ಮುಂಬೈ: ಹಗಲು ಹೊತ್ತಿನಲ್ಲೇ ವಸತಿ ಕಟ್ಟಡದೊಳಗೆ ಮಹಿಳೆಯೊಬ್ಬರನ್ನು ಲೂಟಿ ಮಾಡಲಾದ ಆತಂಕಕಾರಿ ಘಟನೆ ಪುಣೆಯಲ್ಲಿ ನಡೆದಿದೆ. ಮುಸುಕುಧಾರಿ ವ್ಯಕ್ತಿಯೊಬ್ಬ ಕಟ್ಟಡಕ್ಕೆ ಪ್ರವೇಶಿಸಿ ಲಿಫ್ಟ್ ಬಳಿ ಮಹಿಳೆಯನ್ನು ಲೂಟಿ ಮಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ (Viral Video). ಸಿಸಿಟಿವಿ ದೃಶ್ಯಾವಳಿಯಲ್ಲಿ ಉಲ್ಲೇಖಿಸಲಾದ ಸಮಯದ ಪ್ರಕಾರ, ಈ ಘಟನೆ ಆಗಸ್ಟ್ 3ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಸಂಭವಿಸಿದೆ.
ಮಹಿಳೆಯು ಲಿಫ್ಟ್ ಬಳಿ ಪ್ರವೇಶಿಸಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಆಗುಂತಕನೊಬ್ಬ ಪ್ರಶ್ನೆ ಕೇಳಿದ್ದಾನೆ. ಮಹಿಳೆ ಉತ್ತರಿಸುತ್ತಿದ್ದಂತೆ ಅವರ ಕುತ್ತಿಗೆ ಸರವನ್ನು ಕಸಿದುಕೊಂಡು ಓಡಿ ಹೋಗಿದ್ದಾನೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವಿಡಿಯೊ ವೀಕ್ಷಿಸಿ:
पुणे जिले के जुन्नर में फिल्मी स्टाइल में लूट.
— Vivek Gupta (@imvivekgupta) August 4, 2025
लुटेरों ने बिल्डिंग के अंदर घुस कर महिला से लूट पाट की..
पूरी घटना सीसीटीवी में कैद..#MaharashtraNews pic.twitter.com/puHif8wief
ದೆಹಲಿ ಆಭರಣ ಅಂಗಡಿ ಲೂಟಿ
ಭಾನುವಾರ ವರದಿಯಾದ ಮತ್ತೊಂದು ಲೂಟಿ ಪ್ರಕರಣದಲ್ಲಿ, ಈಶಾನ್ಯ ದೆಹಲಿಯ ಚಾಂದ್ ಬಾಗ್ ಪ್ರದೇಶದ ಆಭರಣ ಅಂಗಡಿಯ ಮಾಲೀಕ ಮತ್ತು ಗ್ರಾಹಕರನ್ನು ಒತ್ತೆಯಾಳಾಗಿ ಇಟ್ಟುಕೊಂಡು ನಾಲ್ಕರಿಂದ ಐದು ಮಂದಿ ಶಸ್ತ್ರಸಜ್ಜಿತ ವ್ಯಕ್ತಿಗಳು ನಗದು ಮತ್ತು ಆಭರಣಗಳನ್ನು ದೋಚಿದ್ದಾರೆ. ದಯಾಳ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಾಂದ್ ಬಾಗ್‌ನ ಗಾಲಿ ನಂ. 4ರಲ್ಲಿರುವ ಆಭರಣ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ದರೋಡೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಸಾದಿಕ್ (27) ಎಂಬಾತ ಪೊಲೀಸರಿಗೆ ದೂರು ನೀಡಿದ್ದು, ಗ್ರಾಹಕರೊಬ್ಬರಿಗೆ ಆಭರಣ ತೋರಿಸುತ್ತಿದ್ದಾಗ, ನಾಲ್ಕರಿಂದ ಐದು ಜನರ ಗುಂಪು ಅಂಗಡಿಗೆ ನುಗ್ಗಿ ಒಳಗಿನಿಂದ ಶಟರ್ ಎಳೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಸ್ತ್ರಸಜ್ಜಿತ ಆರೋಪಿಗಳು, ಬಂದೂಕು ತೋರಿಸಿ ಹೆದರಿಸಿದ್ದು, ಅಂಗಡಿಯಿಂದ ಹಾಗೂ ಅಲ್ಲಿದ್ದ ಗ್ರಾಹಕರಿಂದ ಆಭರಣ ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಅಪರಾಧ ಮತ್ತು ವಿಧಿವಿಜ್ಞಾನ ತಂಡಗಳ ಅಧಿಕಾರಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಅಪರಾಧ ಸ್ಥಳವನ್ನು ಪರಿಶೀಲಿಸಿದರು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿದರು. ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು. ದಯಾಳ್‌ಪುರ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.