ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಹೆಡೆ ಎತ್ತಿ ಕುಳಿತ ಬುಸ್ ಬುಸ್ ನಾಗಪ್ಪ; ಶಾಕಿಂಗ್‌ ವಿಡಿಯೊ ಇಲ್ಲಿದೆ

Doctor Startled as Cobra Spotted: ಹಾಸ್ಟೆಲ್‍ವೊಂದರ ಶೌಚಾಲಯದಲ್ಲಿ ನಾಗರಹಾವೊಂದು ಪತ್ತೆಯಾಗಿದ್ದು, ವೈದ್ಯರು ಭೀತಿಗೊಂಡ ಘಟನೆ ಕೋಟದ ಎಂಬಿಎಸ್ ಮತ್ತು ಜೆಕೆ ಲೋನ್ ಆಸ್ಪತ್ರೆಯ ಆವರಣದಲ್ಲಿರುವ ಹಾಸ್ಟೆಲ್‍ನಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಜೈಪುರ: ಹಾಸ್ಟೆಲ್‍ವೊಂದರ ಶೌಚಾಲಯದಲ್ಲಿ ವಿಷಪೂರಿತ ಸರ್ಪ ಪತ್ತೆಯಾದ ಘಟನೆ ರಾಜಸ್ಥಾನ (Rajastan) ದ ಕೋಟ ನಗರದ ನಯಾಪುರ ಪ್ರದೇಶದಲ್ಲಿ ನಡೆದಿದೆ. ಎಂಬಿಎಸ್ ಮತ್ತು ಜೆಕೆ ಲೋನ್ ಆಸ್ಪತ್ರೆಯ ಆವರಣದಲ್ಲಿರುವ ನಿವಾಸಿ ವೈದ್ಯರ ಹಾಸ್ಟೆಲ್‌ಗೆ ಸೆಪ್ಟೆಂಬರ್ 14 ರ ಭಾನುವಾರ ತಡರಾತ್ರಿ ವಿಷಪೂರಿತ ಹಾವೊಂದು ಪ್ರವೇಶಿಸಿದೆ. ಈ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಇದರ ವಿಡಿಯೊ ವೈರಲ್ (Viral Video) ಆಗಿದೆ.

ಹಾವನ್ನು ನೋಡಿ ಅಲ್ಲಿದ್ದ ವೈದ್ಯರು ಭಯಭೀತರಾಗಿ ತಮ್ಮ ಕೋಣೆಗಳಿಂದ ಹೊರಗೆ ಓಡಿ ಬಂದರು. ವಿಷಪೂರಿತ ಕಪ್ಪು ನಾಗರಹಾವು ಶೌಚಾಲಯದ ಕಮೋಡ್ ಮೂಲಕ ಸ್ನಾನಗೃಹದೊಳಗೆ ನುಸುಳಿತ್ತು. ನಾಗರಹಾವು ಶೌಚಾಲಯದ ಪೈಪ್ ಮೂಲಕ ಕಮೋಡ್‌ಗೆ ಪ್ರವೇಶಿಸಿ ನಂತರ ಹಾಸ್ಟೆಲ್ ಕೋಣೆಗೆ ಪ್ರವೇಶಿಸಿದೆ. ಟಾಯ್ಲೆಟ್ ಕಮೋಡ್‍ನಲ್ಲಿ ಹಾವು ಇರುವುದನ್ನು ವಿಡಿಯೊದಲ್ಲಿ ನೋಡಬಹುದು.

ವಿಡಿಯೊದಲ್ಲಿ, ಜೆಟ್ ಸ್ಪ್ರೇ ಸಿಂಪಡಿಸಿದ ನಂತರ ನಾಗರಹಾವು ಜಾರಿಹೋಗಿ ನೆಲದಿಂದ ಹೊರಬರುತ್ತಿರುವುದನ್ನು ಕಾಣಬಹುದು. ಸರೀಸೃಪವನ್ನು ನೋಡಿದ ನಂತರ ಭಯದಿಂದ ಜೆಟ್ ಸ್ಪ್ರೇ ಅನ್ನು ಸಿಂಪಡಿಸಲಾಯಿತು. ಇನ್ನು ಸರೀಸೃಪವನ್ನು ರಕ್ಷಿಸಲು ಉರಗ ರಕ್ಷಕ ಗೋವಿಂದ ಶರ್ಮಾ ಎಂಬುವವರನ್ನು ಕರೆಸಲಾಯಿತು. ಸಾಕಷ್ಟು ಪ್ರಯತ್ನದ ನಂತರ, ಶರ್ಮಾ ಯಶಸ್ವಿಯಾಗಿ ನಾಗರಹಾವನ್ನು ಹಿಡಿದು ಲಾಡ್ಪುರ ಕಾಡಿಗೆ ಬಿಟ್ಟರು. ಅರಣ್ಯ ಇಲಾಖೆ ಅಧಿಕಾರಿ ಕೂಡ ಘಟನೆಯನ್ನು ದೃಢಪಡಿಸಿದ್ದಾರೆ.

ವಿಡಿಯೊ ವೀಕ್ಷಿಸಿ:



ವೈದ್ಯ ಮುದಿತ್ ಶರ್ಮಾ ಎಂಬವರು ಬೆಳಗ್ಗೆ ಶೌಚಾಲಯ ಬಳಸಲು ಹೋದಾಗ ಹಾಸ್ಟೆಲ್ ಕೋಣೆಯಲ್ಲಿ ಹಾವನ್ನು ನೋಡಿ ಭಯಭೀತರಾದರು. ಹಾವು ತನ್ನ ಹೆಡೆಯನ್ನೆತ್ತಿ ಕುಳಿತಿತ್ತು ಎಂದು ಅವರು ಹೇಳಿದರು. ತಕ್ಷಣ ಅವರು ಈ ಪರಿಸ್ಥಿತಿಯ ಬಗ್ಗೆ ಇತರರಿಗೆ ತಿಳಿಸಿದರು. ಹಾವು ಪತ್ತೆಯಾದ ನಂತರ ಹಾಸ್ಟೆಲ್‌ನಲ್ಲಿದ್ದವರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಇನ್ನು ಇತ್ತೀಚೆಗೆ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಬಾಲಕಿಯೊಬ್ಬಳು ತನಗೆ ಪದೇ ಪದೇ ಹಾವು ಕಚ್ಚುತ್ತಿದೆ ಎಂದು ದೂರಿದ್ದಳು. 40 ದಿನಗಳ ಅವಧಿಯಲ್ಲಿ ಕಪ್ಪು ಬಣ್ಣದ ಹಾವೊಂದು ತನಗೆ 13 ಬಾರಿ ಕಚ್ಚಿದೆ ಎಂದು 15 ವರ್ಷದ ಬಾಲಕಿಯೊಬ್ಬಳು ದೂರು ನೀಡಿದ್ದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಬಸ್ತಿ ಭೈಸಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದಿದೆ. ಬಾಲಕಿಯ ಈ ಹೇಳಿಕೆಯಿಂದ ಗ್ರಾಮಸ್ಥರು ಭೀತಿಗೊಂಡಿದ್ದರು. ಅದೇ ಒಂದು ಹಾವು ತನಗೆ ಪದೇ ಪದೇ ಬಂದು ಕಚ್ಚುತ್ತಿದೆ ಎಂದು ಬಾಲಕಿ ಹೇಳಿದ್ದಳು.

ಇದನ್ನೂ ಓದಿ: Viral Video: ನನ್ನನ್ನೇ ಕಚ್ಚುತ್ತೀಯಾ?: ಕುಡಿದ ಮತ್ತಿನಲ್ಲಿ ಕುತ್ತಿಗೆಗೆ ಹಾವು ಸುತ್ತಿಕೊಂಡು ಹುಚ್ಚಾಟ ಮೆರೆದ ವ್ಯಕ್ತಿ