ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral video: ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ಗೋಡೆ; ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಬೈಕ್‌ ಸವಾರ

ಉತ್ತರ ಪ್ರದೇಶದ ಅಮ್ರೋಹಾ ನಗರದ ಮೊಹಲ್ಲಾ ಬಟ್ವಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಶಿಥಿಲಗೊಂಡ ಮನೆಯ ಗೋಡೆಯೊಂದು ಇದ್ದಕ್ಕಿದ್ದಂತೆ ಕುಸಿದು ಬೈಕ್‌ನಲ್ಲಿ ಹೋಗುತ್ತಿದ್ದ ಆಕಿಫ್ ಮನ್ಸೂರಿ ಎಂಬ ಯುವಕನ ಮೇಲೆ ಬಿದ್ದಿದೆ. ಈ ದುರ್ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಲಖನೌ: ಉತ್ತರ ಪ್ರದೇಶದ (Uttar Pradesh) ಅಮ್ರೋಹಾ (Amroha) ನಗರದ ಮೊಹಲ್ಲಾ ಬಟ್ವಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಶಿಥಿಲಗೊಂಡ ಮನೆಯ ಗೋಡೆಯೊಂದು ಇದ್ದಕ್ಕಿದ್ದಂತೆ ಕುಸಿದು, ಬೈಕ್‌ನಲ್ಲಿ (Bike) ಹೋಗುತ್ತಿದ್ದ ಆಕಿಫ್ ಮನ್ಸೂರಿ (Akif Mansoori) ಎಂಬ ಯುವಕನ ಮೇಲೆ ಬಿದ್ದಿದೆ. ಈ ದುರ್ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಕಿಫ್ ಮನ್ಸೂರಿ ಒಂದು ಕಿರಿದಾದ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿರುವಾಗ, ಇದ್ದಕ್ಕಿದ್ದಂತೆ ಮನೆಯಿಂದ ದೊಡ್ಡ ಪ್ರಮಾಣದ ಗೋಡೆ ಆತನ ಮೇಲೆ ಕುಸಿಯುವುದು ವಿಡಿಯೊದಲ್ಲಿ ಕಂಡುಬಂದಿದೆ. ಗೋಡೆ ಬಿದ್ದ ಪರಿಣಾಮ ಕಂದು ಬಣ್ಣದ ಧೂಳಿನ ಎಲ್ಲೆಡೆ ಆವರಿಸಿದೆ. ಶಬ್ದ ಕೇಳಿ ಗಾಬರಿಯಿಂದ ಓಡಿ ಬಂದ ಸ್ಥಳೀಯರು ಯುವಕನನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಆಕಿಫ್‌ಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಬೈಕ್ ಕೂಡ ಹಾನಿಗೊಳಗಾಗಿದೆ.



ಕುಸಿದ ಮನೆ ಸ್ಥಳೀಯ ನಿವಾಸಿ ಅಜ್ಹರ್ ಎಂಬುವವರಿಗೆ ಸೇರಿದ್ದು, ಬಹಳ ಸಮಯದಿಂದ ಶಿಥಿಲಗೊಂಡು ಮುಚ್ಚಿರುವ ಸ್ಥಿತಿಯಲ್ಲಿತ್ತು. ಕಳೆದ ಮೂರು ದಿನಗಳಿಂದ ನಿರಂತರ ಮಳೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ 14.9 ಮಿಮೀ ಮಳೆ ದಾಖಲಾಗಿದೆ. ಜೂನ್ 1ರಿಂದ ಆಗಸ್ಟ್ 8ರವರೆಗೆ ರಾಜ್ಯದಲ್ಲಿ 457.2 ಮಿಮೀ ಮಳೆಯಾಗಿದ್ದು, ಇದು ಭಾರತೀಯ ಹವಾಮಾನ ಇಲಾಖೆಯ 416.4 ಮಿಮೀ ಅಂದಾಜಿಗಿಂತ ಶೇ. 10ರಷ್ಟು ಹೆಚ್ಚಾಗಿದೆ.

ಈ ಸುದ್ದಿಯನ್ನು ಓದಿ: LPG Subsidy: ತೈಲ ಕಂಪನಿಗಳ ನಷ್ಟ ಪರಿಹಾರಕ್ಕೆ ಮುಂದಾದ ಕೇಂದ್ರ ಸರ್ಕಾರ; 30,000 ಕೋಟಿ ರೂ. ನೀಡಲು ಅನುಮೋದನೆ

ಈ ಘಟನೆಯಿಂದ ಅಮ್ರೋಹಾದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸ್ಥಳೀಯರು, ಈ ಪ್ರದೇಶದಲ್ಲಿ ಇನ್ನೂ ಹಲವಾರು ಶಿಥಿಲಗೊಂಡ ಮನೆಗಳಿರುವುದಾಗಿ ತಿಳಿಸಿದ್ದಾರೆ. ಇದು ಭವಿಷ್ಯದಲ್ಲಿ ಮತ್ತಷ್ಟು ಅಪಾಯಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.