ತಿರುಪತಿ: ಮಹಿಳಾ ಕಂದಾಯ ಅಧಿಕಾರಿ ಮನೆಗೆ ತಹಶೀಲ್ದಾರ್‌ವೊಬ್ಬ ಅರೆಬೆತ್ತಲೆಯಾಗಿ ಆಗಿ ಬಂದಿರುವ ವಿಲಕ್ಷಣ ಘಟನೆ ವರದಿಯಾಗಿದೆ. ಬೆತ್ತಲೆಯಾಗಿ ಪತ್ತೆಯಾದ ತಹಶೀಲ್ದಾರ್‌ನನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ. ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ವಕಾಡು ತಹಸೀಲ್ದಾರ್ ಅವರನ್ನು ಜಿಲ್ಲಾಧಿಕಾರಿ ವೆಂಕಟೇಶ್ವರ್ ಅಮಾನತು ಮಾಡಿದ್ದಾರೆ. ಇನ್ನು ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.
ಏನಿದು ಪ್ರಕರಣ?
ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಅರೆನಗ್ನ ವ್ಯಕ್ತಿಯನ್ನು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಗ್ರಾಮ ಕಂದಾಯ ಅಧಿಕಾರಿಯ ತಾಯಿ, ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ತಹಸೀಲ್ದಾರ್‌ನನ್ನು ಪೊರಕೆಯಿಂದ ಥಳಿಸಿದ್ದರು.
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ನಾಯ್ಡುಪೇಟೆ ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ತಿರುಪತಿ ಜಿಲ್ಲೆಯ ನಾಯುಡುಪೇಟೆಯಲ್ಲಿ ವಾಸಿಸುವ ಮಹಿಳಾ ಕಂದಾಯ ಅಧಿಕಾರಿಗೆ ತಹಸೀಲ್ದಾರ್ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಬುಧವಾರ, ತಹಸೀಲ್ದಾರ್ ತನ್ನೆಲ್ಲಾ ಮಿತಿಗಳನ್ನು ಮೀರಿ ಬೆತ್ತಲೆಯಾಗಿ ಆಕೆಯ ಮನೆಗೆ ಹೋಗಿದ್ದಾರೆ. ಅಷ್ಟೇ ಅಲ್ಲದೆ ಅನುಚಿತವಾಗಿ ವರ್ತಿಸಿದ್ದಾರೆ. ಇದರಿಂದ ಸಿಟ್ಟಿಗಿದ್ದ ಮಹಿಳೆಯ ತಾಯಿ ಪೊರಕೆಯಲ್ಲಿ ಆತನಿಗೆ ಥಳಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
VIDEO: కోరిక తీర్చాలంటూ మహిళా VRO ఇంటికెళ్లిన MRO.. తర్వాత.. https://t.co/ZVNPyj953W pic.twitter.com/EWT160v52E
— Dr.N.B.Sudhakar Reddy (@DrNBSReddy) July 31, 2025
ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಇದು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಮಹಿಳಾ ಕಂದಾಯ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದ್ದು. ಹೀಗಾಗಿ ತಹಸೀಲ್ದಾರ್ ರಾಮಯ್ಯನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.