ಕೊಲಂಬಿಯಾದ ಕ್ರಿಸ್ಟಿಯನ್ ಮಾಂಟೆನೆಗ್ರೊ ಎಂಬ ವ್ಯಕ್ತಿ ನಟಾಲಿಯಾ ಎಂಬ ಗೊಂಬೆಯೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡು ಈ ಹಿಂದೆ ವೈರಲ್ ಆಗಿದ್ದರು. ಕ್ರಿಸ್ಟಿಯನ್ ಅವರಿಗೆ ಮೂರು ಮಕ್ಕಳಿದ್ದಾರೆ, ಎಲ್ಲರೂ ಆಟಿಕೆ ಗೊಂಬೆಯಿಂದ ಗರ್ಭಿಣಿಯಾಗಿ ಎಂದು ಹೇಳಿದ್ದಾರೆ. ಈ ವಿಚಿತ್ರ ಪ್ರಕರಣವನ್ನು ಹೊಂದಿರುವುದು ಕೇವಲ ಕ್ರಿಸ್ಟಿಯನ್ ಮಾಂಟೆನೆಗ್ರೊ ಮಾತ್ರವಲ್ಲ, ಮೀರಿವೊನ್ ರೋಚಾ ಮೊರೇಸ್ ಎಂಬ ಮಹಿಳೆಯೂ ಕೂಡ ಇದೇ ರೀತಿಯ ವಿಲಕ್ಷಣ ಪ್ರಕರಣವನ್ನು ಹೊಂದಿದ್ದಾರೆ. ಗೊಂಬೆಯನ್ನು ಮದುವೆಯಾಗಿರುವ ಮೊರೇಸ್, ನಾಲ್ಕು ಬಾರಿ ಗರ್ಭಿಣಿಯಾಗಿದ್ದರಂತೆ. ಈ ರೀತಿಯ ಸಂಬಂಧ ಅಪರೂಪವಾದರೂ, ಇದನ್ನು ಆಬ್ಜೆಕ್ಟೊಫಿಲಿಯಾ ಎಂದು ಕರೆಯಲಾಗುತ್ತದೆ.
ಏನಿದು ಆಬ್ಜೆಕ್ಟೋಫಿಲಿಯಾ ಎಂದರೆ?
ಆಬ್ಜೆಕ್ಟೋಫಿಲಿಯಾ ಇರುವ ಜನರು, ಜೀವಂತ ಇರುವ ಜನರ ಬದಲು ನಿರ್ಜೀವ ವಸ್ತುಗಳ ಕಡೆಗೆ ಬಲವಾದ ಭಾವನಾತ್ಮಕ, ಪ್ರಣಯ ಅಥವಾ ಲೈಂಗಿಕ ಆಕರ್ಷಣೆಯನ್ನು ಹೊಂದುತ್ತಾರೆ. ಈ ವಸ್ತುಗಳು ಆಟಿಕೆಗಳು, ಗೊಂಬೆ, ಗೋಡೆ, ಕಾರು ಅಥವಾ ಯಾವುದೇ ನಿರ್ಜೀವ ವಸ್ತುಗಳಾಗಿರಬಹುದು. ಇಂಥವರು ನಿರ್ಜೀವ ವಸ್ತುಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಆ ವಸ್ತುಗಳೊಂದಿಗೆ ತಮ್ಮ ಸಮಯ ಕಳೆಯುತ್ತಾರೆ, ಬಾಂಧವ್ಯ ಹೊಂದುತ್ತಾರೆ ಮತ್ತು ಭಾವನಾತ್ಮಕ ಬಂಧಗಳನ್ನು ರೂಪಿಸಿಕೊಳ್ಳುತ್ತಾರೆ. ಸಾಮಾನ್ಯ ದಂಪತಿಗಳಂತೆ, ಅವರು ಸಂತೋಷದ ಕ್ಷಣಗಳನ್ನು ಆನಂದಿಸುತ್ತಾರೆ. ಜೊತೆಗೆ ಅವುಗಳೊಂದಿಗೆ ಜಗಳವನ್ನೂ ಮಾಡುತ್ತಾರೆ.
ಆಬ್ಜೆಕ್ಟೋಫಿಲಿಯಾ ಇರುವವರು ಆ ವಸ್ತುವನ್ನೇ ನಿಜವಾಗಿಯೂ ಪ್ರೀತಿಸುತ್ತಿದ್ದಾರೆಂದು ತಿಳಿದಿರುತ್ತಾರೆ. ಅದರೊಂದಿಗೆ ಅವರಿಗೆ ಒಂದು ರೀತಿಯ ಉತ್ತಮ ಸಂಬಂಧವಿದೆ ಎಂದು ಅವರು ನಂಬುತ್ತಾರೆ. ಮೀರಿವೊನೆ ರೋಚಾ ಮೊರೇಸ್ ತನ್ನ ಗೊಂಬೆ ಪತಿ ಮಾರ್ಸೆಲೊದೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹಂಚಿಕೊಂಡರು. ಆತ (ಗೊಂಬೆ) ತನಗೆ ಮೋಸ ಮಾಡಿದ್ದಾನೆ, ಹೀಗಾಗಿ ಆತನೊಂದಿಗಿನ ದಾಂಪತ್ಯಕ್ಕೆ ಎಳ್ಳುನೀರು ಬಿಡುವ ಬಗ್ಗೆ ಚಿಂತಿಸುತ್ತಿರುವುದಾಗಿ ತಿಳಿಸಿದರು.
ಇನ್ನೂ ಮುಂದುವರಿದು ಮಾತನಾಡಿರುವ ಮೊರೇಸ್, ಈತ ಮೋಸ ಮಾಡುತ್ತಿರುವುದು ಇದೇ ಮೊದಲಲ್ಲ. ಆದರೆ ಕುಟುಂಬದ ಜೊತೆಗೆ ಒಟ್ಟಾಗಿ ಬದುಕಬೇಕೆಂಬ ದೃಷ್ಟಿಯಿಂದ ಆತನನ್ನು ಕ್ಷಮಿಸಿದ್ದೇನೆ. ಮಾರ್ಸೆಲೊ ಅವನು ಬದಲಾಗುತ್ತಾನೆ ಎಂದು ಹೇಳಿದನು. ಅವನು ಕೇವಲ ಗೊಂಬೆಯಲ್ಲ. ಅವನಿಗೆ ಎಲ್ಲ ತಿಳಿದಿದೆ ಎಂದು ಮೊರೇಸ್ ತಿಳಿಸಿದ್ದಾಳೆ.
ಕ್ರಿಸ್ಟಿಯನ್ ಮಾಂಟೆನೆಗ್ರೊ ಕುಟುಂಬ
ಇನ್ನು, ಕ್ರಿಸ್ಟಿಯನ್ ತನ್ನ ಗೊಂಬೆ ಸಂಗಾತಿ ನಟಾಲಿಯಾ ಜೊತೆಗಿನ ಬಾಂಧವ್ಯ ಇನ್ನೂ ಬಲವಾಗಿ ಮುಂದುವರೆದಿದೆ. ಈ ದಂಪತಿಗೆ ಈಗಾಗಲೇ ಮೂರು ಗೊಂಬೆ ಮಕ್ಕಳಿದ್ದಾರೆ. ಇತ್ತೀಚೆಗೆ ಸ್ಯಾಮಿ ಎಂಬ ಶಿಶುವಿನ ಆಗಮನವಾಗಿದೆ. ವರದಿಯ ಪ್ರಕಾರ, ಕ್ರಿಸ್ಟಿಯನ್ ಒಬ್ಬಂಟಿಯಾಗಿರಲು ಬೇಸತ್ತರು. ಇದು ಗೊಂಬೆಯೊಂದಿಗೆ ಸಂಬಂಧವನ್ನು ಪ್ರಾರಂಭಿಸಲು ಕಾರಣವಾಯಿತು. 2023ರಲ್ಲಿ ಆಟಿಕೆ ಗೊಂಬೆಯೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ಆಬ್ಜೆಕ್ಟೋಫಿಲಿಯಾ ಇತರ ಪ್ರಕರಣಗಳು:
- ಸ್ವೀಡನ್‌ನ ಈಜಾ-ರೀಟ್ಟಾ ಎಂಬಾಕೆ ಏಳು ವರ್ಷದವಳಿದ್ದಾಗಿನಿಂದ ಬರ್ಲಿನ್ ಗೋಡೆಯ ಆಕಾರಕ್ಕೆ ಆಕರ್ಷಿತಳಾಗಿ, ನಂತರ ಅದನ್ನೇ ಮದುವೆಯಾದಳು.
- ಎರಿಕಾ ಐಫೆಲ್ ಎಂಬಾಕೆ ಐಫೆಲ್ ಟವರ್‌ನೊಂದಿಗೆ ಪ್ರೀತಿಯಲ್ಲಿ ಬಿದ್ದಳು. ಅದಕ್ಕೂ ಮುನ್ನ ಎಫ್-15 ಫೈಟರ್ ಜೆಟ್‍ನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು.
- ಇಂಗ್ಲೆಂಡ್‌ನ ಅಮಂಡಾ ಲಿಬರ್ಟಿ ಎಂಬಾಕೆ ಗೂಡುದೀಪದೊಂದಿಗೆ ಸಂಬಂಧ ಹೊಂದಿದ್ದಾಳೆ.
- ಆಸ್ಟ್ರೇಲಿಯಾದ ಕಲಾವಿದೆ ಜೋಡಿ ರೋಸ್, ಫ್ರಾನ್ಸ್‌ನಲ್ಲಿ ಶತಮಾನಗಳಷ್ಟು ಹಳೆಯದಾದ ಸೇತುವೆಯೊಂದಿಗೆ ಮದುವೆಯಾದಳು.
- ದಕ್ಷಿಣ ಕೊರಿಯಾದಲ್ಲಿ, ಲೀ ಜಿನ್-ಗ್ಯು ತನ್ನ ಅನಿಮೆ ದಿಂಬಿನ ಜೊತೆ ಮದುವೆಯಾದಳು.