ಚಂಡೀಗಢ: ಹರಿಯಾಣದ ಗುರುಗ್ರಾಮ (Gurugram) ರಾಜೀವ್ ಚೌಕ್‌ನ (Rajiv Chowk) ಜನದಟ್ಟಣೆ ಪ್ರದೇಶದಲ್ಲಿ ಯುವತಿಯೊಬ್ಬರ ಮುಂದೆ ವ್ಯಕ್ತಿಯೊಬ್ಬ ಅಸಭ್ಯ ವರ್ತನೆಯಲ್ಲಿ ವರ್ತಿಸಿದ ರೀತಿ ವಿಡಿಯೊದಲ್ಲಿ ಸೆರೆಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಲವು ಅನುಯಾಯಿಗಳನ್ನು ಹೊಂದಿರುವ ಮಾಡೆಲ್ (Model) ಯುವತಿ, ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದು, ತನ್ನ ದೂರನ್ನು ದಾಖಲಿಸುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜೈಪುರದಿಂದ ಗುರುಗ್ರಾಮಕ್ಕೆ ಬಂದಿದ್ದ ಯುವತಿ, ಆಗಸ್ಟ್ 2ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ರಾಜೀವ್ ಚೌಕ್‌ನಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದರು. ಆಗ ಒಬ್ಬ ವ್ಯಕ್ತಿ ಆಕೆಯ ಸುತ್ತಲೂ ಓಡಾಡುತ್ತಾ ದಿಟ್ಟಿಸಿ ನೋಡಿದ್ದಾನೆ. “ಆತನ ಪ್ಯಾಂಟ್‌ನ ಜಿಪ್ ತೆರೆದಿರುವುದನ್ನು ಗಮನಿಸಿದೆ. ಆತ ನನ್ನ ಮುಂದೆಯೇ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ. ನನಗೆ ತೀವ್ರ ಅಸಹ್ಯವಾಯಿತು” ಎಂದು ಯುವತಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಆಕೆ ಆ ಗಳಿಗೆಯಲ್ಲಿ ಆಘಾತ ಮತ್ತು ಭಯದಿಂದ ಕಿರುಚಲಿಲ್ಲ ಅಥವಾ ಪ್ರತಿಕ್ರಿಯಿಸಲಿಲ್ಲ ಎಂದಿದ್ದಾರೆ.
#WATCH | Haryana: A model and social media content creator has alleged that a man masturbated in front of her while she was waiting for a cab in Gurugram.
— ANI (@ANI) August 7, 2025
She says, "I was coming from Jaipur to Delhi on 2nd August after a shoot. This incident happened around 11 am. I was waiting… pic.twitter.com/LOLWBNyzsu
“ಜನರು ಕಿರುಚಬೇಕಿತ್ತು ಅಥವಾ ಕಪಾಳಮೋಕ್ಷ ಮಾಡಬೇಕಿತ್ತು ಎಂದರು. ಆದರೆ ಆ ಕ್ಷಣದಲ್ಲಿ ಮಹಿಳೆಯ ಮನಸ್ಸಿನಲ್ಲಿ ಏನಾಗುತ್ತದೆ ಎಂಬುದನ್ನು ಯಾರೂ ಅರ್ಥಮಾಡಿಕೊಳ್ಳಲು ಆಗಲ್ಲ. ನಾನು ಕೇವಲ ಸುರಕ್ಷಿತವಾಗಿರಲು ಬಯಸಿದೆ” ಎಂದು ಆಕೆ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ರಸ್ತೆಗೆ ಕುಸಿದುಬಿದ್ದ ಬೆಟ್ಟ- ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರರು; ಇಲ್ಲಿದೆ ಎದೆ ಝಲ್ಲೆನಿಸುವ ವಿಡಿಯೊ
ಘಟನೆಯ ನಂತರ, ಯುವತಿ ಪೊಲೀಸರನ್ನು ಮತ್ತು ಮಹಿಳಾ ಸಹಾಯವಾಣಿಯನ್ನು ಸಂಪರ್ಕಿಸಲು ಯತ್ನಿಸಿದರೂ, ತಕ್ಷಣದ ಸಹಾಯ ಸಿಗಲಿಲ್ಲ. ಮನೆಗೆ ತಲುಪಿದ ನಂತರ, ಆಕೆ ಘಟನೆಯನ್ನು ಟ್ವೀಟ್ ಮಾಡಿ, ಪೊಲೀಸ್, ಮಹಿಳಾ ಸಹಾಯವಾಣಿ, ಮತ್ತು ಸರ್ಕಾರವನ್ನು ಟ್ಯಾಗ್ ಮಾಡಿದರೂ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. “ಪೊಲೀಸರನ್ನು ಸಂಪರ್ಕಿಸಿದಾಗ, ಎಫ್‌ಐಆರ್ ದಾಖಲಿಸಲು ಠಾಣೆಗೆ ಬರಬೇಕು ಎಂದರು” ಎಂದು ಅವರು ಆರೋಪಿಸಿದ್ದಾರೆ.
38,000ಕ್ಕೂ ಅಧಿಕ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿರುವ ಈ ಡಿಜಿಟಲ್ ಕ್ರಿಯೇಟರ್‌ನ ದೂರಿನ ನಂತರ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಯನ್ನು ಗುರುತಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.