ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವರದಕ್ಷಿಣೆಗಾಗಿ ತನ್ನ 8 ತಿಂಗಳ ಮಗುವನ್ನು ತಲೆಕೆಳಗಾಗಿ ನೇತು ಹಾಕಿ ಹಳ್ಳಿಯಾದ್ಯಂತ ಮೆರವಣಿಗೆ ಮಾಡಿದ ಭೂಪ; ಎದೆ ಝಲ್ಲೆನಿಸುವ ವಿಡಿಯೊ ವೈರಲ್‌

Viral News: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಸಂಜು ಎಂಬಾತ ಪತ್ನಿ ಮತ್ತು ಆಕೆಯ ಕುಟುಂಬದವರಿಂದ ವರದಕ್ಷಿಣೆ ಪಡೆಯುವ ಸಲುವಾಗಿ ತನ್ನ 8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದುಕೊಂಡು ಹಳ್ಳಿಯ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾನೆ. ಈ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.

ಲಖನೌ: ಎಂಟು ತಿಂಗಳ ಮಗುವನ್ನು ತಲೆಕೆಳಗೆ ಮಾಡಿ ಹಿಡಿದುಕೊಂಡು ವ್ಯಕ್ತಿಯೊಬ್ಬ ಗ್ರಾಮದಲ್ಲಿ ಮೆರವಣಿಗೆ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar pradesh) ರಾಂಪುರದಲ್ಲಿ (Rampur) ನಡೆದಿದೆ. ಮಗು ಗಾಯಗೊಂಡಿದ್ದು ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral News) ಆಗಿದೆ. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪತ್ನಿ ಮತ್ತು ಆಕೆಯ ಕುಟುಂಬದಿಂದ ವರದಕ್ಷಿಣೆ (Dowry demand) ಪಡೆಯಲು ಆತ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.

ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಸಂಜು ಎಂಬಾತ ಪತ್ನಿ ಮತ್ತು ಆಕೆಯ ಕುಟುಂಬದವರಿಂದ ವರದಕ್ಷಿಣೆ ಪಡೆಯುವ ಸಲುವಾಗಿ ತನ್ನ 8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದುಕೊಂಡು ಹಳ್ಳಿಯ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾನೆ. ಈ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.



ವರದಕ್ಷಿಣೆಗಾಗಿ ಪತ್ನಿಯೊಂದಿಗೆ ನಿರಂತರ ಜಗಳ ಮಾಡುತ್ತಿದ್ದ ಸಂಜು ಬೇಡಿಕೆಯನ್ನು ಆಕೆ ಒಪ್ಪದೇ ಇದ್ದಾಗ ಈ ಕೃತ್ಯ ಎಸಿದ್ದಾನೆ. ಸಂಜು ತನ್ನ ಪತ್ನಿಯಿಂದ ಪದೇ ಪದೆ ಹಣ ಮತ್ತು ಕಾರಿಗಾಗಿ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಜು ಪತ್ನಿ ಸುಮನ್, ʼʼ2023ರಲ್ಲಿ ನಮ್ಮ ಮದುವೆಯಾಗಿದೆ. ಮದುವೆಯಾದ ಬಳಿಕ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಗಂಡನ ಮನೆಯವರೆಲ್ಲರೂ ನನ್ನಲ್ಲಿ 2 ಲಕ್ಷ ರೂ. ಮತ್ತು ಕಾರು ತಂದು ಕೊಡುವಂತೆ ಪೀಡಿಸಿ ನನ್ನನ್ನು ಥಳಿಸುತ್ತಿದ್ದರುʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಹಾಂಗ್‍ಕಾಂಗ್ ನಗರದ ಸ್ವಚ್ಛತೆಯ ಬಗ್ಗೆ ಭಾರತೀಯನ ಪ್ರಾಮಾಣಿಕ ನಿಲುವು; ವಿಡಿಯೊ ಇಲ್ಲಿದೆ

ʼʼಕೇವಲ 8 ತಿಂಗಳ ಮಗುವಿದೆ. ಯಾರೂ ನನ್ನ ಮಾತನ್ನು ಕೇಳುತ್ತಿಲ್ಲ. ಆತ ವರದಕ್ಷಿಣೆಗಾಗಿ ಮಗುವನ್ನು ತಲೆಕೆಳಗಾಗಿ ನೇತು ಹಾಕಿ ಹಳ್ಳಿಯಾದ್ಯಂತ ಮೆರವಣಿಗೆ ಮಾಡಿದ್ದಾನೆ. ನನ್ನ ಬಳಿ ಹಣವಿಲ್ಲ. ಎಲ್ಲಿಂದ ತರಲಿ? ಮಗು ಈಗ ಅನಾರೋಗ್ಯದಿಂದ ಬಳಲುತ್ತಿದೆ. ಸೊಂಟದ ಕೀಲು ಮೂಳೆ ಛಿದ್ರಗೊಂಡಿದೆ. ಮಗುವಿಗೆ ಚಿಕಿತ್ಸೆ ನೀಡಬೇಕಿದೆ. ನಾವು ಬಡವರು. ಏನು ಮಾಡಬಹುದು? ಆತನ ಎಲ್ಲ ಕುಟುಂಬ ಸದಸ್ಯರನ್ನು ಜೈಲಿಗೆ ಹಾಕಬೇಕೆಂದು ನಾನು ಬಯಸುತ್ತೇನೆʼʼ ಎಂದು ಸುಮನ್ ಹೇಳಿರುವುದಾಗಿ ಮಿಲಕ್ ಖಾನಮ್ ಠಾಣೆಯ ಉಸ್ತುವಾರಿ ನಿಶಾ ಖತಾನಾ ತಿಳಿಸಿದ್ದಾರೆ.

ʼʼಸಂಜು ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಆತನನ್ನು ಸಮಾಲೋಚನಾ ಕೇಂದ್ರಕ್ಕೆ ಕಳುಹಿಸಲಾಗುವುದುʼʼ ಎಂದು ಅವರು ಹೇಳಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author