ದೆಹಲಿ: ಮಕ್ಕಳು ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗಿರುವ ವಿಡಿಯೊವೊಂದು (Viral Video) ನೆಟ್ಟಿಗರ ಹೃದಯಗೆದ್ದಿದೆ. ವಿಡಿಯೊದಲ್ಲಿ, ಪುಟ್ಟ ಹುಡುಗಿಯೊಬ್ಬಳು ಆನೆಗೆ (Elephant) ನಮಸ್ಕರಿಸುವುದನ್ನು ತೋರಿಸಲಾಗಿದೆ. ಪ್ರತಿಯಾಗಿ, ದೈತ್ಯ ಪ್ರಾಣಿಯು ತನ್ನ ಸೊಂಡಿಲಿನಿಂದ ಅವಳಿಗೆ ಆಶೀರ್ವದಿಸುತ್ತದೆ.
ವಿಡಿಯೊವು, ಬಾಲಕಿಯು ಆನೆಯ ಕಡೆಗೆ ನಡೆದು ಬರುವುದರೊಂದಿಗೆ ಪ್ರಾರಂಭವಾಗುತ್ತದೆ. ಅವಳು ಆನೆ ಮಾವುತನಿಗೆ ಹಣವನ್ನು ನೀಡಿ, ಆನೆಯತ್ತ ನೋಡಿ ತಲೆ ಬಾಗಿಸಿದ್ದಾಳೆ. ಸೌಮ್ಯ ಪ್ರಾಣಿಯಾದ ಆನೆಯು ತನ್ನ ಸೊಂಡಿಲನ್ನು ಎತ್ತಿ ಅವಳಿಗೆ ಆಶೀರ್ವದಿಸಿದೆ. ಆರಂಭದಲ್ಲಿ ಆಶ್ಚರ್ಯಚಕಿತಳಾದ ಬಾಲಕಿ, ನಂತರ ಒಂದು ಹೆಜ್ಜೆ ಮುಂದಿಡುತ್ತಾಳೆ. ಆನೆ ತನ್ನ ಸೊಂಡಿಲನ್ನು ತಲೆಯಾಡಿಸಿ ಬಾಲೆಯನ್ನು ಆಶೀರ್ವದಿಸುತ್ತದೆ.
ವಿಡಿಯೊ ವೀಕ್ಷಿಸಿ:
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ, ಬಳಕೆದಾರರು ಕಾಮೆಂಟ್‌ಗಳ ವಿಭಾಗದಲ್ಲಿ ಸಿಹಿ ಸಂದೇಶಗಳೊಂದಿಗೆ ಪ್ರತಿಕ್ರಿಯಿಸಿದರು. ಹಲವಾರು ಬಳಕೆದಾರರು ಹೃದಯದ ಎಮೋಜಿಗಳನ್ನು ಹಾಕಿ, ಬಹಳ ಸುಂದರ ದೃಶ್ಯ ಎಂದು ಉದ್ಘರಿಸಿದ್ದಾರೆ. ಕೆಲವು ಕಾಮೆಂಟ್‌ಗಳು ಮಗುವಿನ ಪೋಷಕರು ಮತ್ತು ಆಕೆಯ ಪಾಲನೆಯನ್ನು ಹೊಗಳಿವೆ.
ವೈರಲ್ ಆಗಿದ್ದ ಆನೆಮರಿಯ ವಿಡಿಯೊ
ಇದಕ್ಕೂ ಮೊದಲು, ಮಡಿಸಬಹುದಾದ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುವ ಮರಿ ಆನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಕುತೂಹಲಕಾರಿ ಮರಿ ಆನೆಯೊಂದು ಕುರ್ಚಿಯ ಬಳಿಗೆ ಬಂದು ಅದನ್ನು ಆಸಕ್ತಿಯಿಂದ ನೋಡಿದೆ. ಆ ಪುಟ್ಟ ಆನೆ ಮನುಷ್ಯನಂತೆ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದೆ. ಅದು ವಿಚಿತ್ರವಾಗಿ ತನ್ನ ಕಾಲುಗಳು ಮತ್ತು ದೊಡ್ಡ ದೇಹವನ್ನು ಕುರ್ಚಿಯಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತದೆ. ಆದರೆ, ಕುಳಿತುಕೊಳ್ಳಲಾಗದೆ ಅದು ಪರದಾಡಿದೆ.
ಇದನ್ನೂ ಓದಿ: Viral Video: ಗ್ರೇಟ್ ಎಸ್ಕೇಪ್ ಅಂದ್ರೆ ಇದೇ; ಹೋರ್ಡಿಂಗ್ ಕುಸಿದು ಆಟೋ ಚಾಲಕ ಕೂದಲೆಳೆ ಅಂತರದಲ್ಲಿ ಪಾರು: ವಿಡಿಯೊ ನೋಡಿ
ಹಲವಾರು ಪ್ರಯತ್ನಗಳ ನಂತರವೂ ಕುರ್ಚಿಯಲ್ಲಿ ಕುಳಿತುಕೊಳ್ಳಲಾಗದೆ ಮರಿಯಾನೆಯು ನಿರಾಶೆಗೊಂಡು ಕುರ್ಚಿಯನ್ನು ಒದ್ದು ಅಲ್ಲಿಂದ ಹೊರಟುಹೋಯಿತು. ವಿಫಲ ಪ್ರಯತ್ನದ ಹೊರತಾಗಿಯೂ, ಆನೆಯ ದೃಢನಿಶ್ಚಯ ಮತ್ತು ವಿಚಿತ್ರವಾದ ಹೆಜ್ಜೆಗಳು ನೆಟ್ಟಿಗರನ್ನು ರಂಜಿಸಿದವು. ಅವರು ಆನೆಮರಿಯ ವರ್ತನೆಗಳಿಂದ ಮೋಡಿಗೊಳ್ಳದೆ ಇರಲು ಸಾಧ್ಯವಾಗಲಿಲ್ಲ. ಆ ಮುದ್ದಾದ ಕ್ಷಣವು ವ್ಯಾಪಕ ನಗು ಮತ್ತು ಪ್ರೀತಿಯನ್ನು ಹುಟ್ಟುಹಾಕಿತು. ಸಾಮಾಜಿಕ ಮಾಧ್ಯಮ ಬಳಕೆದಾರರು ಪುಟ್ಟ ಆನೆಯ ಮುದ್ದಾದ ಪ್ರತಿಕ್ರಿಯೆಯನ್ನು ಮೆಚ್ಚಿಕೊಂಡರು.