ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಪೊಲೀಸಪ್ಪನ ಹೆಂಡ್ತಿ ಶೋಕಿಗೆ ಸರ್ಕಾರ ವಾಹನವೇ ಬೇಕು! ಈ ವಿಡಿಯೊ ನೋಡಿ

ಚತ್ತೀಸ್‍ಗಢದ ಜೆಂಜ್ಗಿರ್-ಚಂಪಾ ಜಿಲ್ಲೆಯ ಡಿಎಸ್‍ಪಿ ತಾಸ್ಲಿಂ ಅರೀಫ್ ಹೆಂಡತಿ ಫರ್‌ಹೀನ್ ಖಾನ್ ಸರ್ಕಾರಿ ಕಾರಿನ ಬಾನೆಟ್‌ನಲ್ಲಿ ಕುಳಿತು ಸ್ನೇಹಿತೆಯರೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ರಾಯ್‌ಪುರ: ಚತ್ತೀಸ್‍ಗಢದ ಪೊಲೀಸ್ ಅಧಿಕಾರಿಯೊಬ್ಬರ ಹೆಂಡತಿ, ಸರ್ಕಾರಿ ಕಾರಿನ ಬೊನೆಟ್‌ನಲ್ಲಿ ಕುಳಿತು ತನ್ನ ಹುಟ್ಟುಹಬ್ಬ(Birthday Celebration)ವನ್ನು ಆಚರಿಸುತ್ತಿರುವುದು ಮತ್ತು ಕೇಕ್‍ ಕತ್ತರಿಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇನ್ನು ಮಹಿಳೆಯನ್ನು ಹೆಸರು ಫರ್‌ಹೀನ್ ಖಾನ್ ಎಂದು ಗುರುತಿಸಲಾಗಿದೆ. ಈಕೆ ಜೆಂಜ್ಗಿರ್-ಚಂಪಾ ಜಿಲ್ಲೆಯ ಡಿಎಸ್‍ಪಿ ತಾಸ್ಲಿಂ ಅರೀಫ್ ಅವರ ಹೆಂಡತಿ ಎನ್ನಲಾಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಡಿಎಸ್‌ಪಿ ಅವರ ಹೆಂಡತಿ ಮತ್ತು ಆಕೆಯ ಸ್ನೇಹಿತೆಯರು ಸರ್ಕಾರಿ ವಾಹನದ ಹೊರಗೆ ನಿಂತು ರೀಲ್ ಮಾಡುವುದು ರೆಕಾರ್ಡ್ ಆಗಿದೆ. ಡಿಎಸ್‌ಪಿ ಹೆಂಡತಿ ಕಾರಿನ ಬಾನೆಟ್ ಮೇಲೆ ಕುಳಿತು ಬರ್ತ್‌ಡೇ ಆಚರಿಸಿಕೊಂಡಿದ್ದಾಳೆ.ಇನ್ನೊಂದು ವಿಡಿಯೊದಲ್ಲಿ, ಮಹಿಳೆ ಕಾರಿನ ಬಾನೆಟ್‍ನಲ್ಲಿ ಕುಳಿತು ಗಾಳಿಯಲ್ಲಿ ಸ್ನೋ ಸ್ಪ್ರೇ ಹಾರಿಸಿರುವುದು ಸೆರೆಯಾಗಿದೆ.

ಬರ್ತ್‌ಡೇ ವಿಡಿಯೊ ಇಲ್ಲಿದೆ ನೋಡಿ...



ನಿಯಮಗಳ ಪ್ರಕಾರ, ಸರ್ಕಾರದ ವಾಹನಗಳನ್ನು ಕೇವಲ ಅಧಿಕೃತ ಉದ್ದೇಶಗಳಿಗೆ ಮಾತ್ರ ಬಳಸಬೇಕು. ವೈಯುಕ್ತಿಕ ಬಳಕೆಗೆ ಸರ್ಕಾರಿ ವಾಹನವನ್ನು ಬಳಸುವುದು ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ. ಈ ವಿಚಾರದಲ್ಲಿ ಡಿಎಸ್‍ಪಿಯ ವಿರುದ್ಧ ಯಾವ ಕ್ರಮ ಜರುಗಿಸಿದರು ಎಂಬ ಬಗ್ಗೆ ಸೂಕ್ತ ಮಾಹಿತಿ ಇಲ್ಲ!

ಈ ಸುದ್ದಿಯನ್ನೂ ಓದಿ:Viral Video: ಪುರಿ ಜಗನ್ನಾಥ ದೇವಾಲಯದಲ್ಲಿ ನಡೆದ ಈ ಘಟನೆಗೂ ಏರ್ ಇಂಡಿಯಾ ವಿಮಾನ ಪತನಕ್ಕೂ ಏನು ಸಂಬಂಧ? ನೆಟ್ಟಿಗರ ವಾದವೇನು?

ಈ ಹಿಂದೆ ಕೂಡ ಇದೇ ರೀತಿಯ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಮಹಿಳೆಯೊಬ್ಬಳು ಜಲಂಧರ್‌ನಲ್ಲಿ ಪೊಲೀಸ್ ವಾಹನದ ಮೇಲೆ ಡ್ಯಾನ್ಸ್ ಮಾಡುತ್ತಾ ರೀಲ್ಸ್ ಮಾಡಿದ್ದಳು. ವಿಡಿಯೊದಲ್ಲಿ ಮಹಿಳೆ ಪೊಲೀಸರ ವಾಹನದ ಮುಂಭಾಗದಲ್ಲಿ ಕುಳಿತು, ಪ್ರಸಿದ್ಧ ಪಂಜಾಬಿ ಬೀಗ 'ಘೈಂಟ್ ಜಟ್ಟಿ'ಗೆ ಹೆಜ್ಜೆ ಹಾಕಿರುವುದು ಸೆರೆಯಾಗಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೂಡಲೇ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದ್ದು, ಹೀಗಾಗಿ ಸಂಬಂಧಪಟ್ಟ ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.