ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಯುವತಿಗೆ ಕಿಸ್‌ ಕೊಟ್ಟ ಶ್ವಾನ... ವಿಡಿಯೊ ನೋಡಿ ನೆಟ್ಟಿಗರು ಫುಲ್ ಖುಷ್‌!

Dog Sweet Kiss to Girl: ಶ್ವಾನವೊಂದು ಯುವತಿಯೊಬ್ಬಳಿಗೆ ಮುತ್ತು ನೀಡುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಡಾಗೇಶ್ ಅಣ್ಣ, ನಿಮ್ಮ ಭಾವನೆಗಳನ್ನು ನಿಯಂತ್ರಿಸಿ ಎಂಬ ಹಾಸ್ಯಮಯ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

ನವದೆಹಲಿ: ಮನುಷ್ಯರು ಮಾತ್ರವಲ್ಲ, ನಾಯಿಗಳು ಸಹ ಅನಿರೀಕ್ಷಿತ ಸನ್ನೆಗಳ ಮೂಲಕ ಗಮನ ಸೆಳೆಯಬಹುದು. ಇದೀಗ ಶ್ವಾನವೊಂದು ಯುವತಿಯೊಬ್ಬಳಿಗೆ ಮುತ್ತು ನೀಡುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಡಾಗೇಶ್ ಅಣ್ಣ, ನಿಮ್ಮ ಭಾವನೆಗಳನ್ನು ನಿಯಂತ್ರಿಸಿ ಎಂಬ ಹಾಸ್ಯಮಯ ಶೀರ್ಷಿಕೆಯೊಂದಿಗೆ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social media) ನಗು ಮತ್ತು ಹೃದಯಸ್ಪರ್ಶಿ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ, ರಸ್ತೆಬದಿಯಲ್ಲಿ ಕುಳಿತಿರುವ ಯುವತಿಯೊಬ್ಬಳು ನಾಯಿಯನ್ನು ಪ್ರೀತಿಯಿಂದ ಮುದ್ದಿಸುವುದನ್ನು ಕಾಣಬಹುದು. ಅವಳು ಶ್ವಾನದ ಮೈಯನ್ನು ಪ್ರೀತಿಯಿಂದ ಸವರುತ್ತಾ ಮುದ್ದಿಸಿದ್ದಾಳೆ. ನಾಯಿ ಕೂಡ ಅವಳ ಪ್ರೀತಿಗೆ ಮನಸೋತಿದೆ. ಈ ವೇಳೆ ಅವಳ ಹೃದಯದಲ್ಲಿ ಯಾವುದೇ ಕಲ್ಮಶವಿಲ್ಲ ಎಂಬುದನ್ನು ತೋರಿಸಿದೆ. ವಿಡಿಯೊದಲ್ಲಿ ಪ್ರಾಣಿ ಪ್ರೀತಿ ಎದ್ದು ಕಾಣುತ್ತದೆ. ಈ ವಿಡಿಯೊ ನೋಡುತ್ತಿದ್ದರೆ ಖಂಡಿತಾ ಮನಸ್ಸಿಗೆ ಸಂತೋಷವನ್ನುಂಟು ಮಾಡುತ್ತದೆ.

ವಿಡಿಯೊದಲ್ಲಿ ಎಲ್ಲವೂ ಸುಂದರ ಮತ್ತು ಮುದ್ದಾಗಿ ಕಾಣುತ್ತಿದ್ದಾಗ, ಇದ್ದಕ್ಕಿದ್ದಂತೆ ಮತ್ತೊಂದು ಕಪ್ಪು ಶ್ವಾನ ಎಂಟ್ರಿ ಕೊಟ್ಟಿದೆ. ಅದರ ಪ್ರವೇಶ ಹೇಗಿತ್ತು ಅಂದ್ರೆ ಖಂಡಿತ ಅಚ್ಚರಿ ಪಡುವಿರಿ. ಬಾಲ ಅಲ್ಲಾಡಿಸುತ್ತಾ ಬಂದ ನಾಯಿಯು ಆಕೆಯ ಭುಜದ ಮೇಲೆ ಪ್ರೀತಿಯಿಂದ ತನ್ನ ಕೈಗಳನ್ನಿಟ್ಟಿದೆ. ಇದು ಅವಳಿಗೆ ನಗು ತರಿಸಿದೆ. ಮಾತು ಬಾರದಿದ್ದರೂ, ಸನ್ನೆಯ ಮೂಲಕ, ಈಗ ನನ್ನ ಸರದಿ ಎಂದು ಹೇಳುವಂತೆ ಮಾಡಿತು.

ವಿಡಿಯೊ ವೀಕ್ಷಿಸಿ



ಮುಂದೆ ಏನಾಯಿತು ಎಂಬುದನ್ನು ನೋಡಿದರೆ ಖಂಡಿತಾ ಬಿದ್ದು ಬಿದ್ದು ನಗೋದು ಗ್ಯಾರಂಟಿ. ಈ ವಿಡಿಯೊ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಯುವತಿಯು ಕ್ಯಾಮರಾ ಹಿಂದಿರುವವರ ಜೊತೆ ಮಾತನಾಡುತ್ತಿದ್ದಂತೆ ಆ ಕಪ್ಪು ಬಣ್ಣದ ಶ್ವಾನವು, ಮುಂದೆ ಬಾಗಿ ಅವಳ ತುಟಿಗೆ ಮುತ್ತು ನೀಡಿತು. ಈ ಮುಗ್ಧತೆಯ ಕ್ಷಣವು ನಿಜಕ್ಕೂ ರೋಮಾಂಚನಕಾರಿಯಾಗಿದೆ. ಈ ವೇಳೆ ಯುವತಿಯ ಮುಖಭಾವರ ಮಾತ್ರ ಅಮೂಲ್ಯವಾಗಿತ್ತು. ಆ ಕ್ಷಣವು ಕ್ಯಾಮರಾದಲ್ಲಿ ಸುಂದರವಾಗಿ ಸೆರೆಹಿಡಿಯಲ್ಪಟ್ಟಿದೆ.

ಸಾಮಾಜಿಕ ಮಾಧ್ಯಮದಲ್ಲಿ ಜೋಕ್‌ಗಳು ಮತ್ತು ಪ್ರತಿಕ್ರಿಯೆಗಳಿಂದ ಕಾಮೆಂಟ್ ವಿಭಾಗವು ತುಂಬಿತ್ತು. ಒಬ್ಬ ಬಳಕೆದಾರರು ಅಯ್ಯೋ ಡಾಗೇಶ್ ಅಣ್ಣ, ಆಕೆಯ ತಂದೆ-ತಾಯಿ ಇದಕ್ಕೆ ಒಪ್ಪೋದಿಲ್ಲವಂತೆ ಎಂದು ತಮಾಷೆ ಮಾಡಿದ್ದಾರೆ. ಡಾಗೇಶ್ ಅಣ್ಣನ ಹವಾ ನೋಡಿ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಡಾಗೇಶ್‍ಗೆ ನಿಯಂತ್ರಣ ತಪ್ಪಿರುವ ಎಲ್ಲಾ ಲಕ್ಷಣಗಳೂ ಕಾಣಿಸಿವೆ ಎಂದು ಮಗದೊಬ್ಬರು ಹಾಸ್ಯಚಟಾಕಿ ಹಾರಿಸಿದ್ದಾರೆ.

ಇದರ ಮಧ್ಯೆ, ಇತರರು ಆ ಯುವತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅದು ಅವಳಿಗೆ ರೇಬೀಸ್ ಬರಲು ಕಾರಣವಾಗಬಹುದು ಎಂದು ಭೀತಿಗೊಂಡರು. ವಿಡಿಯೊದಲ್ಲಿರುವ ಕಪ್ಪು ನಾಯಿಗೆ ರೇಬೀಸ್ ಇದ್ದರೆ, ಹುಡುಗಿಗೂ ಅದು ಬರುವ ಸಾಧ್ಯತೆ ಇದೆಯೇ? ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಮುದ್ದಾಗಿದೆ, ಆದರೆ ಅದೇ ಸಮಯದಲ್ಲಿ, ಆ ನಾಯಿಗೆ ಲಸಿಕೆ ಹಾಕಿರಬಹುದು ಎಂದು ನಾನು ಭಾವಿಸುತ್ತೇನೆ ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ಶ್ವಾನದ ಮುಗ್ಧತೆ ನೆಟ್ಟಿಗರ ಮನಗೆದ್ದಿರುವುದಂತೂ ಸುಳ್ಳಲ್ಲ.

ಇದನ್ನೂ ಓದಿ: Viral Video: ಪವನ್‌ ಕಲ್ಯಾಣ್‌ ಸಿನಿಮಾ ಪ್ರದರ್ಶನ ವೇಳೆ ಅಭಿಮಾನಿಗಳ ಹುಚ್ಚಾಟ; ಒಂದೆಡೆ ಲಾಂಗ್ ಹಿಡಿದರೆ, ಇನ್ನೊಂದೆಡೆ ಪರದೆ ಹರಿದು ರಂಪಾಟ!