ವಾರ್ಸಾ: ನಿಧಿ ಹುಡುಕಾಟದ (Treasure Hunt) ವೇಳೆ 1,500 ವರ್ಷಗಳಷ್ಟು ಹಳೆಯದಾದ ಚಿನ್ನದ ಹಾರ ಪತ್ತೆಯಾಗಿದೆ. ಪೋಲೆಂಡ್‌ನ ಗ್ರೋಡ್ಜಿಕ್ ಅರಣ್ಯದಲ್ಲಿ ಇತಿಹಾಸ ತಜ್ಞರು ನಿಧಿ ಹುಡುಕಾಟ ನಡೆಸಿದರು. ಈ ವೇಳೆ ಚಿನ್ನದ ಹಾರ (Gold Necklace) ಪತ್ತೆಯಾಗಿದೆ. ಡೆನಾರ್ ಕಾಲಿಸ್ಜ್ ಎಂದು ಕರೆಯಲ್ಪಡುವ ಸಂಶೋಧಕರ ತಂಡವು ಜೂನ್‌ನಲ್ಲಿ ಕಾಲಿಸ್ಜ್ ನಗರದ ಬಳಿಯ ಕಾಡಿಗೆ ತೆರಳಿತ್ತು. ಕೇವಲ ಐದು ವಾರಗಳಲ್ಲಿ ಶತಮಾನಗಳಷ್ಟು ಹಳೆಯ ಕಲಾಕೃತಿಗಳು ದೊರೆತವು.
ಸಂಶೋಧಕರಿಗೆ ಮೊದಲು ಸಿಕ್ಕಿದ್ದು ರೋಮನ್ ಅವಧಿಯ ಪ್ರಾಚೀನ ಸಮಾಧಿ. ಒಳಗೆ ಒಬ್ಬ ಯೋಧನ ಅವಶೇಷಗಳು, ಅವನ ಈಟಿ ಮತ್ತು ಗುರಾಣಿಯ ಭಾಗಗಳು ಇದ್ದವು. ನಂತರ, ತಂಡವು 11ನೇ ಶತಮಾನದ ನಾಣ್ಯ ಮತ್ತು ಸಣ್ಣ ಮಣ್ಣಿನ ಮಡಕೆಯನ್ನು ಪತ್ತೆಹಚ್ಚಿತು. ಕಾಲಿಸ್ಜ್ ವಿಶ್ವವಿದ್ಯಾಲಯದಲ್ಲಿ ಮಡಕೆಯನ್ನು ತೆರೆದಾಗ, ಅದರೊಳಗೆ 631 ನಾಣ್ಯಗಳಿರುವುದು ಕಂಡುಬಂದಿತು. ಈ ಅಂಶವು ಸಂಶೋಧಕರನ್ನು ಬೆರಗುಗೊಳಿಸಿತು. ಜೂನ್ ಅಂತ್ಯದ ವೇಳೆಗೆ, ಹೆಚ್ಚಿನ ನಾಣ್ಯಗಳನ್ನು ಹೊಂದಿರುವ ಮತ್ತೊಂದು ಮಣ್ಣಿನ ಪಾತ್ರೆ ಸಿಕ್ಕಿತು.
ಇದನ್ನೂ ಓದಿ: Viral Video: ಲಬುಬು ಗೊಂಬೆಗೆ ಪೂಜೆ-ಪುನಸ್ಕಾರ ಮಾಡಿದ ಮಹಿಳೆ; ಇಲ್ಲಿದೆ ವಿಡಿಯೊ
A 222-grams gold necklace, possibly of Goth origin, unearthed last week in Poland [1392x3013] pic.twitter.com/rZojIpMC4k
— Historyland (@HistorylandHQ) August 13, 2025
ಜುಲೈ 12ರಂದು ಗುಂಪಿನ ಸದಸ್ಯ ಮಾಟೆಯುಸ್ಜ್ ಅವರಿಗೆ ಹಳದಿ ಲೋಹವೊಂದು ದೊರೆತಿದೆ. ಮೊದಲಿಗೆ, ಅದು ಬಳೆ ಇರಬಹುದು ಎಂದು ಅವರು ಭಾವಿಸಿದ್ದರು. ನಂತರ ತಜ್ಞರು ಅದು ಐದನೇ ಶತಮಾನದ ಶುದ್ಧ ಚಿನ್ನದ ಹಾರ ಎಂದು ದೃಢಪಡಿಸಿದರು. ಇದು 222 ಗ್ರಾಂ ತೂಕವಿತ್ತು. ಹಾರವನ್ನು ಮಡಚಿ ಮಡಕೆಯಲ್ಲಿ ಸಂಗ್ರಹಿಸಲಾಗಿತ್ತು. ತಜ್ಞರ ಪ್ರಕಾರ, ಈ ಕಲಾಕೃತಿಯು ಒಂದು ಕಾಲದಲ್ಲಿ ಗೋಥಿಕ್ ಜನರಿಗೆ ಸೇರಿತ್ತು. ಇದು ಪೋಲೆಂಡ್‌ನ ಕೆಲವು ಭಾಗಗಳಲ್ಲಿ ವಾಸಿಸುತ್ತಿದ್ದ ಜರ್ಮನಿಕ್ ಸಮುದಾಯವಾಗಿತ್ತು.
ಸ್ಕ್ಯಾಂಡಿನೇವಿಯಾದಲ್ಲಿ ಇದೇ ರೀತಿಯ ಗೋಥಿಕ್ ನೆಕ್ಲೇಸ್‌ಗಳು ದೊರೆತಿವೆ. ಈ ಚಿನ್ನದ ಹಾರವನ್ನು ಕಾಲಿಸ್ಜ್ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತದೆ. ನಾಣ್ಯಗಳು, ಆಯುಧಗಳು ಮತ್ತು ಸಮಾಧಿ ಅವಶೇಷಗಳನ್ನು ಸಹ ಪ್ರದರ್ಶಿಸಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ: Stray Dogs: ಬೀದಿ ನಾಯಿಗಳೇ ಇಲ್ಲದ ರಾಷ್ಟ್ರ ಯಾವುದು ಗೊತ್ತಾ? ಈ ದೇಶದಲ್ಲಿ ಶ್ವಾನಗಳ ರಕ್ಷಣೆಗಿದೆ ಪೊಲೀಸ್ ಪಡೆ!