ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೈಲಿನಲ್ಲಿ ಸೀಟು ಪಡೆಯಲು ಪೆಪ್ಪರ್ ಸ್ಪ್ರೇ- ಯುವತಿಯ ಹುಚ್ಚಾಟಕ್ಕೆ ಪ್ರಯಾಣಿಕರ ಪಾಡನ್ನೊಮ್ಮೆ ನೋಡಿ

Woman Uses Pepper Spray: ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ರೈಲಿನ ಮಹಿಳಾ ಕೋಚ್‌ನಲ್ಲಿ ಸೀಟ್ ಪಡೆಯುವುದಕ್ಕಾಗಿ ಯುವತಿಯೊಬ್ಬಳು ದುರ್ವರ್ತನೆ ತೋರಿದ್ದಾಳೆ. ಲೋಕಲ್ ರೈಲಿನಲ್ಲಿ ಹೆಚ್ಚು ಪ್ರಯಾಣಿಕರಿದ್ದರೂ ಕ್ಯಾರೇ ಎನ್ನದ ಯುವತಿ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದಾಳೆ. ಇದರಿಂದ ಪ್ರಯಾಣಿಕರು ಕಷ್ಟಪಡುವಂತಾಯಿತು.

ಕೋಲ್ಕತ್ತಾ: ಸ್ಥಳೀಯ ರೈಲಿ (local train) ನಲ್ಲಿ ಪ್ರಯಾಣಿಕರು ತುಂಬಿ ತುಳುಕಿದ್ದರಿಂದ, ಸೀಟು ಪಡೆಯುವುದಕ್ಕಾಗಿ ಯುವತಿಯೊಬ್ಬಳು ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದಾಳೆ. ಇದರಿಂದ ರೈಲು ಪ್ರಯಾಣ ಅಸ್ತವ್ಯಸ್ತವಾಯಿತು. ಹಲವಾರು ಪ್ರಯಾಣಿಕರು ಕೆಮ್ಮಿದರು ಮತ್ತು ಉಸಿರಾಡಲು ಕಷ್ಟಪಟ್ಟರು. ಈ ಘಟನೆಯು ಸೀಲ್ಡಾಗೆ ಹೋಗುವ ಸ್ಥಳೀಯ ರೈಲಿನ ಮಹಿಳಾ ಕೋಚ್‍ನಲ್ಲಿ ನಡೆದಿದ್ದು, ಪ್ರಯಾಣಿಕರು ಇದನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ, ಪ್ರಯಾಣಿಕರು ಹಸಿರು ಕುರ್ತಾ ಧರಿಸಿದ ಮಹಿಳೆಯ ಮೇಲೆ ಕೂಗಾಡುತ್ತಿರುವುದನ್ನು ಕಾಣಬಹುದು. ಕಂಪಾರ್ಟ್‌ಮೆಂಟ್‌ನಲ್ಲಿ ಮಕ್ಕಳಿದ್ದಾಗ ಸ್ಪ್ರೇ ಬಳಸಿದ್ದಕ್ಕಾಗಿ ಹಲವರು ಪ್ರಶ್ನಿಸಿದ್ದಾರೆ. ಇಲ್ಲಿ ಮಕ್ಕಳಿದ್ದಾಗ ನೀವು ಹೀಗೆ ಏಕೆ ಮಾಡಿದ್ದೀರಿ? ಎಂದು ಮಹಿಳೆಯೊಬ್ಬರು ಸಿಟ್ಟಿನಲ್ಲಿ ಪ್ರಶ್ನಿಸಿದ್ದಾರೆ.

ವಿಡಿಯೊದೊಂದಿಗೆ ಹಂಚಿಕೊಂಡಿರುವ ವಿವರಗಳ ಪ್ರಕಾರ, ಆ ಯುವತಿ ಸೀಲ್ಡಾದಿಂದ ರೈಲು ಹತ್ತಿದ್ದರು. ಸೀಟಿಗಾಗಿ ಮತ್ತೊಬ್ಬ ಮಹಿಳಾ ಪ್ರಯಾಣಿಕರೊಂದಿಗೆ ಜಗಳವಾಡಿದ್ದರು. ತನಗೆ ಬೇಕಾದ ಸೀಟು ಸಿಗದಿದ್ದಾಗ, ಆಕೆ ಪೆಪ್ಪರ್ ಸ್ಪ್ರೇಯನ್ನು ಹೊರತೆಗೆದು ಇತರ ಪ್ರಯಾಣಿಕರ ಮುಖಕ್ಕೆ ಸಿಂಪಡಿಸಲು ಪ್ರಯತ್ನಿಸಿದರು. ಮತ್ತೊಬ್ಬ ಪ್ರಯಾಣಿಕ ಮಹಿಳೆ ಅವಳನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಇದನ್ನು ಲೆಕ್ಕಿಸದ ಯುವತಿಯು ಕಿಕ್ಕಿರಿದ ಕಂಪಾರ್ಟ್‌ಮೆಂಟ್ ಒಳಗೆ ಕಿರಿಕಿರಿಯುಂಟುಮಾಡುವ ಪೆಪ್ಪರ್ ಸ್ಪ್ರೇಯನ್ನು ಸಿಂಪಡಿಸಿದ್ದಾರೆ.

ವಿಡಿಯೊ ಇಲ್ಲಿದೆ:



ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಕಾರಣ ಎಲ್ಲರೂ ಕೆಮ್ಮಲು ಪ್ರಾರಂಭಿಸಿದರು. ಅವರ ಗಂಟಲು ಮತ್ತು ಮೂಗುಗಳು ಉರಿಯಲು ಪ್ರಾರಂಭಿಸಿದವು. ಇಬ್ಬರು ಮಕ್ಕಳು ಅಸ್ವಸ್ಥರಾಗಲು ಪ್ರಾರಂಭಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಪ್ರಯಾಣಿಕರು ಶೀಘ್ರದಲ್ಲೇ ಯುವತಿಯನ್ನು ಸುತ್ತುವರೆದು ಆಕೆಯ ಅಜಾಗರೂಕ ಕೃತ್ಯಕ್ಕೆ ವಿವರಣೆಯನ್ನು ಕೋರುತ್ತಾ, ಜಗಳವಾಡಿದ್ದಾರೆ. ನಂತರ ಆಕೆಯನ್ನು ರೈಲ್ವೆ ಪೊಲೀಸರಿಗೆ (GRP) ಹಸ್ತಾಂತರಿಸಲಾಯಿತು.

ರೈಲ್ವೆ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಸ್ವಯಂ ರಕ್ಷಣೆಗಾಗಿ ಬಳಸಲಾಗುವ ಪೆಪ್ಪರ್ ಸ್ಪ್ರೇ ಅನ್ನು ಇತರರಿಗೆ ಹಾನಿ ಮಾಡಲು ಎಂದಿಗೂ ಬಳಸಬಾರದು ಎಂದು ಹೇಳಿದ ಪ್ರಯಾಣಿಕರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Viral Video: ಚಲಿಸುವ ರೈಲಿನಲ್ಲಿ ಮೋಜು ಮಾಡಲು ಹೋಗಿ ಕೆಳಗೆ ಬಿದ್ದ ಯುವತಿ; ಈ ವಿಡಿಯೊ ನಿಜವೋ, ನಕಲಿಯೊ?

ನೀವು ನಿಜವಾಗಿಯೂ ಅಸುರಕ್ಷಿತರೆಂದು ಭಾವಿಸುವ ಸುರಕ್ಷತಾ ಉದ್ದೇಶಗಳಿಗಾಗಿ ಪೆಪ್ಪರ್ ಸ್ಪ್ರೇ ಅನ್ನು ಬಳಸಬೇಕು. ಆದರೆ ಈ ಯುವತಿ ತನ್ನ ಮಿತಿಗಳನ್ನು ಮೀರಿದ್ದಾಳೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಲಾಗಿದೆ. ಇಷ್ಟೆಲ್ಲಾ ಮಾಡಿದ ನಂತರ ಅವಳು ಸಂಪೂರ್ಣವಾಗಿ ಕ್ರಿಮಿನಲ್ ಮನಸ್ಸಿನವಳಾಗಿದ್ದಳು. ಅವಳಿಗೆ ತಾನು ತಪ್ಪು ಮಾಡಿದೆ ಎಂಬ ಭಾವನೆಯೇ ಕಾಡಲಿಲ್ಲ ಎಂದು ಪೋಸ್ಟ್‌ನಲ್ಲಿ ಸೇರಿಸಲಾಗಿದೆ.

ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅನೇಕ ಬಳಕೆದಾರರು ಪೆಪ್ಪರ್ ಸ್ಪ್ರೇ ದುರುಪಯೋಗವನ್ನು ಖಂಡಿಸಿದರೆ, ಇತರರು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ನಡವಳಿಕೆಯ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದರು. ಮುಗ್ಧ ಸಾರ್ವಜನಿಕರ ಮೇಲೆ ದಾಳಿ ಮಾಡಲು ಪೆಪ್ಪರ್ ಸ್ಪ್ರೇ ಅನ್ನು ಆಯುಧವಾಗಿ ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಅನುಕೂಲಕ್ಕಾಗಿ, ಕಾನೂನುನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಇದು ಒಂದು ಪ್ರಮುಖ ಉದಾಹರಣೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಈ ಹಿಂಸಾತ್ಮಕ ವರ್ತನೆ ಎಲ್ಲಿಂದ ಬರುತ್ತಿದೆ? ಪಶ್ಚಿಮ ಬಂಗಾಳದಲ್ಲಿ ಪೆಪ್ಪರ್ ಸ್ಪ್ರೇ ಬಳಕೆಯನ್ನು ನಾನು ಕೇಳಿದ್ದು ಇದೇ ಮೊದಲು ಎಂದು ಮತ್ತೊಬ್ಬ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅವಳು ಮಾಡಿದ್ದು ಅಪರಾಧ. ಅವಳನ್ನು ಪೊಲೀಸರಿಗೆ ಒಪ್ಪಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಒಬ್ಬ ಬಳಕೆದಾರರು ಒತ್ತಾಯಿಸಿದ್ದಾರೆ.