ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬರೋಬ್ಬರಿ 300 ಮೀಟರ್ ಎತ್ತರದಿಂದ ಕಂದಕಕ್ಕೆ ಬಿದ್ದ ಬುಲ್ಡೋಜರ್- ಇಲ್ಲಿದೆ ಭಯಾನಕ ವಿಡಿಯೊ

Bulldozer accident: ಹಿಮಾಚಲ ಪ್ರದೇಶದ (Himachal Pradesh) ಶಿಮ್ಲಾದಲ್ಲಿ (Shimla) ತೀವ್ರ ಮಳೆಯ (Rain) ನಡುವೆ ಬುಲ್ಡೋಜರ್‌ವೊಂದು ಸುಮಾರು 300 ಮೀಟರ್ ಆಳದ ಕಂದಕಕ್ಕೆ ಬೀಳುತ್ತಿರುವ ಭಯಾನಕ ವಿಡಿಯೊವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ತೀವ್ರ ಗಾಯಗೊಂಡ ಬುಲ್ಡೋಜರ್ ಚಾಲಕ ಸಾವನ್ನಪ್ಪಿದ್ದಾನೆ.

ಶಿಮ್ಲಾ: ತೀವ್ರ ಮಳೆಯ (Rain) ನಡುವೆ ಬುಲ್ಡೋಜರ್‌ವೊಂದು (Bulldozer accident) ಸುಮಾರು 300 ಮೀಟರ್ ಆಳದ ಕಂದಕಕ್ಕೆ ಬೀಳುತ್ತಿರುವ ಭಯಾನಕ ವಿಡಿಯೊವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಮಾಚಲ ಪ್ರದೇಶದ (Himachal Pradesh) ಶಿಮ್ಲಾದಲ್ಲಿ (Shimla) ಮಳೆಯ ನಡುವೆಯೇ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಬುಲ್ಡೋಜರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಪರ್ವತದ ಇಳಿಜಾರಿನಲ್ಲಿ ಸುಮಾರು 300 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ತೀವ್ರ ಗಾಯಗೊಂಡ ಬುಲ್ಡೋಜರ್ ಚಾಲಕ ಸಾವನ್ನಪ್ಪಿದ್ದಾನೆ.

ಈ ಘಟನೆಯ ವಿಡಿಯೊವನ್ನು ದೂರದಲ್ಲಿ ನೋಡುತ್ತಿದ್ದವರು ಸೆರೆಹಿಡಿದಿದ್ದಾರೆ. ಇದರಲ್ಲಿ ಜಬ್ಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ 5 ರ ಕಡಿದಾದ ಪರ್ವತದ ಇಳಿಜಾರಿನಲ್ಲಿ ಜೆಸಿಬಿ ಬೀಳುತ್ತಿರುವುದನ್ನು ಕಾಣಬಹುದು. ಮಳೆಯಿಂದಾಗಿ ರಸ್ತೆ ನಿರ್ಬಂಧವಾಗಿದ್ದು, ಅದನ್ನು ತೆರೆಯುವ ಕಾರ್ಯ ನಡೆಸುತ್ತಿದ್ದ ಜೆಸಿಬಿಯ ಮೇಲೆ ಬೆಟ್ಟದಿಂದ ಬಂಡೆಗಳು ಬಿದ್ದಿದ್ದು, ಬಳಿಕ ಯಂತ್ರವು 300 ಮೀಟರ್ ಆಳದ ಕಮರಿಗೆ ಬಿದ್ದಿದೆ.



ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಬುಲ್ಡೋಜರ್ ಚಾಲಕನನ್ನು ಸಕಾಲದಲ್ಲಿ ತಲುಪುವುದು ಸಾಧ್ಯವಾಗಲಿಲ್ಲ. ಆದರೂ ಆತನನ್ನು ಹುಡುಕಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗುಡ್ಡಗಾಡು ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಹೆದ್ದಾರಿಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ಪ್ರವಾಹ, ಭೂಕುಸಿತ ಮತ್ತು ಅಡೆತಡೆಗಳು ಉಂಟಾಗುತ್ತಿವೆ.

ಇದನ್ನೂ ಓದಿ: Peacocks Death: ತುಮಕೂರು ಜಿಲ್ಲೆಯಲ್ಲಿ 19 ನವಿಲುಗಳು ನಿಗೂಢ ಸಾವು

ಈವರೆಗೆ ಮೃತಪಟ್ಟ ಒಟ್ಟು 179 ಮಂದಿಯಲ್ಲಿ 101 ಮಂದಿ ಭೂಕುಸಿತ, ದಿಢೀರ್ ಪ್ರವಾಹ ಮತ್ತು ಸಿಡಿಲು ಸೇರಿದಂತೆ ಮಳೆ ಸಂಬಂಧಿತ ವಿಕೋಪಗಳಿಂದ ಸಾವನ್ನಪ್ಪಿದ್ದಾರೆ ಎಂದು ಹಿಮಾಚಲ ಪ್ರದೇಶ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ತಿಳಿಸಿದೆ. ಉಳಿದಂತೆ 78 ಮಂದಿ ಹವಾಮಾನ ವೈಪರೀತ್ಯ ಮತ್ತು ಹಾನಿಗೊಳಗಾದ ರಸ್ತೆಗಳಿಂದ ಉಂಟಾದ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಇತ್ತೀಚಿನ ಮಾಹಿತಿ ಪ್ರಕಾರ ಜೂನ್ 20ರಿಂದ ಆಗಸ್ಟ್ 2 ರವರೆಗೆ ಉಂಟಾದ ಮಳೆಯಿಂದ ಹಿಮಾಚಲ ಪ್ರದೇಶದಾದ್ಯಂತ ಅಪಾರ ಹಾನಿ ಸಂಭವಿಸಿದೆ.

ವಿದ್ಯಾ ಇರ್ವತ್ತೂರು

View all posts by this author