ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಐಫೋನ್‌ಗಾಗಿ ಕಿಡ್ನಿ ಮಾರಿದ್ದ ವ್ಯಕ್ತಿ 14 ವರ್ಷದ ಬಳಿಕ ಅಂಗವಿಕಲನಾದ

ಐಫೋನ್ ಖರೀದಿಗಾಗಿ ಲೋನ್ ಮಾಡುವುದು ಸಾಮಾನ್ಯ ಎನಿಸಿಕೊಂಡಿದೆ. ಇತ್ತೀಚೆಗಷ್ಟೇ ಪ್ರಿಯತಮೆಗಾಗಿ ಯುವಕನೊಬ್ಬ ಕಿಡ್ನಿ ಮಾರಿ ಐಫೋನ್ ಖರೀದಿ ಮಾಡಿದ್ದ ಸುದ್ದಿ ವೈರಲ್ ಆಗಿತ್ತು. ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಚೀನಾದ ಯುವಕನೊಬ್ಬ ತನ್ನ 17ನೇ ವಯಸ್ಸಿನಲ್ಲಿ ಒಂದು ಕಿಡ್ನಿಯನ್ನು ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡಿ ತನ್ನಿಷ್ಟದ ದುಬಾರಿ ಫೋನ್ ಖರೀದಿ ಮಾಡಿದ್ದ. ಆದರೆ ಇದೆ ನಿರ್ಧಾರದಿಂದ ಆತನೀಗ ಅಂಗವೈಕಲ್ಯ ಸಮಸ್ಯೆಗೆ ಸಿಲುಕಿದ್ದಾನೆ.

Sold A Kidney To Buy iPhone

ಬೀಜಿಂಗ್‌: ಇತ್ತೀಚಿನ ದಿನದಲ್ಲಿ ಸ್ಮಾರ್ಟ್ ಫೋನ್ ಗ್ಯಾಜೆಟ್ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಐಫೋನ್ ಬ್ರ್ಯಾಂಡ್ ಎಂದರೆ ಕ್ರೇಝ್‌ ಸ್ವಲ್ಪ ಜಾಸ್ತಿ ಎಂದೇ ಹೇಳಬಹುದು. ಐಫೋನ್ ಹೊಸ ಹೊಸ ವರ್ಶನ್ ಬರುತ್ತಿದ್ದಂತೆ ಅದನ್ನು ಖರೀದಿಸಲು ಜನರು ಮುಗಿಬೀಳುತ್ತಾರೆ. ಇಂದು ಐಫೋನ್ ಖರೀದಿಗಾಗಿ ಲೋನ್ ಮಾಡುವುದು ಸಾಮಾನ್ಯವಾಗಿದೆ. ಇತ್ತೀಚೆಗಷ್ಟೇ ಪ್ರಿಯತಮೆಗಾಗಿ ಪ್ರೇಮಿ ಕಿಡ್ನಿ ಮಾರಿ ಐಫೋನ್ ಖರೀದಿ ಮಾಡಿದ್ದ ಸುದ್ದಿ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಇಂದಹದ್ದೇ ಘಟನೆಯೊಂದು ಚೀನಾದಲ್ಲಿ ಬೆಳಕಿಗೆ ಬಂದಿದೆ. ಚೀನಾದ ಯುವಕನೊಬ್ಬ ತನ್ನ 17 ವರ್ಷ ವಯಸ್ಸಿನಲ್ಲಿ ತನ್ನ ಒಂದು ಕಿಡ್ನಿಯನ್ನು (Sold A Kidney) ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡಿ ತನ್ನಿಷ್ಟದ ದುಬಾರಿ ಫೋನ್ ಖರೀದಿಸಿದ್ದ. ಆದರೆ ಇದೆ ನಿರ್ಧಾರದಿಂದ ಆತನೀಗ ಅಂಗವೈಕಲ್ಯಕ್ಕೆ ಒಳಗಾಗಿದ್ದಾನೆ.

ಚೀನಾ ಮೂಲದ ಯುವ ವಾಂಗ್ ಶಾಂಗ್ಕುನ್‌ಗೆ ಐಫೋನ್ ಖರೀದಿ ಮಾಡಬೇಕು ಎಂಬ ಆಸೆ ಇತ್ತು. ಆದರೆ ಅಷ್ಟು ಹಣ ಆತನ ಬಳಿ ಇರಲಿಲ್ಲ. ತೀರ ಬಡ ಕುಟುಂಬದ ಹಿನ್ನೆಲೆಯವನಾಗಿದ್ದ ಕಾರಣ ಆತನಿಗೆ ಸಾಲ ಕೂಡ ಯಾರು ನೀಡುವವರು ಇರಲಿಲ್ಲ. ಹೀಗಾಗಿ ಹೇಗಾದರೂ ಮಾಡಿ ಐಫೋನ್‌ ಖರೀದಿ ಮಾಡಬೇಕು ಎಂಬ ಕಾರಣಕ್ಕೆ ತನ್ನ ಕಿಡ್ನಿ ಮಾರಲು ಆತ ನಿರ್ಧರಿಸಿದ್ದನು. ಆದರೆ ಫೋನ್ ಖರೀದಿ ಮಾಡಿ ಹದಿನಾಲ್ಕು ವರ್ಷಗಳ ನಂತರ ಆತನನ್ನು ಅದುವೇ ಶಾಶ್ವತವಾಗಿ ಅಂಗವಿಕಲನನ್ನಾಗಿ ಮಾಡಿದೆ.

ಚೀನಾದ ವಾಂಗ್ ಶಾಂಗ್ಕುನ್‌ಗೆ ಐಫೋನ್ ಖರೀದಿ ಮಾಡಲು ಒಂದು ಕಿಡ್ನಿ ಮಾರಾಟ ಮಾಡಲು ವ್ಯಕ್ತಿಯೊಬ್ಬ ಸಲಹೆ ನೀಡಿದ್ದಾನೆ. ಒಂದು ಕಿಡ್ನಿಗೆ 20,000 ಯುವಾನ್ ಸಿಗುತ್ತದೆ ಎಂದು ವ್ಯಕ್ತಿ ಭರವಸೆ ನೀಡಿದ್ದಾನೆ. ಅದಕ್ಕೆ ಶಾಂಗ್ಕುನ್ ಕೂಡ ಒಪ್ಪಿಕೊಂಡು 2011ರಲ್ಲಿ ತನ್ನ ಒಂದು ಮೂತ್ರಪಿಂಡವನ್ನು 20,000 ಯುವಾನ್‌ಗೆ (ಸುಮಾರು 2.5 ಲಕ್ಷ ರೂ.) ಮಾರಿ ಐಫೋನ್ 4 ಮತ್ತು ಐಪ್ಯಾಡ್ 2 ಅನ್ನು ಖರೀದಿಸಿದ್ದಾನೆ. ಆದರೆ ಇದರಿಂದಾಗಿ ಮುಂದೆ ತಾನು ದೊಡ್ಡ ಅಪಾಯಕ್ಕೆ ಸಿಲುಕುತ್ತೇನೆ ಎಂಬ ಸಣ್ಣ ಅರಿವು ಆತನಿಗೆ ಇರಲಿಲ್ಲ.

ಇದನ್ನು ಓದಿ:Viral Video: ಕಿಲಾಡಿ ಜೋಡಿ!ಗ್ರಾಹಕರ ಸೋಗಿನಲ್ಲಿ 6ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿದ್ರು- ವಿಡಿಯೊ ನೋಡಿ

ವಾಂಗ್ ಶಾಂಗ್ಕುನ್‌ ಕಿಡ್ನಿ ಮಾರಾಟ ಮಾಡಿದ್ದು ಹುನಾನ್ ಪ್ರಾಂತ್ಯದ ಒಂದು ಸಣ್ಣ ಸ್ಥಳೀಯ ಆಸ್ಪತ್ರೆಯಲ್ಲಿ. ಇಲ್ಲಿ ಶಸ್ತ್ರಚಿಕಿತ್ಸೆಗೆ ಯಾವುದೇ ಪರವಾನಿಗೆ ಇಲ್ಲದ ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಆತ ಮೂತ್ರಪಿಂಡ ದಾನ ಮಾಡಿದ್ದ. ಇದರಿಂದ ಬಂದ ಹಣವನ್ನು ಐಫೋನ್ ಖರೀದಿಸಿದ್ದಾನೆ. ಇದಾಗಿ ಈಗ 14 ವರ್ಷ ಕಳೆದಿದ್ದು, ಈಗ ಆತನ ಇನ್ನೊಂದು ಮೂತ್ರಪಿಂಡವು ಸೋಂಕಿಗೆ ಒಳಗಾಗಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸರಿಯಾಗಿ ಶುಚಿತ್ವ ಇಲ್ಲದ ಕಾರಣ ಬ್ಯಾಕ್ಟೀರಿಯಾಗಳು ಹರಡಿವೆ ಎಂದು ವೈದ್ಯರಿಂದ ತಿಳಿದುಬಂದಿದೆ‌. ಈಗ 31 ವರ್ಷ ವಯಸ್ಸಿನ ವಾಂಗ್ ಸಂಪೂರ್ಣವಾಗಿ ಅಂಗವಿಕಲನಾಗಿದ್ದಾನೆ‌. ಬದುಕುಳಿಯಲು ಆತನು ಡಯಾಲಿಸಿಸ್ ಯಂತ್ರವನ್ನು ಅವಲಂಬಿಸಿದ್ದಾರೆ. ಆತನ ಒಂದು ತಪ್ಪು ನಿರ್ಣಯ ತನ್ನ ಜೀವನವನ್ನೇ ಕಸಿದಿದೆ.

ವಾಂಗ್‌ನ ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಹೊಸ ಐಫೋನ್ ಅಥವಾ ಇತರ ಗ್ಯಾಜೇಟ್ ಖರೀದಿ ಮಾಡಲು ಇದೇ ರೀತಿಯ ಮಾರ್ಗಗಳನ್ನು ಅನುಸರಿಸುವವರು ಮೊದಲೇ ಜಾಗೃತವಾಗಬೇಕು ಎಂಬ ಸಂದೇಶ ಕೂಡ ಹರಿದಾಡುತ್ತಿದೆ. ಸುರಕ್ಷಿತವಲ್ಲದ ಕ್ರಮದ ಮೂಲಕ ಅಂಗಾಗ ದಾನ ಮಾಡಿದರೆ ಎಷ್ಟು ಅಪಾಯಕಾರಿ ಎಂಬುದಕ್ಕೆ ಇದೇ ಉತ್ತಮ ಉದಾಹರಣೆ ಎನಿಸಿಕೊಂಡಿದೆ.