ಇಂಗ್ಲೆಂಡ್: ಶಸ್ತ್ರಚಿಕಿತ್ಸೆ (Surgery) ನಡೆಸುವ ಮಧ್ಯದಲ್ಲೇ ರೋಗಿಯನ್ನು ಬಿಟ್ಟು ನರ್ಸ್ ಜೊತೆ ಪಾಕಿಸ್ತಾನಿ ಮೂಲದ ವೈದ್ಯರೊಬ್ಬರು ಲೈಂಗಿಕ ಕ್ರಿಯೆ ನಡೆಸಿದ್ದಾರೆ ಇಂಗ್ಲೆಂಡ್‍ನ ಗ್ರೇಟರ್ ಮ್ಯಾಂಚೆಸ್ಟರ್‌ನ ಆಷ್ಟನ್-ಅಂಡರ್-ಲೈನ್‌ನಲ್ಲಿರುವ ಟೇಮ್‌ಸೈಡ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವೈದ್ಯನಿಗೆ ಈಗಾಗಲೇ ಮದುವೆಯಾಗಿದ್ದು, ನರ್ಸ್ ಜೊತೆ ಈ ರೀತಿ ವರ್ತಿಸಿದ್ದಾನೆ. ಸದ್ಯ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral News) ಆಗಿದೆ.
ಶಸ್ತ್ರಚಿಕಿತ್ಸೆಯ ಮಧ್ಯದಲ್ಲಿ ರೋಗಿಯನ್ನು ಬಿಟ್ಟು ಹೋಗಿದ್ದಲ್ಲದೆ, ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ನರ್ಸ್ ಜೊತೆ ರೆಡ್ ಹ್ಯಾಂಡ್ ಆಗಿ ಡಾಕ್ಟರ್ ಸಿಕ್ಕಿಬಿದ್ದಿದ್ದಾನೆ. ರೋಗಿಯ ಮೇಲ್ವಿಚಾರಣೆಗೆ ಮತ್ತೊಬ್ಬ ನರ್ಸ್ ಅನ್ನು ಬಿಟ್ಟು, ಇವರಿಬ್ಬರು ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಒಟ್ಟು ಎಂಟು ನಿಮಿಷಗಳ ಕಾಲ ರೋಗಿಯನ್ನು ಗಮನಿಸದೆ ಬಿಟ್ಟ ಇಬ್ಬರೂ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಪಾಕಿಸ್ತಾನಿ ಮೂಲದ 44 ವರ್ಷದ ವೈದ್ಯ ಡಾ. ಸುಶೀಲ್ ಅಂಜುಮ್ ಎಂದು ಗುರುತಿಸಲಾಗಿದ್ದು, ಯುಕೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ. ಶಸ್ತ್ರಚಿಕಿತ್ಸೆ ಸಮಯದಲ್ಲಿ ರೋಗಿಯನ್ನು ಗಮನಿಸದೆ ದಾದಿ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಕ್ಕೆ ಇದೀಗ ಈ ವೈದ್ಯನಿಗೆ ಆಸ್ಪತ್ರೆ ಗೇಟ್‍ಪಾಸ್ ನೀಡಿದೆ. ಹೀಗಾಗಿ ಸದ್ಯ ವೈದ್ಯ ಅಂಜುಮ್ ಪಾಕಿಸ್ತಾನಕ್ಕೆ ವಾಪಸ್ಸಾಗಿದ್ದಾನೆ.
ಇದನ್ನೂ ಓದಿ: Kerala IAS Aspirant: ವೆಂಟಿಲೇಟರ್ ಜೊತೆಗೆ UPSC ಪರೀಕ್ಷೆ ಬರೆದ ಯುವತಿ; ಈಕೆ ಸ್ಥಿತಿ ನೋಡಿದ್ರೆ ಕಣ್ಣೀರು ಬರುತ್ತೆ!
ಘಟನೆ ನಡೆದಾಗ, ಅಂಜುಮ್‌ಗೆ ಆಸ್ಪತ್ರೆಯ 5ನೇ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಒಟ್ಟು ಐದು ಶಸ್ತ್ರಚಿಕಿತ್ಸೆಗಳನ್ನು ನಿಯೋಜಿಸಲಾಯಿತು. ಮೂರನೇ ಶಸ್ತ್ರಚಿಕಿತ್ಸಾ ಸಮಯದಲ್ಲಿ, ಆತ ತಮ್ಮ ಜೊತೆಗಿದ್ದ ನರ್ಸ್‌ಗೆ ರೋಗಿಯನ್ನು ನೋಡಿಕೊಳ್ಳುವಂತೆ ಹೇಳಿದ್ದಾನೆ. ವಿರಾಮಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅಂಜುಮ್ ವಿವರಿಸಿದ್ದಾನೆ. ನಿಯೋಜಿಸಲಾಗಿದ್ದ ದಾದಿಯು, ಡಾಕ್ಟರ್ ಶೌಚಾಲಯಕ್ಕೆ ಹೋಗಿರಬಹುದು ಎಂದು ತಿಳಿದಿದ್ದಳು. ಆದರೆ, ಇವರ ಕಥೆಯೇ ಬೇರೆಯಿತ್ತು. ಮತ್ತೊಬ್ಬ ನರ್ಸ್ ಜೊತೆಗೆ ಆಪರೇಷನ್ ಥಿಯೇಟರ್ ಎಂಟರ ಬಳಿ ಸರಸ ಸಲ್ಲಾಪದಲ್ಲಿ ತೊಡಗಿದ್ದರು.
ವೈದ್ಯ ಹಾಗೂ ದಾದಿಯ ಸರಸ ಸಲ್ಲಾಪವನ್ನು ಆಕಸ್ಮಿಕವಾಗಿ ವೀಕ್ಷಿಸಿದ ಮತ್ತೊಂದು ನರ್ಸ್ ಅರೆಕ್ಷಣ ದಿಗ್ಭ್ರಮೆಗೊಂಡಿದ್ದಾರೆ. ಸರಸ ಸಲ್ಲಾಪದಲ್ಲಿ ತೊಡಗಿದ್ದ ನರ್ಸ್, ತನ್ನ ಪ್ಯಾಂಟ್ ಅನ್ನು ಮೊಣಕಾಲಿನವರೆಗೆ ಕೆಳಗೆ ಇಟ್ಟುಕೊಂಡಿದ್ದರೆ, ವೈದ್ಯ ತನ್ನ ಪ್ಯಾಂಟ್ ಅನ್ನು ಕಟ್ಟುತ್ತಿದ್ದರು. ಒಳ ಉಡುಪುಗಳು ನೆಲದ ಮೇಲೆ ಇದ್ದವು ಎಂದು ನರ್ಸ್ ಹೇಳಿದ್ದಾಗಿ ವರದಿ ಮಾಡಲಾಗಿದೆ.
ಈ ದೃಶ್ಯವನ್ನು ಕಣ್ಣಾರೆ ವೀಕ್ಷಿಸಿದ ನರ್ಸ್ ಕೂಡಲೇ ಕೋಣೆಯಿಂದ ಹೊರಬಂದಿದ್ದಾರೆ. ನಂತರ ವೈದ್ಯ ನೇರವಾಗಿ ಶಸ್ತ್ರಚಿಕಿತ್ಸೆಯನ್ನು ಪುನರಾರಂಭಿಸಲು ಹೋದರು. ವರದಿಯ ಪ್ರಕಾರ, ಅವರು ಎಂಟು ನಿಮಿಷಗಳ ಕಾಲ ಅಲ್ಲಿಗೆ ಹೋಗಿರಲಿಲ್ಲ. ಅದೃಷ್ಟವಶಾತ್, ರೋಗಿಗೆ ಯಾವುದೇ ಹಾನಿ ಸಂಭವಿಸಲಿಲ್ಲ.
ಇನ್ನು ಡಾ. ಅಂಜುಮ್ ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ಯುಕೆಯಲ್ಲಿ ಮತ್ತೆ ತಮ್ಮ ವೃತ್ತಿಜೀವನವನ್ನು ಪುನರಾರಂಭಿಸಲು ಬಯಸುವುದಾಗಿ ಹೇಳಿದರು. ನಾನು ಎಲ್ಲರನ್ನೂ ನಿರಾಸೆಗೊಳಿಸಿದೆ, ನನ್ನ ರೋಗಿ ಮತ್ತು ನನ್ನನ್ನು ಮಾತ್ರವಲ್ಲ, ನಂಬಿಕೆಯನ್ನು ಸಹ. ನನಗೆ ಬಹಳಷ್ಟು ಗೌರವ ನೀಡಿದ ನನ್ನ ಸಹೋದ್ಯೋಗಿಗಳನ್ನು ನಾನು ನಿರಾಸೆಗೊಳಿಸಿದೆ ಎಂದು ಅವರು ಹೇಳಿದರು.
ಪತ್ನಿಯೊಂದಿಗಿನ ವೈವಾಹಿಕ ಕಲಹದಿಂದಾಗಿ ಒತ್ತಡಕ್ಕೊಳಗಾಗಿದ್ದಾಗಿ ಅಂಜುಮ್ ಉಲ್ಲೇಖಿಸಿದ್ದಾರೆ. ನಮ್ಮ ಮಗಳು ಅಕಾಲಿಕವಾಗಿ ಜನಿಸಿದಳು. ಜನನದ ಸಮಯದಲ್ಲಿ ತುಂಬಾ ಕಡಿಮೆ ತೂಕ ಹೊಂದಿದ್ದಳು. ನನ್ನ ಹೆಂಡತಿಗೆ ತುಂಬಾ ಆಘಾತಕಾರಿ ಹೆರಿಗೆಯಾಗಿತ್ತು, ಅದು ಸಾಕಷ್ಟು ಒತ್ತಡದ ಅನುಭವವಾಗಿತ್ತು. ಆ ಸಮಯದಲ್ಲಿ ನಾವು ದಂಪತಿಗಳಾಗಿ ಸಂಪರ್ಕ ಸಾಧಿಸಲು ವಿಫಲರಾಗಿದ್ದೇವೆ. ಇದು ನನ್ನ ವೈಯಕ್ತಿಕ ಜೀವನ, ನನ್ನ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಹಾಗೂ ಆಸ್ಪತ್ರೆಯಲ್ಲಿನ ನನ್ನ ಕೆಲಸದ ಮೇಲೆ ಪರಿಣಾಮ ಬೀರಿತು ಎಂದು ಹೇಳಿದ್ದಾರೆ.