ಜಬಲ್ಪುರ: ಆಟೋರಿಕ್ಷಾದೊಳಗೆ ಕುದುರೆ ಸಿಲುಕಿಕೊಂಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ. ಅಯ್ಯೋ, ಇದೇನಿದು ಕುದುರೆಯನ್ನು ಆಟೋರಿಕ್ಷಾದೊಳಗೆ ತುಂಬಿಸಿ ಕರೆದುಕೊಂಡು ಹೋಗಲಾಗುತ್ತಿದೆಯೇ ಎಂದು ಗೊಂದಲಕ್ಕೊಳಗಾಗಬೇಡಿ. ಎರಡು ಕುದುರೆಗಳು ಪರಸ್ಪರ ಕಾದಾಟ ಮಾಡಿಕೊಂಡಾಗ ಈ ಘಟನೆ ನಡೆದಿದೆ.
ಇದೀಗ, ಆಟೋರಿಕ್ಷಾದೊಳಗೆ ಕುದುರೆ ಸಿಲುಕಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಈ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಜಬಲ್ಪುರದ ನಗರ್ತ್ ಚೌಕ್‌ನಲ್ಲಿ ಎರಡು ಕುದುರೆಗಳು ಪರಸ್ಪರ ಕಾದಾಟ ಪ್ರಾರಂಭಿಸಿದವು. ಜನರು ಕುದುರೆಗಳನ್ನು ಓಡಿಸಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕಾದಾಟವಾಡುತ್ತ, ಕುದುರೆಗಳು ಶೋ ರೂಂಗೆ ಪ್ರವೇಶಿಸಿದವು, ಈ ಸಮಯದಲ್ಲಿ ಶೋ ರೂಂ ಅನ್ನು ಧ್ವಂಸಗೊಳಿಸಿವೆ.
ಇದಾದ ನಂತರ, ಕುದುರೆಗಳು ಕಾದಾಡುತ್ತಾ ರಸ್ತೆಗೆ ಬಂದವು. ಈ ವೇಳೆ ಪ್ರಯಾಣಿಕರನ್ನು ತುಂಬಿದ್ದ ಇ-ರಿಕ್ಷಾವೊಂದು ರಸ್ತೆಯಲ್ಲಿ ಹಾದುಹೋಗುತ್ತಿತ್ತು. ಅದೇ ಸಮಯದಲ್ಲಿ ರಸ್ತೆಯಲ್ಲಿ ಕಾದಾಟ ನಡೆಸುತ್ತಿದ್ದ ಕುದುರೆ ನೇರವಾಗಿ ಆಟೋರಿಕ್ಷಾದೊಳಗೆ ನುಗ್ಗಿದೆ.
ವಿಡಿಯೊ ಇಲ್ಲಿದೆ:
📍 जबलपुर
— ETV Bharat Madhya Pradesh (@ETVBharatMP) July 23, 2025
🔹दो घोड़ों की आपसी लड़ाई में हुई हैरतअंगेज घटना
🔹जबलपुर में ऑटो में घुसा घोड़ा
🔹बड़ी मुश्किल से घोड़े को ऑटो से निकाला गया
🔹घटना में ड्राइवर सहित 2 लोग घायल#JabalpurHorseFight #JabalpurNews #Jabalpur #ViralVideo #mpnews pic.twitter.com/PfDmB3napR
ಕುದುರೆ ಇ-ರಿಕ್ಷಾದೊಳಗೆ ಪ್ರವೇಶಿಸಿದ ಕಾರಣ, ಚಾಲಕ ಸೇರಿದಂತೆ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಹಳ ಪ್ರಯತ್ನದ ನಂತರ, ಜನರು ಕುದುರೆಯನ್ನು ಆಟೋದಿಂದ ಹೊರತರುವಲ್ಲಿ ಯಶಸ್ವಿಯಾದರು.ಇನ್ನು ಈ ಘಟನೆಯ ನಂತರ ಬೆಚ್ಚಿಬಿದ್ದ ಸ್ಥಳೀಯರು, ಪ್ರಾಣಿಗಳನ್ನು ಈ ರೀತಿ ಮುಕ್ತವಾಗಿ ತಿರುಗಾಡಲು ಬಿಡಬಾರದು ಎಂದು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ. ಅವುಗಳನ್ನು ಸುತ್ತಾಡಲು ಬಿಡುವುದರಿಂದ ಅಪಘಾತಗಳ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಜನರು ತೊಂದರೆ ಅನುಭವಿಸುವಂತಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಪತಿಗೆ ಮೋಸ ಮಾಡಿ ಸಿಕ್ಕಿಬಿದ್ದ ಪತ್ನಿ; ಹರಿದ ಅಂಗಿಯೊಂದಿಗೆ ಮಹಿಳೆಯ ಹಿಂದೆ ನಿಂತ ಪ್ರೇಮಿ, ವಿಡಿಯೊ ವೈರಲ್
ಇನ್ನು ಸಾಮಾಜಿಕ ಮಾಧ್ಯಮದಲ್ಲಿ ಕುದುರೆ ಆಟೊದೊಳಗೆ ಸೇರಿಕೊಂಡಿರುವ ದೃಶ್ಯ ನೋಡಿದ ನೆಟ್ಟಿಗರು, ಪ್ರಾಣಿಯ ಬಗ್ಗೆ ಮರುಕಪಟ್ಟಿದ್ದಾರೆ. ಯಾರಾದರೂ ಕುದುರೆಯನ್ನು ಸುರಕ್ಷಿತವಾಗಿ ಕಾಪಾಡಿ ಎಂದು ಮನವಿ ಮಾಡಿದ್ದಾರೆ.