ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

200 ಕೆಜಿ ತೂಕದ ಅನಾರೋಗ್ಯ ಪೀಡಿತ ಹಸುವನ್ನು ಬೆನ್ನಿನ ಮೇಲೆ ಹೊತ್ತೊಯ್ದ ಸಹೋದರರು; ಇಲ್ಲಿದೆ ವಿಡಿಯೊ

Two Brothers Carry Cow: ಅನಾರೋಗ್ಯ ಪೀಡಿತ ಹಸುವನ್ನು ಇಬ್ಬರು ವ್ಯಕ್ತಿಗಳು ಬೆನ್ನಿನ ಮೇಲೆ ಹೊತ್ತುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದ ಘಟನೆಯ ವಿಡಿಯೊ ವೈರಲ್ ಆಗಿದೆ. ಈ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಶಿಲ್ಲೈ ವಿಧಾನಸಭಾ ಕ್ಷೇತ್ರದ ಕ್ಯಾರಿ ಗುಂಡಾ ಪಂಚಾಯತ್‌ನಲ್ಲಿ ನಡೆದಿದೆ.

ಶಿಮ್ಲಾ: ಸುಮಾರು 200 ಕೆಜಿ ತೂಕದ ಅನಾರೋಗ್ಯ ಪೀಡಿತ ಹಸುವನ್ನು ಇಬ್ಬರು ವ್ಯಕ್ತಿಗಳು ಬೆನ್ನಿನ ಮೇಲೆ ಹೊತ್ತುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದದ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಶಿಲ್ಲೈ ವಿಧಾನಸಭಾ ಕ್ಷೇತ್ರದ ಕ್ಯಾರಿ ಗುಂಡಾ ಪಂಚಾಯತ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ (Viral Video).

ಗ್ರಾಮದ ದೀಪ್ ರಾಮ್ ಶರ್ಮಾ ಅವರ ಹಸು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಹಸುವಿನ ಜೀವ ಉಳಿಸಲು ಸಹೋದರರಾದ ದಯಾರಾಮ್ ಮತ್ತು ಲಾಲ್ ಸಿಂಗ್ ಇಬ್ಬರೂ ಹಸುವನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಏಕೆಂದರೆ ಆಸ್ಪತ್ರೆಗೆ ತಲುಪುವ ಏಕೈಕ ಮಾರ್ಗವೆಂದರೆ ಪರ್ವತ ಪ್ರದೇಶದ ಮೂಲಕ ಹೋಗುವುದು. ಹೀಗಾಗಿ ಹಸುಗಳನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ದರು.

ವರದಿಯ ಪ್ರಕಾರ, ದಯಾರಾಮ್ ಮತ್ತು ಲಾಲ್ ಸಿಂಗ್ ಇತರ ಗ್ರಾಮಸ್ಥರ ಸಹಾಯದಿಂದ ಆಸ್ಪತ್ರೆಗೆ ತಲುಪಲು ಹಸುವನ್ನು ಬೆನ್ನಿನ ಮೇಲೆ ಹೊತ್ತುಕೊಂಡು 3 ಕಿ.ಮೀ. ದೂರ ಸಾಗಿದರು. ಘಟನೆಯ ವಿಡಿಯೊ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಸುವನ್ನು ಉಳಿಸಲು ಅವರು ಮಾಡಿದ ಪ್ರಯತ್ನಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊವನ್ನು @streetdogsofbombay ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೊ ವೀಕ್ಷಿಸಿ:

ಇಬ್ಬರು ಸಹೋದರರು... ಒಂದು ಅನಾರೋಗ್ಯ ಪೀಡಿತ ಹಸು... ಕಡಿದಾದ ಪರ್ವತ ಪ್ರದೇಶದ ಮೂಲಕ ಕಾಲ್ನಡಿಗೆಯಲ್ಲಿ 3 ಕಿ.ಮೀ. ಪ್ರಯಾಣ ಎಂದು ಪೋಸ್ಟ್‌ಗೆ ಕ್ಯಾಪ್ಶನ್‌ ಬರೆಯಲಾಗಿದೆ. ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಕ್ಯಾರಿ ಎಂಬ ದೂರದ ಹಳ್ಳಿಯಲ್ಲಿ, ಒಬ್ಬ ವೃದ್ಧ ಮತ್ತು ಅವನ ಸಹೋದರ 200 ಕೆಜಿ ತೂಕದ ಹಸುವನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಹೋದರು. ಅವರು ಸಹಾಯಕ್ಕಾಗಿ ಯಾರನ್ನೂ ಕಾಯಲಿಲ್ಲ. ಅವರು ದೂರು ನೀಡಲಿಲ್ಲ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಬಳಕೆದಾರರು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.