ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಹೀಗೊಬ್ಬ ಜೀನಿಯಸ್..!!

ಆಲೂಪ್ರಸಾದ್ ಸಾಕಷ್ಟು ಪ್ರಭಾವಿ ಪುಢಾರಿ ಆಗಿದ್ದರಿಂದ ಹಾಗೂ ಸ್ಪರ್ಧೆಯಿಂದ ಗೆದ್ದ ಹಣ ವನ್ನು ‘ಮೇವು ಸಂಗ್ರಹಣೆ’ ಕಾರ್ಯಕ್ಕೆ ಒಡ್ಡಿಕೊಂಡಿರುವ ಚಾರಿಟಿ ಸಂಸ್ಥೆಯೊಂದಕ್ಕೆ ನೀಡುವು ದಾಗಿ ‘ಆಶ್ವಾಸನೆ’ ನೀಡಿದ್ದರಿಂದ, ಈ ಸಮಾಜಸೇವೆಗೆ ಪೂರಕವಾಗಿರಲಿ ಅಂತ ಸ್ಪರ್ಧೆಯ ನಿಯಮಗಳನ್ನು ಸಡಿಲಿಸಲಾಯಿತು. ಆಲೂಪ್ರಸಾದ್‌ಗೆ ಕೇಳಲಾದ ಪ್ರಶ್ನೆಗಳು, ಆಯ್ಕೆಗೆ ಇದ್ದ ಉತ್ತರಗಳು ಹಾಗೂ ಆಲೂಪ್ರಸಾದ್ ಉತ್ತರಿಸಿದ ಪರಿ ಇವಿಷ್ಟನ್ನೂ ಮುಂದೆ ನೀಡಲಾಗಿದೆ, ಕಣ್ತುಂಬಿಕೊಳ್ಳಿ!!

ಒಮ್ಮೆಮ್ಮೆ ಹೀಗೂ ಆಗುವುದೂ..

ಯಗಟಿ ರಘು ನಾಡಿಗ್

ನಮ್ಮ ಕಥಾನಾಯಕ ಆಲೂಪ್ರಸಾದ್ ಜಾಧವ್ ತಮಗಿದ್ದ ಇನ್ ಫ್ಲುಯೆನ್ಸ್ ಬಳಸಿಕೊಂಡು ಒಮ್ಮೆ ‘ಕನ್ನಡದ ಲಕ್ಷಾಧಿಪತಿ’ ಕಾರ್ಯಕ್ರಮಕ್ಕೆ ನುಗ್ಗಿಬಿಟ್ಟರು. “ನಮಗೂ ಒಂದ್ ಚೇರು ಮಡಗ್ರೀ... ಈ ಆಟದಾಗೆ ನಾವು ಆಡಬಾರ‍್ದಾ?" ಎಂದು ಗತ್ತಿನಲ್ಲಿ ಕೇಳಿದ್ದಕ್ಕೆ ನಖಶಿಖಾಂತ ವಾಗಿ ಬೆವರಿ ಪ್ಯಾಂಟ್ ಒದ್ದೆ ಮಾಡಿಕೊಂಡ ಕಾರ್ಯಕ್ರಮದ ನಿರ್ದೇಶಕರು, ಹಾಟ್ ಸೀಟ್‌ ನಲ್ಲಿ ಅದಾಗಲೇ ಕೂತಿದ್ದ ಸ್ಪರ್ಧಿಗೆ ಲಾಲಿಪಾಪ್ ಕೊಟ್ಟು ಸಂತೈಸಿ ಎಬ್ಬಿಸಿದರು.

ಆಲೂಪ್ರಸಾದ್ ಸಾಕಷ್ಟು ಪ್ರಭಾವಿ ಪುಢಾರಿ ಆಗಿದ್ದರಿಂದ ಹಾಗೂ ಸ್ಪರ್ಧೆಯಿಂದ ಗೆದ್ದ ಹಣವನ್ನು ‘ಮೇವು ಸಂಗ್ರಹಣೆ’ ಕಾರ್ಯಕ್ಕೆ ಒಡ್ಡಿಕೊಂಡಿರುವ ಚಾರಿಟಿ ಸಂಸ್ಥೆಯೊಂದಕ್ಕೆ ನೀಡುವುದಾಗಿ ‘ಆಶ್ವಾಸನೆ’ ನೀಡಿದ್ದರಿಂದ, ಈ ಸಮಾಜಸೇವೆಗೆ ಪೂರಕವಾಗಿರಲಿ ಅಂತ ಸ್ಪರ್ಧೆಯ ನಿಯಮಗಳನ್ನು ಸಡಿಲಿಸಲಾಯಿತು. ಆಲೂಪ್ರಸಾದ್‌ಗೆ ಕೇಳಲಾದ ಪ್ರಶ್ನೆಗಳು, ಆಯ್ಕೆಗೆ ಇದ್ದ ಉತ್ತರಗಳು ಹಾಗೂ ಆಲೂಪ್ರಸಾದ್ ಉತ್ತರಿಸಿದ ಪರಿ ಇವಿಷ್ಟನ್ನೂ ಮುಂದೆ ನೀಡಲಾಗಿದೆ, ಕಣ್ತುಂಬಿಕೊಳ್ಳಿ!!

ಇದನ್ನೂ ಓದಿ: Yagati Raghu Naadig Column: ಹೀಗೊಬ್ಬ ಮಹಾನ್‌ ಜ್ಞಾನಿ !

1) ನೂರು ವರ್ಷಗಳ ಯುದ್ಧವು ಎಷ್ಟು ದೀರ್ಘವಾಗಿ ನಡೆಯಿತು?

ಅ) 116 ಆ) 99

ಇ) 100 ಈ) 150

(ಈ ಪ್ರಶ್ನೇನೇ ಎಗರಿಸಿಬಿಡ್ರೀ ಅಂದರು ನಮ್ಮ ಆಲೂ! ಈ ಕಾರಣದಿಂದ ಅವರಿಗೆ ಅಂಕ ಸಿಗಲಿಲ್ಲ).

2) ‘ಪನಾಮಾ’ ಟೋಪಿಗಳನ್ನು ಯಾವ ದೇಶದಲ್ಲಿ ತಯಾರಿಸಲಾಗುತ್ತದೆ?

ಅ) ಬ್ರೆಜಿಲ್ ಆ) ಚಿಲಿ ಇ) ಪನಾಮಾ ಈ) ಈಕ್ವೆಡಾರ್

(ಈ ಪ್ರಶ್ನೆಗೆ ಉತ್ತರ ಪಡೆಯಲೆಂದು ‘ಫೋನ್ -ಎ- ಫ್ರೆಂಡ್’ ಹೆಲ್ಪ್‌ಲೈನ್ ಪಡೆದು ತಮ್ಮ ಪತ್ನಿಗೆ ಆಲೂ ಪ್ರಸಾದ್ ಫೋನ್ ಮಾಡಿದರಾದರೂ, ಆಕೆ ಉತ್ತರಿ ಸುವುದರೊಳಗೆ 30 ಸೆಕೆಂಡ್ ಮುಗಿದೇಹೋಯಿತು. ಹೀಗಾಗಿ ಉತ್ತರಿಸುವ ಭಾಗ್ಯ ಮಿಸ್ಸಾಯಿತು).

3) ಪೆಸಿಫಿಕ್ ಸಾಗರದಲ್ಲಿರುವ ಕ್ಯಾನರಿ ದ್ವೀಪಗಳನ್ನು ಯಾವ ಪ್ರಾಣಿಯ ಹೆಸರನ್ನು ಆಧರಿಸಿ ಇಡಲಾಗಿದೆ?

ಅ) ಕ್ಯಾನರಿ ಪಕ್ಷಿ ಆ) ಕಾಂಗರೂ ಇ) ನಾಯಿಮರಿ ಈ) ಇಲಿ

(ಈ ಪ್ರಶ್ನೆಗೆ ‘ಆಡಿಯೆನ್ಸ್ ಪೋಲ್’ ಹೆಲ್ಪ್ ಲೈನ್ ಪಡೆದ ಆಲೂ, ಸ್ಡುಡಿಯೋದಲ್ಲಿ ಹಾಜ ರಿದ್ದ ಪ್ರೇಕ್ಷಕರ ನೆರವನ್ನು ಕೇಳಿದರಾದರೂ, ಅಲ್ಲಿ ಸೇರಿದ್ದವರೆಲ್ಲಾ ಆಲೂಪ್ರಸಾದರ ವಿರೋಧಿಗಳೇ ಆಗಿದ್ದರಿಂದ ‘ವೋಟಿಂಗ್ ಮೀಟರ್’ ಅನ್ನು ಯದ್ವಾತದ್ವಾ ಒತ್ತಿದರು. ಹೀಗಾಗಿ ಆಲೂಪ್ರಸಾದ್‌ಗೆ ಸರಿಯುತ್ತರ ಗೊತ್ತಾಗದೆ ಉತ್ತರಿಸಲಾಗಲಿಲ್ಲ).

4) ಈ ಕೆಳಗಿನವುಗಳಲ್ಲಿ ರಾಜ 4ನೇ ಜಾರ್ಜ್‌ನ ಮೊದಲ ಹೆಸರು ಯಾವುದು?

ಅ) ಈಡರ್ ಆ) ಜಾರ್ಜ್ ಇ) ಆಲ್ಬರ್ಟ್ ಈ) ಮನೋಯೆಲ್

(ಈ ಪ್ರಶ್ನೇನಾ ‘ಫ್ಲಿಪ್’ ಮಾಡ್ರೀ ಸಾಕು ಎಂದು ಅಬ್ಬರಿಸಿದರು ಆಲೂಪ್ರಸಾದ್. ಇಷ್ಟಾಗಿ ಯೂ ಮತ್ತೊಂದಕ್ಕೆ ಅವರಿಗೆ ಉತ್ತರ ಗೊತ್ತಾಗಲಿಲ್ಲ).

5) ‘ಅಕ್ಟೋಬರ್ ಕ್ರಾಂತಿ’ಯ ಆಚರಣೆಯನ್ನು ರಷ್ಯನ್ನರು ಯಾವ ತಿಂಗಳಲ್ಲಿ ಮಾಡುತ್ತಾರೆ?

ಅ) ಜನವರಿ ಆ) ಫೆಬ್ರವರಿ ಇ) ಅಕ್ಟೋಬರ್ ಈ) ನವೆಂಬರ್

(ಇದ್ಯಾಕೋ ತೀರಾ ಅತಿಯಾಯ್ತು. ನನ್ನ ‘ Generator Knowledge’ಗೆ ಇದು ಹೊಂದು ವುದಿಲ್ಲ ಎಂದು ಗೊಣಗಿಕೊಂಡೇ ಆಲೂಪ್ರಸಾದ್ ಸದರಿ ಸ್ಪರ್ಧೆಯಿಂದ ‘ಕ್ವಿಟ್’ ಮಾಡಿ ಬಿಟ್ಟರು..!!).

ಓಹೋಹೋ, ನಿಮ್ಮ ಬುದ್ಧಿವಂತಿಕೆಗೆ ನೀವೇ ಬೆನ್ನು ತಟ್ಟಿಕೊಳ್ಳುತ್ತಾ, ಮೇಲಿನ ಪ್ರಶ್ನೆಗಳಿಗೆ ಉತ್ತರಿಸಲಾಗದ ನಮ್ಮ ಆಲೂ ಪ್ರಸಾದರನ್ನು ಗೇಲಿ ಮಾಡುತ್ತಿದ್ದೀರಾ? ಈ ಐದೂ ಪ್ರಶ್ನೆ ಗಳ ಸರಿಯಾದ ಉತ್ತರಗಳನ್ನು ಒಮ್ಮೆ ನೋಡಿ:

೧) ನೂರು ವರ್ಷಗಳ ಯುದ್ಧವು 1337ರಿಂದ 1453ರವರೆಗೆ ಒಟ್ಟು 116 ವರ್ಷಗಳ ಕಾಲ ನಡೆಯಿತು.

೨) ಪನಾಮಾ ಟೋಪಿಗಳನ್ನು ಈಕ್ವೆಡಾರ್‌ನಲ್ಲಿ ತಯಾರಿಸಲಾಗುತ್ತದೆ.

೩) ಕ್ಯಾನರಿ ದ್ವೀಪಗಳಿಗೆ ನಾಯಿಮರಿ ಹೆಸರನ್ನು ಆಧರಿಸಿ ಇಡಲಾಗಿದೆ. ‘ಇನ್

ಸುಲೇರಿಯಾ ಕ್ಯಾನರಿಯಾ’ ಎಂಬ ಲ್ಯಾಟಿನ್ ಹೆಸರಿನ ಅರ್ಥ ‘ಗಂಡು ನಾಯಿಮರಿಗಳ ದ್ವೀಪಗಳು’ ಅಂತ..!

೪) ರಾಜ 4ನೇ ಜಾರ್ಜ್‌ನ ಮೊದಲ ಹೆಸರು- ‘ಆಲ್ಬರ್ಟ್’. ಇದನ್ನು ಆತ 1936ರಲ್ಲಿ ಬದಲಿಸಿಕೊಂಡ.

೫) ಅಕ್ಟೋಬರ್ ಕ್ರಾಂತಿಯ ಆಚರಣೆಯನ್ನು ನವೆಂಬರ್‌ನಲ್ಲಿ ಮಾಡಲಾಗುತ್ತದೆ. ಇನ್ಮೇಲೆ ನಮ್ ಆಲೂಪ್ರಸಾದ್ ಜಾಧವ್ ಜಿಯನ್ನು ಯಾರಾದ್ರೂ ರೇಗಿಸಿದ್ರೆ.. ಹುಷಾರ್.!!