ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ವಿಶೇಷಚೇತನ ಪತಿ ಮೇಲೆ ಪತ್ನಿಯ ರೌದ್ರಾವತಾರ; ಶಾಕಿಂಗ್‌ ವಿಡಿಯೊ ಇಲ್ಲಿದೆ

ತಮಿಳುನಾಡಿನ ಚೆನ್ನೈನಲ್ಲಿ ಮಾರಮಣಿ ಎಂಬ ಮಹಿಳೆ ತನ್ನ ವಿಶೇಷಚೇತನ ಪತಿ ಸೆಂಥಿಲ್ ನಾಥನ್ ಕೆಲಸ ಮಾಡುತ್ತಿದ್ದ ಕಚೇರಿಗೆ ನುಗ್ಗಿ ಪತಿ ಮತ್ತು ಆತನ ಸಹೋದ್ಯೋಗಿಯನ್ನು ಥಳಿಸಿದ್ದಾಳೆ. ಈ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಕೂಡಲೇ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿವೆ.

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ತನ್ನ ವಿಶೇಷಚೇತನ ಪತಿಯ ಕಚೇರಿಗೆ ನುಗ್ಗಿ ಅವನನ್ನು ಮತ್ತು ಆತನ ಸಹೋದ್ಯೋಗಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾಳೆ ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಇದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿವೆ.

ವೈರಲ್ ಆದ ವಿಡಿಯೊದಲ್ಲಿ, ಮಾರಮಣಿ ಎಂಬ ಮಹಿಳೆ ತನ್ನ ಪತಿ ಸೆಂಥಿಲ್ ನಾಥನ್ ಮತ್ತು ಅವನ ಸಹೋದ್ಯೋಗಿಯೊಂದಿಗೆ ವಾಗ್ವಾದ ನಡೆಸುತ್ತಿರುವುದು ಸೆರೆಯಾಗಿದೆ. ಕಚೇರಿಯಲ್ಲಿದ್ದ ಇತರರು ಇವರ ಜಗಳವನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆ ವೇಳೆ ಆ ವ್ಯಕ್ತಿಯ ಸಹೋದ್ಯೋಗಿ ಮಾರಮಣಿಯ ಮೇಲೆ ಪ್ರತಿದಾಳಿ ನಡೆಸಿರುವುದು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ.

ವಿಡಿಯೊ ಇಲ್ಲಿದೆ ನೋಡಿ...



ಘಟನೆಯ ನಂತರ, ನಾಥನ್ ಅನೈರ್‌ನಲ್ಲಿರುವ ವಿಶೇಷ ಚೇತನ ಸಂಘಕ್ಕೆ ದೂರು ಸಲ್ಲಿಸಿದ್ದಾನೆ. ಪತ್ನಿ ತಿಂಗಳಿಗೆ 40,000 ರೂ.ಗಳನ್ನು ಕೇಳುತ್ತಿದ್ದಾಳೆ ಎಂದು ಅವನು ಆರೋಪಿಸಿದ್ದಾನೆ.

ಈ ಸುದ್ದಿಯನ್ನೂ ಓದಿ:Viral Video: ಮಗನ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಪೋಲ್‌ ಡಾನ್ಸರ್ಸ್‌ ಕರೆಸಿದ ಅಪ್ಪ-ಅಮ್ಮ! ವಿಡಿಯೊ ನೋಡಿ

ಪತ್ನಿ ಪತಿಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಹಾಸನದಲ್ಲಿ ಮನೆಗೆ ಲೇಟಾಗಿ ಬಂದ ಪತ್ನಿಯನ್ನು ಯಾಕೆ ಲೇಟು ? ಎಂದು ಪತಿ ಕೇಳಿದ್ದಕ್ಕೆ ಆಕೆ ಪತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಹಲ್ಲೆಗೊಳದಾಗ ಪತಿಯನ್ನು ಹಾಸನ ಹೊರವಲಯದ ದಾಸರಕೊಪ್ಪಲು ಬಳಿಯ ಅಂಬರೀಶ್ ಎಂದು ಹಾಗೂ ಹಲ್ಲೆ ಮಾಡಿದ ಪತ್ನಿ ಶಿಲ್ಪಾ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಪತಿ, ಪತ್ನಿಯ ವಿರುದ್ಧ ಕೆ.ಆರ್​.ಪುರಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದನು.