ಮುಂಬೈ: ಮಹಾನಗರಿ ಮುಂಬೈನ ಲೋಕಲ್ ರೈಲುಗಳು ಸದಾ ಅಚ್ಚರಿಗಳಿಂದ ತುಂಬಿರುತ್ತವೆ. ಜುಲೈ 28 ರಂದು ಪ್ರಯಾಣಿಕರು ನಿಜಕ್ಕೂ ಅಚ್ಚರಿಗೊಳಗಾದರು. ಜನದಟ್ಟಣೆಯಿಂದ ಕೂಡಿದ್ದ ಹವಾನಿಯಂತ್ರಿತ ಲೋಕಲ್ ರೈಲಿನೊಳಗೆ ಒಬ್ಬ ವ್ಯಕ್ತಿಯೊಬ್ಬರು ಕೊಡೆ ಹಿಡಿದು ನಿಂತಿದ್ದಾನೆ. ಹೌದು, ರೈಲು ಬೋಗಿಯೊಳಗೆ ವ್ಯಕ್ತಿಯೊಬ್ಬರು ಕೊಡೆ ಹಿಡಿದು ನಿಂತಿದ್ದರು. ಈ ದೃಶ್ಯವನ್ನು ಸೆರೆಹಿಡಿದ ಪ್ರಯಾಣಿಕರೊಬ್ಬರು ರೆಡ್ಡಿಟ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ವೈರಲ್(Viral Post) ಆಗಿರುವ ಚಿತ್ರದಲ್ಲಿ, ವ್ಯಕ್ತಿಯು ರಶ್ ಇರುವ ಕೋಚ್‌ನ ಮಧ್ಯದಲ್ಲಿ ತನ್ನ ತೆರೆದ ಛತ್ರಿಯನ್ನು ಹಿಡಿದು ನಿಂತಿರುವುದನ್ನು ನೋಡಬಹುದು.
ರೆಡ್ಡಿಟ್‍ನಲ್ಲಿ ಹಂಚಿಕೊಂಡ ಬಳಿಕ ಇದು ಭಾರಿ ವೈರಲ್ ಆಗಿದ್ದು, ಡಜನ್‍ಗಟ್ಟಲೆ ಕಾಮೆಂಟ್‍ಗಳು ಬಂದಿವೆ. ತ್ವರಿತವಾಗಿ ಇದು ನೆಟ್ಟಿಗರ ಗಮನಸೆಳೆಯಿತು. ಈ ವೇಳೆ ಬಳಕೆದಾರರು ತಮ್ಮದೇ ಆದ ರೈಲು ಅನುಭವಗಳು ಮತ್ತು ಕೆಲವು ವಿಚಾರಗಳನ್ನು ಹಂಚಿಕೊಂಡರು. ಒಬ್ಬ ಬಳಕೆದಾರರು ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾ, “ಇತರರಿಗೆ ಅನಾನುಕೂಲವಾಗದಂತೆ ಅದನ್ನು ಮುಚ್ಚಲು ಅವನಿಗೆ ಸಾಕಷ್ಟು ಸ್ಥಳ ಮತ್ತು ಸಮಯ ಸಿಗಲಿಲ್ಲವಿರಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
ಆ ಟ್ಯೂಬ್‌ಲೈಟ್‌ಗಳು ಹೊರಸೂಸುವ ಆ ಯುವಿ ಕಿರಣಗಳಿಂದ ರಕ್ಷಿಸಿಕೊಳ್ಳಲು ಕೊಡೆ ಹಿಡಿದಿದ್ದಾರೆ ಎಂದು ಒಬ್ಬ ವ್ಯಕ್ತಿ ತಮಾಷೆ ಮಾಡಿದರೆ, ಇನ್ನೊಬ್ಬರು ಆ ವಿಚಿತ್ರ ನಡವಳಿಕೆಯನ್ನು ನಗುತ್ತಾ ಪ್ರಶ್ನಿಸಿದರು. ಆ ವ್ಯಕ್ತಿ ಎಸಿ ಕೋಚ್ ಒಳಗೆ ಛತ್ರಿಯನ್ನು ಏಕೆ ಬಳಸಿದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಒಂದು ವಿಷಯ ಖಚಿತ. ಮುಂಬೈನ ರೈಲುಗಳಲ್ಲಿ ಪ್ರಯಾಣಿಸುವಾಗ ಬರುವ ದೈನಂದಿನ ಅಚ್ಚರಿಯ ಪ್ರಮಾಣವನ್ನು ಅದು ಹೆಚ್ಚಿಸಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Physical harassment: ಮಹಿಳಾ ಅಧಿಕಾರಿ ಮನೆಗೆ ಬೆತ್ತಲೆಯಾಗಿ ಬಂದ ತಹಸೀಲ್ದಾರ್! ಇಲ್ಲಿದೆ ವೈರಲ್ ವಿಡಿಯೊ
ಮುಂಬೈ ರೈಲಿನಲ್ಲಿ ಈ ರೀತಿ ವಿಚಿತ್ರಗಳು ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ನವೆಂಬರ್‌ನಲ್ಲಿ, ಕಿಕ್ಕಿರಿದ ರೈಲಿನೊಳಗೆ ವ್ಯಕ್ತಿಯೊಬ್ಬ ಸಣ್ಣ ಪ್ಲಾಸ್ಟಿಕ್ ಸ್ಟೂಲ್ ಅನ್ನು ಹೊತ್ತುಕೊಂಡು ಬಂದಿದ್ದರು. ಸೀಟುಗಳು ತುಂಬುತ್ತಿದ್ದಂತೆ, ಆ ವ್ಯಕ್ತಿ ಶಾಂತವಾಗಿ ತನ್ನ ಚೀಲವನ್ನು ತೆರೆದು, ಮಡಿಸಬಹುದಾದ ಕುರ್ಚಿಯನ್ನು ಹೊರತೆಗೆದು, ನೆಲದ ಮೇಲೆ ಇರಿಸಿ, ಜನಸಂದಣಿಯ ಮಧ್ಯದಲ್ಲಿ ಆರಾಮವಾಗಿ ಕುಳಿತನು. ಈ ವಿಡಿಯೊ ವೈರಲ್ ಆಗಿತ್ತು.