ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಿಲಾಡಿ ಜೋಡಿ!ಗ್ರಾಹಕರ ಸೋಗಿನಲ್ಲಿ 6ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿದ್ರು- ವಿಡಿಯೊ ನೋಡಿ

Stealing gold necklace: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲೂ ಚಾಣಾಕ್ಷತನದಿಂದ ಚಿನ್ನ ಎಸಗಿರುವ ಪ್ರಕರಣ ಒಂದು ದಾಖಲಾಗಿದೆ. ಆಭರಣ ಮಳಿಗೆಗೆ ಗ್ರಾಹಕರಾಗಿ ಚಿನ್ನ‌‌ ಖರೀದಿ ಮಾಡಲು ಬಂದ ದಂಪತಿಗಳು ಸುಮಾರು 6 ಲಕ್ಷ ಮೌಲ್ಯದ ಚಿನ್ನದ ನೆಕ್ಲೇಸ್ ಅನ್ನು ಕಳ್ಳತನ ಮಾಡಿದ್ದಾರೆ. ಈ ಕೃತ್ಯದ ಸಂಪೂರ್ಣ ದೃಶ್ಯವು ಮಳಿಗೆಯ ಸಿಸಿಟಿವಿ ‌ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

UP couple caught on CCTV stealing gold necklace

ಲಖನೌ: ಇತ್ತೀಚೆಗೆ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲೂ ಚಾಣಾಕ್ಷತನದಿಂದ ಚಿನ್ನ ಎಸಗಿರುವ ಪ್ರಕರಣ ಒಂದು ದಾಖಲಾಗಿದೆ. ಆಭರಣ ಮಳಿಗೆಗೆ ಗ್ರಾಹಕರಾಗಿ ಚಿನ್ನ‌‌ ಖರೀದಿ ಮಾಡಲು ಬಂದ ದಂಪತಿಗಳು ಸುಮಾರು 6 ಲಕ್ಷ ಮೌಲ್ಯದ ಚಿನ್ನದ ನೆಕ್ಲೇಸ್ ಅನ್ನು ಕಳ್ಳತನ ಮಾಡಿದ್ದಾರೆ. ಈ ಕೃತ್ಯದ ಸಂಪೂರ್ಣ ದೃಶ್ಯವು ಮಳಿಗೆಯ ಸಿಸಿಟಿವಿ ‌ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.

ಬುಲಂದ್‌ಶಹರ್‌ನ ಆಭರಣ ಶೋರೂಂನಿಂದ ದಂಪತಿಗಳು ಚಿನ್ನದ ಹಾರವನ್ನು ಕಳ್ಳತನ ಮಾಡಿದ್ದಾರೆ.‌ ಆರೋಪಿಗಳನ್ನು ಶೀಘ್ರದಲ್ಲೇ ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿ ಗಳೊಂದಿಗೆ ತನಿಖೆ ನಡೆಸುತ್ತಿದ್ದಾರೆ. ದಂಪತಿಗಳು ಮಳಿಗೆಗೆ ಬಂದು ಆಭರಣಗಳನ್ನು ಖರೀದಿ ಮಾಡುವ ನೆಪದಲ್ಲಿ ಚಿನ್ನ ಕಳವು ಮಾಡಿದ್ದಾರೆ. ವಿಡಿಯೊದಲ್ಲಿ ಮಹಿಳೆಯು ಚಾಣಾಕ್ಷತನದಿಂದ ಒಂದು ಚಿನ್ನದ ನೆಕ್ಲೇಸ್ ಅನ್ನು ತನ್ನ ಸೀರೆಯೊಳಗೆ ಸಿಕ್ಕಿಸಿ ಮರೆಮಾಚಿರುವುದನ್ನು ಕಾಣಬಹುದು. ನಂತರ ಇಬ್ಬರೂ ಏನೂ ಆಗಿಲ್ಲ ಎಂಬಂತೆ ಮಳಿಗೆಯಿಂದ ಹೊರ ಹೋಗಿದ್ದಾರೆ.



ಆಭರಣ ಮಳಿಗೆಯ ಮಾಲೀಕರಾದ ಗೌರವ್ ಪಂಡಿತ್ ದಿನದ ಕೊನೆಯಲ್ಲಿ ಸ್ಟಾಕ್ ಪರಿಶೀಲನೆ ಮಾಡುವಾಗ ಆರು ಗ್ರಾಮ್ ಚಿನ್ನದ ಕೊರತೆ ಇರುವುದು ಗಮನಕ್ಕೆ ಬಂದಿದೆ. ತಕ್ಷಣ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಕಳವಾದ ಚಿನ್ನದ ನೆಕ್ಲೇಸ್‌ನ ಮೌಲ್ಯವು ಸುಮಾರು ‌6 ಲಕ್ಷ ಎಂದು ಅಂದಾಜಿಸಲಾಗಿದೆ. ಮಾಲೀಕ ಗೌರವ್ ಪಂಡಿತ್ ಅವರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನು ಓದಿ:Viral News: 35 ವರ್ಷದ ಮಹಿಳೆ ಜೊತೆ ಮದುವೆ; ಹನಿಮೂನ್‌ಗೂ ಮೊದಲೇ ಸಾವನ್ನಪ್ಪಿದ 75ರ ವೃದ್ಧ!

ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು ಸಿಸಿಟಿವಿ ದೃಶ್ಯಗಳನ್ನು ಕೂಲಂಕುಷ ವಾಗಿ ಪರಿಶೀಲಿಸಲಾಗುತ್ತಿದೆ. ಕಳ್ಳತನ ಮಾಡಿದ ದಂಪತಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಸದ್ಯ ಈ ಕಳ್ಳತನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ‌ ವೈರಲ್ ಆಗಿದ್ದು ನೆಟ್ಟಿಗರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.