ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೈಕ್‌ನ ಪೆಟ್ರೋಲ್ ಟ್ಯಾಂಕ್‌ ಅಡಿಯಲ್ಲಿ ಅವಿತಿತ್ತು ವಿಷಕಾರಿ ಹಾವು; ಅರಿವಿಲ್ಲದೆ 2 ಗಂಟೆ ಸುತ್ತಾಡಿದ ವಿದ್ಯಾರ್ಥಿ ಪಾರಾಗಿದ್ದೇಗೆ?

ರಾಯಲ್ ಎನ್‌ಫೀಲ್ಡ್ ಬುಲೆಟ್‌ನ ಪೆಟ್ರೋಲ್ ಟ್ಯಾಂಕ್ ಕೆಳಗೆ ಸೇರಿಕೊಂಡಿದ್ದ ವಿಷಕಾರಿ ಹಾವಿನ ಅರಿವೇ ಇಲ್ಲದೆ ವಿದ್ಯಾರ್ಥಿ ಸುಮಾರು 2 ಗಂಟೆಗಳ ಕಾಲ ಸುತ್ತಾಡಿದ್ದಾನೆ. ಕೊನೆಗೆ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾನೆ. ಸದ್ಯ ಹಾವನ್ನು ಸೆರೆ ಹಿಡಿಯಲಾಗಿದೆ.

ಘಟನೆಯ ದೃಶ್ಯ

ಭೋಪಾಲ್‌: ಮಧ್ಯ ಪ್ರದೇಶದ (Madhya Pradesh) ಸಾಗರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ವಿದ್ಯಾರ್ಥಿಯೊಬ್ಬನ (Student) ರಾಯಲ್ ಎನ್‌ಫೀಲ್ಡ್ ಬುಲೆಟ್ (Royal Enfield Bullet) ಬೈಕ್‌ನ ಇಂಧನ ಟ್ಯಾಂಕ್ ಅಡಿಯಲ್ಲಿ ಅತ್ಯಂತ ವಿಷಕಾರಿ ರಸೆಲ್ ವೈಪರ್ (Russell's Viper) ಅಡಗಿಕೊಂಡಿರುವುದು ಪತ್ತೆಯಾಗಿದೆ. ಘಟನೆಯಲ್ಲಿ ವಿದ್ಯಾರ್ಥಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಶೇಷ ಎಂದರೆ ಆತ ಹಾವು ಅವಿತಿರುವ ಬಗ್ಗೆ ಗೊತ್ತಿಲ್ಲದೆ ಬೈಕನ್ನು 2 ಗಂಟೆಗಳ ಕಾಲ ಚಲಾಯಿಸಿದ್ದಾನೆ!

ವಿದ್ಯಾರ್ಥಿಯು ತನ್ನ ಬೈಕ್‌ನೊಂದಿಗೆ ಮಾರುಕಟ್ಟೆಗೆ ತೆರಳಿದ್ದು, ಸುಮಾರು ಎರಡು ಗಂಟೆಗಳ ಕಾಲ ಯಾವುದೇ ಅನುಮಾನವಿಲ್ಲದೆ ಸವಾರಿ ಮಾಡಿದ್ದ. ಬೈಕ್‌ನಲ್ಲಿ ಸಣ್ಣ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಾಗ ಆತ ಸರ್ವಿಸ್ ಸೆಂಟರ್‌ಗೆ ತೆಗೆದುಕೊಂಡು ಹೋದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೆಕ್ಯಾನಿಕ್ ಟ್ಯಾಂಕ್ ಕವರ್ ತೆಗೆದಾಗ, ರಸೆಲ್ ವೈಪರ್ ಇಂಧನ ಟ್ಯಾಂಕ್‌ನಡಿಯಲ್ಲಿ ಸುರುಳಿಯಾಗಿ ಕುಳಿತಿರುವುದು ಕಂಡುಬಂದಿತು. ಸರ್ವಿಸ್ ಸೆಂಟರ್ ಸಿಬ್ಬಂದಿ ತಕ್ಷಣ ವಿದ್ಯಾರ್ಥಿಯನ್ನು ಸ್ಥಳಾಂತರಿಸಿ, ಹಾವು ಹಿಡಿಯುವವರನ್ನು ಕರೆದಿದ್ದಾರೆ.

ಈ ಸುದ್ದಿಯನ್ನು ಓದಿ:Viral Video: ರಸ್ತೆಯಲ್ಲಿ ಬಿದ್ದಿದ್ದ ಕಸವನ್ನೆತ್ತಿ ಡಸ್ಟ್‌ಬಿನ್‌ಗೆ ಹಾಕಿದ ಆನೆ ಮರಿ; ನಿಜವಾದ ಪ್ರಾಣಿ ಯಾರು ಎಂದು ಪ್ರಶ್ನಿಸಿದ ನೆಟ್ಟಿಗರು

ಉರಗ ತಜ್ಞ ಅಕಿಲ್ ಬಾಬಾ ಸ್ಥಳಕ್ಕೆ ಆಗಮಿಸಿ ಎಚ್ಚರಿಕೆಯಿಂದ ಹಾವನ್ನು ಸೆರೆಹಿಡಿದರು. ಈ ಬಗ್ಗೆ ಮಾತನಾಡಿದ ಅವರು, “ರಸೆಲ್ ವೈಪರ್ ಭಾರತದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದು. ಬೈಕ್ ಬಿಸಿಯಾದಾಗ ಅಥವಾ ತಣ್ಣಗಾದಾಗ ಆಶ್ರಯ ಪಡೆದಿರಬಹುದು. ಇದರ ವಿಷವು ನಿಮಿಷಗಳಲ್ಲಿ ರಕ್ತವನ್ನು ಗಟ್ಟಿಗೊಳಿಸುತ್ತದೆ ಮತ್ತು ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರೆ ಸಾವಿಗೆ ಕಾರಣವಾಗಬಹುದು” ಎಂದರು.

ಸ್ಥಳೀಯರು ಬೈಕ್ ನಿಂತಿರುವಾಗ ಹಾವು ಶಾಖ ಅಥವಾ ಆಶ್ರಯಕ್ಕಾಗಿ ಒಳಗೆ ಸೇರಿರಬಹುದು ಎಂದು ಭಾವಿಸಿದ್ದಾರೆ. ರಸೆಲ್ ವೈಪರ್ ಭಾರತದಲ್ಲಿ ಪ್ರತಿವರ್ಷ ಸಾವಿರಾರು ಜನರ ಸಾವಿಗೆ ಕಾರಣವಾಗಿದ್ದು, ದೊಡ್ಡ ನಾಲ್ಕು ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ಇದು ತನ್ನ ಆಕ್ರಮಣಕಾರಿ ವರ್ತನೆ ಮತ್ತು ಮಾರಕ ವಿಷಕ್ಕೆ ಹೆಸರುವಾಸಿ.