ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನಾನು ನನ್ನ ಸಮಾಧಿ ತೋಡುತ್ತೇನೆ; ಇಸ್ರೇಲ್ ಒತ್ತೆಯಾಳಿನ ವಿಡಿಯೊ ಬಿಡುಗಡೆ ಮಾಡಿದ ಹಮಾಸ್

ನಾನು ಈಗ ನಿರ್ಮಿಸುತ್ತಿರುವುದು ನನ್ನ ಸ್ವಂತ ಸಮಾಧಿ. ಪ್ರತಿದಿನ ನನ್ನ ದೇಹವು ದುರ್ಬಲವಾಗುತ್ತಿದೆ. ನಾನು ನೇರವಾಗಿ ನನ್ನ ಸಮಾಧಿಯತ್ತ ಸಾಗುತ್ತಿದ್ದೇನೆ. ನಾನು ಬಿಡುಗಡೆಯಾಗಿ ಕುಟುಂಬದೊಂದಿಗೆ ನನ್ನ ಹಾಸಿಗೆಯಲ್ಲಿ ಮಲಗುವ ಸಮಯ ಮೀರಿದೆ... ತನ್ನ ಒತ್ತೆಯಾಳಾಗಿರುವ ಇಸ್ರೇಲ್‌ನ ವ್ಯಕ್ತಿಯೊಬ್ಬನ ವಿಡಿಯೊವನ್ನು ಹಮಾಸ್ ಬಿಡುಗಡೆ ಮಾಡಿದ್ದು ಭಾರಿ ಆಕ್ರೋಶವನ್ನು ಉಂಟು ಮಾಡಿದೆ.

ಗಾಜಾ: ನನ್ನ ದೇಹ ದುರ್ಬಲವಾಗುತ್ತಿದೆ...ನಾನು ನೇರವಾಗಿ ನನ್ನ ಸಮಾಧಿಗೆ (own grave) ನಡೆಯುತ್ತಿದ್ದೇನೆ...ನಾನು ಇಲ್ಲಿಂದ ಬಿಡುಗಡೆಯಾಗಿ ನನ್ನ ಕುಟುಂಬವನ್ನು ಸೇರುತ್ತೇನೆ ಎನ್ನುವ ವಿಶ್ವಾಸವಿಲ್ಲ... ಹೀಗೆ ಇಸ್ರೇಲ್ ವ್ಯಕ್ತಿಯೊಬ್ಬ (Israeli hostage) ಹೇಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಪ್ಯಾಲೆಸ್ತೀನ್‌ ಗುಂಪು (Palestinian group) ಹಮಾಸ್ (Hamas) ಬಿಡುಗಡೆ ಮಾಡಿರುವ ಈ ವಿಡಿಯೊದಲ್ಲಿ ಇಸ್ರೇಲ್ ಒತ್ತೆಯಾಳು ಬಂಧಿಯಾಗಿರುವ ಭೂಗತ ಸುರಂಗದಲ್ಲಿ ತನ್ನ ಸಮಾಧಿಯನ್ನು ಅಗೆಯುತ್ತಿರುವುದನ್ನು ಕಾಣಬಹುದು.

48 ಗಂಟೆಗಳ ಒಳಗೆ 24 ವರ್ಷದ ಎವ್ಯಾಟರ್ ಡೇವಿಡ್ ಅವರ ಎರಡನೇ ವಿಡಿಯೊವನ್ನು ಹಮಾಸ್ ಬಿಡುಗಡೆ ಮಾಡಿದೆ. ಇದರಲ್ಲಿ ಅಸ್ಥಿಪಂಜರದಂತೆ ಕಾಣುವ ಮತ್ತು ಮಾತನಾಡಲು ಸಾಧ್ಯವಾಗದ ಡೇವಿಡ್ ಭೂಗತ ಸುರಂಗದೊಳಗೆ ನಿಧಾನವಾಗಿ ಕೆಮ್ಯಾರಾದ ಮುಂದೆ ಮಾತನಾಡುತ್ತಾ, ತಮಗೆ ಎದುರಾಗಿರುವ ಅಗ್ನಿಪರೀಕ್ಷೆಯ ಬಗ್ಗೆ ಹೇಳಿಕೊಂಡಿದ್ದಾರೆ.



ಡೇವಿಡ್ ಹೇಳಿರುವುದೇನು?

ಹೀಬ್ರೂ ಭಾಷೆಯಲ್ಲಿ ಮಾತನಾಡಿರುವ ಡೇವಿಡ್, ನಾನು ಈಗ ನಿರ್ಮಿಸುತ್ತಿರುವುದು ನನ್ನ ಸ್ವಂತ ಸಮಾಧಿ. ಪ್ರತಿದಿನ ನನ್ನ ದೇಹವು ದುರ್ಬಲವಾಗುತ್ತಿದೆ. ನಾನು ನೇರವಾಗಿ ನನ್ನ ಸಮಾಧಿಯತ್ತ ಸಾಗುತ್ತಿದ್ದೇನೆ. ನಾನು ಬಿಡುಗಡೆಯಾಗಿ ಕುಟುಂಬದೊಂದಿಗೆ ನನ್ನ ಹಾಸಿಗೆಯಲ್ಲಿ ಮಲಗುವ ಸಮಯ ಮೀರಿದೆ... ಹೀಗೆ ತಮ್ಮ ಮಾತನ್ನು ಮುಗಿಸುತ್ತಿದ್ದಂತೆ ಡೇವಿಡ್ ದುಃಖಿತರಾಗಿದ್ದಾರೆ.

ಎವ್ಯಾಟರ್ ಡೇವಿಡ್ ಅವರ ಪೋಷಕರು ಈ ವಿಡಿಯೊವನ್ನು ನೋಡಿ ಪ್ರಚಾರಕ್ಕಾಗಿ ನಮ್ಮ ಮಗನನ್ನು ಉದ್ದೇಶಪೂರ್ವಕವಾಗಿ ಹಸಿವಿನಿಂದ ಸಾಯಿಸಿರುವುದು ಜಗತ್ತು ಕಂಡ ಅತ್ಯಂತ ಭಯಾನಕ ಕೃತ್ಯಗಳಲ್ಲಿ ಒಂದು. ಹಮಾಸ್‌ನ ಪ್ರಚಾರಕ್ಕಾಗಿ ಅವನನ್ನು ಹಸಿವಿನಿಂದ ಸಾಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.

2023ರ ಅಕ್ಟೋಬರ್ 7ರಂದು ಹವಾಸ್‌ ಇಸ್ರೇಲ್‌ ಮೇಲೆ ದಾಳಿ ನಡೆಸಿ 1,219 ಜನರನ್ನು ಹತ್ಯೆ ಮಾಡಿತ್ತು. ಈ ದಾಳಿಯ ವೇಳೆ ಹಮಾಸ್ ಮತ್ತು ಪ್ಯಾಲೆಸ್ತೀನ್‌ ತಂಡಗಳು ಗಾಜಾದಲ್ಲಿ ಬಂಧಿಸಿರುವ 49 ಒತ್ತೆಯಾಳುಗಳಲ್ಲಿ ಡೇವಿಡ್ ಕೂಡ ಒಬ್ಬರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಗಾಜಾದ ಮೇಲೆ ವಿನಾಶಕಾರಿ ದಾಳಿಯನ್ನು ಪ್ರಾರಂಭಿಸಿತ್ತು. ಇದರ ಪರಿಣಾಮ 60,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಈ ವಿಡಿಯೊ ಬಿಡುಗಡೆಯಾದ ಅನಂತರ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಡೇವಿಡ್ ಅವರ ಕುಟುಂಬದೊಂದಿಗೆ ಮಾತನಾಡಿ ತಮ್ಮ ಆಘಾತವನ್ನು ವ್ಯಕ್ತಪಡಿಸಿದರು.

ಎಲ್ಲ ಒತ್ತೆಯಾಳುಗಳ ಬಿಡುಗಡೆಗೆ ಸರ್ಕಾರದ ಪ್ರಯತ್ನ ನಿರಂತರವಾಗಿ ಮುಂದುವರಿದಿವೆ ಎಂದು ಅವರು ಹೇಳಿದ್ದು, ಹಮಾಸ್ ನಮ್ಮ ಒತ್ತೆಯಾಳುಗಳನ್ನು ಉದ್ದೇಶಪೂರ್ವಕವಾಗಿ ಹಸಿವಿನಿಂದ ಸಾಯುಸುತ್ತಿದ್ದು, ಅದನ್ನು ದುಷ್ಟ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ತನ್ನ ಮೌಲಿಕ ಗ್ರಾಹಕರ ಗೌರವಾರ್ಥ ಮಿಆ ಬೈ ತನಿಷ್ಕ್‌ ನಿಂದ ವಿಶೇಷ ಸಂಜೆ

ಡೇವಿಡ್‌ನ ದೃಶ್ಯಗಳ ಜತೆಗೆ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಇನ್ನೊಂದು ವಿಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಜರ್ಮನ್-ಇಸ್ರೇಲ್ ಪ್ರಜೆ ಒತ್ತೆಯಾಳು ರೋಮ್ ಬ್ರಾಸ್ಲಾವ್ ಸ್ಕಿ (21) ಅವರನ್ನು ತೋರಿಸಿದೆ. ಅವರು ತುಂಬಾ ದುರ್ಬಲರಾಗಿ ಕಾಣುತ್ತಿದ್ದಾರೆ. ಈ ಇಬ್ಬರ ಬಿಡುಗಡೆಗೂ ಸಾರ್ವಜನಿಕ ಒತ್ತಾಯ ಹೆಚ್ಚಾಗಿದೆ. ಇಸ್ರೇಲ್‌ ಮಾತುಕತೆಯನ್ನು ಮುಂದುವರಿಸಿದೆ.

ಈ ಇಬ್ಬರು ಒತ್ತೆಯಾಳುಗಳ ರಕ್ಷಣೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶನಿವಾರ ಸಂಜೆ ಟೆಲ್ ಅವೀವ್‌ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಮೆರವಣಿಎ ನಡೆಸಿದರು.

ವಿದ್ಯಾ ಇರ್ವತ್ತೂರು

View all posts by this author