ಶೋಪಿಯಾನ್: ಭಾರತೀಯ ಸೇನಾ ಅಧಿಕಾರಿಯೊಬ್ಬರು (Indian Army Officer) ಸ್ಥಳೀಯರೊಂದಿಗೆ ಕ್ರಿಕೆಟ್ (cricket) ಆಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೇನಾಧಿಕಾರಿ ಕ್ರಿಕೆಟ್ ಆಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದಂಗೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿರುವ ಭಾರತೀಯ ಸೇನೆಯ ಒಂದು ಘಟಕವಾದ 44 ರಾಷ್ಟ್ರೀಯ ರೈಫಲ್ಸ್ (RR) ಗೆ ಸೇರಿದ ಅಧಿಕಾರಿಯೊಬ್ಬರು ಕ್ರಿಕೆಟ್ ಬ್ಯಾಟ್ ಹಿಡಿದು ಆಡಿದ್ದಾರೆ.
ಈ ವಿಡಿಯೊ ವೈರಲ್ (Viral Video) ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಆಶ್ಚರ್ಯಚಕಿತರಾಗಿ ಪ್ರತಿಕ್ರಿಯಿಸಿದರು. ನಾಗರಿಕರೊಂದಿಗೆ ಸೌಹಾರ್ದತೆಯನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತೀಯ ಸೇನೆಯನ್ನು ಶ್ಲಾಘಿಸಿದರು. “ಕಾಶ್ಮೀರದ ಶೋಪಿಯಾನ್‌ನಲ್ಲಿ ಭಾರತೀಯ ಸೇನೆ ಸ್ಥಳೀಯರೊಂದಿಗೆ ಕ್ರಿಕೆಟ್ ಆಡುತ್ತಿದೆ. ಕಾಶ್ಮೀರದಲ್ಲಿ ಸಾರ್ವಜನಿಕರು ಮತ್ತು ಸೇನೆ ನಡುವಿನ ಬಾಂಧವ್ಯ ಬಲಗೊಳ್ಳುತ್ತಿದೆ! ಈ ದೃಶ್ಯಗಳು ಒಂದು ಕಾಲದಲ್ಲಿ ಊಹಿಸಲೂ ಅಸಾಧ್ಯವಾಗಿತ್ತು. ಆದರೆ ಈಗ ಯುವಕರು ಅರ್ಥಮಾಡಿಕೊಂಡಿದ್ದಾರೆ” ಎಂದು ಎಕ್ಸ್‌ನಲ್ಲಿ ಬಳಕೆದಾರರು ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ವಿಡಿಯೊ ವೀಕ್ಷಿಸಿ:
The Indian Army in Shopian Kashmir, playing cricket with the locals!
— Fatima Dar (@FatimaDar_jk) August 17, 2025
The bonhomie between the Awaam and the Jawan is strengthening in Kashmir! These scenes were once unimaginable but now the youth understand their contribution in empowering them! pic.twitter.com/C5JShjWRLe
ಇದನ್ನೂ ಓದಿ: Viral Video: ನಡುರಸ್ತೆಯಲ್ಲೇ ಕಂಬಕ್ಕೆ ಕಟ್ಟಿ ಯೋಧನ ಮೇಲೆ ಡೆಡ್ಲಿ ಅಟ್ಯಾಕ್! ಆಘಾತಕಾರಿ ವಿಡಿಯೊ ವೈರಲ್
“ಭದ್ರತಾ ಪಡೆಗಳು (ಜೆಕೆಪಿ, ಸಿಆರ್‌ಪಿಎಫ್, ಸೇನೆ, ಬಿಎಸ್‌ಎಫ್), ಮಾಧ್ಯಮ ಮತ್ತು ಇತರೆ ಸಂಸ್ಥೆಗಳ ನಡುವೆ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಪ್ರಾರಂಭಿಸಬೇಕು” ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದೇ ರೀತಿ ಸ್ಥಳೀಯ ಸಮುದಾಯದ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಭಾರತೀಯ ಸೇನೆಯು ಕ್ರೀಡಾಕೂಟಗಳನ್ನು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ಭಾರತೀಯ ಸೇನೆಯು ಬಾರಾಮುಲ್ಲಾದಲ್ಲಿರುವ ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಗೌರವಾರ್ಥವಾಗಿ ಹೆಸರಿಸಲಾದ ಬಿಪಿನ್ ರಾವತ್ ಕ್ರೀಡಾಂಗಣದಲ್ಲಿ ಚಿನಾರ್ ಪ್ರೀಮಿಯರ್ ಲೀಗ್‍ನ 11ನೇ ಆವೃತ್ತಿಯನ್ನು ಪ್ರಾರಂಭಿಸಿತು.
ಅಂದಹಾಗೆ, ಕಾಶ್ಮೀರದಾದ್ಯಂತ 64 ತಂಡಗಳನ್ನು ಒಳಗೊಂಡ ಈ ಲೀಗ್, ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ದೊಡ್ಡ ಲೀಗ್‌ಗಳಿಗೆ ಮುನ್ನಡೆಯಲು ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.