ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Cricket Clip: ಬ್ಯಾಟರ್‌ಗಳು ಡಿಕ್ಕಿ ಹೊಡೆದು ಬಿದ್ದರೂ ರನೌಟ್‌ ಮಾಡುವಲ್ಲಿ ವಿಫಲವಾದ ಎದುರಾಳಿ ತಂಡ

ರಾಯಗಡ್ ರಾಯಲ್ಸ್‌ನ ವಿಕಿ ಓಸ್ಟ್ವಾಲ್ ಮತ್ತು ಸಿದ್ಧೇಶ್ ವೀರ್ ಎರಡನೇ ರನ್‌ ಕದಿಯುವ ಯತ್ನದಲ್ಲಿ ಪರಸ್ಪರ ಡಿಕ್ಕಿ ಹೊಡೆದರು. ಡಿಕ್ಕಿಯ ರಭಸಕ್ಕೆ ನೆಲಕ್ಕುರುಳಿದ ಉಭಯ ಆಟಗಾರರು ನೋವಿನ ಮಧ್ಯೆಯೂ ಎದ್ದು ಬಿದ್ದು ಕ್ರೀಸ್‌ ಮುಟ್ಟುವ ಮೂಲಕ ರನೌಟ್‌ ಸಂಕಟದಿಂದ ಪಾರಾದರು. ಆದರೆ ಸುಲಭವಾಗಿ ರನೌಟ್‌ ಅವಕಾಶ ಕೈಚೆಲ್ಲಿದ ಎದುರಾಳಿ ತಂಡದ ಆಟಗಾರರು ಭಾರೀ ಅವಮಾನ ಎದುರಿಸಿದರು.

ಮುಂಬಯಿ: ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನ(Maharashtra Premier League) ಎಲಿಮಿನೇಟರ್ ಪಂದ್ಯದಲ್ಲಿ ರಾಯಗಡ್ ರಾಯಲ್ಸ್(Raigad Royals) ಮತ್ತು ಕೊಲ್ಹಾಪುರ ಟಸ್ಕರ್ಸ್(Kolhapur Tuskers) ನಡುವಿನ ಪಂದ್ಯದಲ್ಲಿ ಸಂಭವಿಸಿದ ಘಟನೆಯ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral cricket clip) ಆಗಿದೆ. ಇಬ್ಬರು ಬ್ಯಾಟ್ಸ್‌ಮನ್‌ಗಳು ರನ್‌ಗಾಗಿ ಓಡುವ ವೇಳೆ ಪಿಚ್ ಮಧ್ಯದಲ್ಲಿ ಡಿಕ್ಕಿಯಾಗಿ ಬಿದ್ದರೂ ಕೂಡ ಎದುರಾಳಿ ತಂಡದ ಆಟಗಾರರಿಗೆ ರನೌಟ್‌ ಮಾಡಲು ಸಾಧ್ಯವಾದಗೆ ನಗೆಪಾಟಲಿಗೀಡಾದ ಘಟನೆ ಸಂಭವಿಸಿದೆ.

ರಾಯಗಡ್ ರಾಯಲ್ಸ್‌ನ ವಿಕಿ ಓಸ್ಟ್ವಾಲ್ ಮತ್ತು ಸಿದ್ಧೇಶ್ ವೀರ್ ಎರಡನೇ ರನ್‌ ಕದಿಯುವ ಯತ್ನದಲ್ಲಿ ಪರಸ್ಪರ ಡಿಕ್ಕಿ ಹೊಡೆದರು. ಡಿಕ್ಕಿಯ ರಭಸಕ್ಕೆ ನೆಲಕ್ಕುರುಳಿದ ಉಭಯ ಆಟಗಾರರು ನೋವಿನ ಮಧ್ಯೆಯೂ ಎದ್ದು ಬಿದ್ದು ಕ್ರೀಸ್‌ ಮುಟ್ಟುವ ಮೂಲಕ ರನೌಟ್‌ ಸಂಕಟದಿಂದ ಪಾರಾದರು. ಆದರೆ ಸುಲಭವಾಗಿ ರನೌಟ್‌ ಅವಕಾಶ ಕೈಚೆಲ್ಲಿದ ಎದುರಾಳಿ ತಂಡದ ಆಟಗಾರರು ಭಾರೀ ಅವಮಾನ ಎದುರಿಸಿದರು.

ಫೀಲ್ಡರ್ ಚೆಂಡನ್ನು ನೇರವಾಗಿ ವಿಕೆಟ್ ಕೀಪರ್​ನತ್ತ ಎಸೆದರೂ ಕೂಡ ಕೀಪರ್‌ ರನೌಟ್‌ ಮಾಡದೆ ಉತ್ತಮವಾಗಿ ಬ್ಯಾಟ್‌ ಬೀಸುತ್ತಿದ್ದ ವಿಕಿ ಓಸ್ಟ್ವಾಲ್ ಅವರನ್ನು ಔಟ್‌ ಮಾಡುವ ಸಲುವಾಗಿ ಚೆಂಡನ್ನು ನಾನ್‌ಸ್ಟ್ರೈಕರ್‌ನತ್ತ ಎಸೆದರು. ಆದರೆ ಇಲ್ಲಿ ಇಲ್ಲಿದ್ದ ಆಟಗಾರ ಆತುರದಲ್ಲಿ ಚೆಂಡನ್ನು ವಿಕೆಟ್‌ಗೆ ಮುಟ್ಟಿಸಲು ವಿಫಲರಾದರು. ಆದರೂ ಕೂಡ ಮತ್ತೊಂದು ತುದಿಯಲ್ಲಿ ಸಿದ್ಧೇಶ್ ವೀರ್ ಅವರನ್ನು ರನೌಟ್‌ ಮಾಡುವ ಅವಕಾಶವಿತ್ತು. ಆದರೆ ಇಲ್ಲಿಯೂ ರಾಹುಲ್‌ ತ್ರಿಪಾಠಿ ಎಡವಿದರು. ಈ ಘಟನೆಯ ವಿಡಿಯೊ ಇಲ್ಲಿದೆ.

ರನೌಟ್‌ ಎಡವಟ್ಟಿನಿಂದ ಕೊಲ್ಹಾಪುರ ಟಸ್ಕರ್ಸ್ 6 ವಿಕೆಟ್‌ ಅಂತರದ ಸೋಲು ಕಂಡಿತು. ರನೌಟ್‌ನಿಂದ ಪಾರಾದ ವಿಕಿ ಓಸ್ಟ್ವಾಲ್ ಮತ್ತು ಸಿದ್ಧೇಶ್ ವೀರ್ ಮೊದಲ ವಿಕೆಟ್‌ಗೆ 76 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ವಿಕಿ ಓಸ್ಟ್ವಾಲ್ 74 ರನ್‌ ಬಾರಿಸಿದರೆ, ಸಿದ್ಧೇಶ್ ವೀರ್ 39 ರನ್‌ ಬಾರಿಸಿದರು.

ಇದನ್ನೂ ಓದಿ ENG vs IND: ಮುಂದಿನ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಸೇರಲಿದ್ದಾರೆ ಘಾತಕ ವೇಗಿಗಳು