ಹೈದರಾಬಾದ್: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪೋಷಕರು ಶಿಕ್ಷಕನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣ (Telangana)ದ ನಲ್ಗೊಂಡ ಜಿಲ್ಲೆಯ ನಕ್ರೆಕಲ್ ಮಂಡಲದಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ನಡೆದಿದೆ. ಶ್ರೀನಿವಾಸ್ ಎಂಬ ಶಿಕ್ಷಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ (Harassment) ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ವರದಿಗಳ ಪ್ರಕಾರ, ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ಕಿರುಕುಳದ ಬಗ್ಗೆ ತಿಳಿಸಿದ ನಂತರ ಪೋಷಕರು ಸಿಟ್ಟಿಗೆದ್ದಿದ್ದಾರೆ.
ಶಿಕ್ಷಕನ ವರ್ತನೆಯನ್ನು ಸಹಿಸದ ಪೋಷಕರು ಶಾಲೆಯಲ್ಲಿ ಶ್ರೀನಿವಾಸ್ ಮೇಲೆ ಪ್ರತೀಕಾರವಾಗಿ ಹಲ್ಲೆ ನಡೆಸಿದ್ದಾರೆ. ಇಡೀ ಘಟನೆಯ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಘಟನೆಯ ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ, ಪೊಲೀಸರು ಈ ಸಂಬಂಧ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಈ ಘಟನೆಯು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಕಳವಳವನ್ನು ಹುಟ್ಟುಹಾಕಿದೆ. ಕಿರುಕುಳವನ್ನು ತಡೆಗಟ್ಟಲು ಕಟ್ಟುನಿಟ್ಟಾದ ಮೇಲ್ವಿಚಾರಣಾ ಕಾರ್ಯವಿಧಾನಗಳ ತುರ್ತು ಅಗತ್ಯವನ್ನು ಹುಟ್ಟುಹಾಕಿದೆ. ವೈರಲ್ ಆಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.
ವಿಡಿಯೊ ವೀಕ್ಷಿಸಿ:
ಶಾಲಾ ಮಕ್ಕಳಿಗೆ ಚಿತ್ರ ಹಿಂಸೆ ನೀಡಿದ್ದ ಶಿಕ್ಷಕ
ಇತ್ತೀಚೆಗಷ್ಟೇ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಚಿತ್ರಹಿಂಸೆ ನೀಡುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಧ್ಯ ಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿತ್ತು. ವಿಡಿಯೊ ವೈರಲ್ ಆಗುತ್ತಿದ್ದಂತೆ ಶಿಕ್ಷಕನ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು.
ಮಕ್ಕಳ ಮೇಲೆ ನಿಯಮಿತವಾಗಿ ಹಲ್ಲೆ ನಡೆಸುತ್ತಿರುವ ಚೌಧರಿ ವಿರುದ್ಧ ದೂರು ಕೇಳಿಬಂದಿದ್ದವು. ಮಕ್ಕಳ ಪೋಷಕರು ನೀಡುತ್ತಿರುವ ದೂರುಗಳು ಹೆಚ್ಚಾದಂತೆ ಸ್ವಯಂ ನೋಡುವುದಕ್ಕಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಾಕೇಶ್ ಸನೋದಿಯಾ ಶಾಲೆಗೆ ಹಠಾತ್ ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಈ ವೇಳೆ ಚೌಧರಿಯು ವಿದ್ಯಾರ್ಥಿಗಳನ್ನು ದೈಹಿಕವಾಗಿ ಹಿಂಸಿಸುತ್ತಿರುವುದನ್ನು ಕಣ್ಣಾರೆ ನೋಡಿದ್ದಾರೆ. ಅಲ್ಲದೆ ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿತ್ತು.
ಇದನ್ನೂ ಓದಿ: Viral News: ಶಾಲೆಯಿಂದ ಹೊರಗುಳಿದ 300 ವಿದ್ಯಾರ್ಥಿಗಳನ್ನು ಮತ್ತೆ ಕರೆತಂದ ಶಿಕ್ಷಕ; ಪ್ರತಿನಿತ್ಯ 150 ಕಿಮೀ ಪ್ರಯಾಣ!