೋಗಿದ್ದಾನೆ. ಅಲ್ಲಿ ಅತ್ತೆಯ ಮನೆಯವರು ಆತನಿಗೆ ಎದುರಾಗಿದ್ದು, ಎರಡೂ ಕಡೆಯವರ ನಡುವೆ ತೀವ್ರ ವಾಗ್ವಾದ ಉಂಟಾಗಿದೆ. ಈ ನಡುವೆ ಆತನ ಅತ್ತೆ ಅಳಿಯನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ರಾತ್ರಿ ಪೂರ್ತಿ ಆತ ಕಂಬಕ್ಕೆ ಕಟ್ಟಿಯೇ ಇದ್ದ.

ಇದನ್ನೂ ಓದಿ: Actor Darshan: ದರ್ಶನ್‌ ಜೈಲಿಗೆ, ಪತ್ನಿ ವಿಜಯಲಕ್ಷ್ಮಿಯಿಂದ ಒಡೆದ ಹೃದಯದ ಪೋಸ್ಟ್‌

ಮರುದಿನ ಬೆಳಗ್ಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಿಡುಗಡೆ ಮಾಡಿದರು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author